ಹಾಸನ: ಅಸ್ಸಾಂನಿಂದ ಬರುತ್ತಿರುವ ಕೂಲಿ ಕಾರ್ಮಿಕರನ್ನು ಕುರಿಗಳನ್ನು ತುಂಬಿದಂತೆ ಗೂಡ್ಸ್ ವಾಹನದಲ್ಲಿ ಹಾಸನಕ್ಕೆ ಕರೆತರುತ್ತಿದ್ದು, ಈ ಬಗ್ಗೆ ಸ್ಥಳೀಯರು ಆತಂಕ ಹೊರಹಾಕುತ್ತಿದ್ದಾರೆ.
Advertisement
ಕಾಫಿ ತೋಟ ಸೇರಿದಂತೆ ಇನ್ನಿತರ ಕೂಲಿ ಕೆಲಸ ಮಾಡಲು ಹಾಸನಕ್ಕೆ ಕೂಲಿ ಕಾರ್ಮಿಕರು ಆಗಮಿಸುತ್ತಿದ್ದಾರೆ. ಇದೇ ರೀತಿ ಗೂಡ್ಸ್ ಗಾಡಿಯಲ್ಲಿ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುವಾಗ ಅರಕಲಗೂಡು ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ವಾಹನ ಸವಾರರ ಮೇಲೆ ಹಿರೇಹಳ್ಳಿ ಟೋಲ್ ಗೇಟ್ ಸಿಬ್ಬಂದಿ ಗೂಂಡಾಗಿರಿ
Advertisement
Advertisement
ಹಾಸನ ಜಿಲ್ಲೆಯ ಜನ ಈಗಾಗಲೇ ಕೊರೊನಾದಿಂದ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಲಾಕ್‍ಡೌನ್ ನಂತರ ಬಹುತೇಕ ಜಿಲ್ಲೆಗಳನ್ನು ಬೇಗ ಅನ್‍ಲಾಕ್ ಮಾಡಿದ್ರು ಕೂಡ ಹಾಸನ ಜಿಲ್ಲೆಗೆ ತಡವಾಗಿ ರಿಲೀಫ್ ಸಿಕ್ಕಿತ್ತು. ಇದನ್ನೂ ಓದಿ: ನಾಗಮಂಗಲದ ಸರ್ಕಾರಿ ಕಾಲೇಜಿನ 28 ವಿದ್ಯಾರ್ಥಿನಿಯರಿಗೆ ಕೊರೊನಾ
Advertisement
ಕೂಲಿ ಕೆಲಸಕ್ಕೆ ಬರುವವರು ಕೊರೊನಾ ನೆಗೆಟಿವ್ ವರದಿ ತರುತ್ತಿದ್ದಾರ? ಅಥವಾ ಲಸಿಕೆ ಹಾಕಿಸಿಕೊಂಡಿದ್ದಾರ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಹೀಗಾಗಿ ಹೊರರಾಜ್ಯದಿಂದ ಯಾರೇ ಬಂದರೂ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಲಿ. ಈ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಆದೇಶ ಹೊರಡಿಸಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.