– ಕನಕಗಿರಿ ಕನಕಾಚಲಪತಿ ಹುಂಡಿಯಲ್ಲಿ 4.61 ಲಕ್ಷ ಸಂಗ್ರಹ
ಕೊಪ್ಪಳ: ಜಿಲ್ಲೆಯ ಹುಲಗಿ ಗ್ರಾಮದ ಹುಲಿಗೆಮ್ಮ ಹಾಗೂ ಕನಕಗಿರಿ ಪಟ್ಟಣದ ಕನಕಾಚಲಪತಿ ದೇವಸ್ಥಾನಗಳ ಹುಂಡಿ ಎಣಿಕೆ ಕಾರ್ಯ ಗುರುವಾರ ನಡೆದಿದೆ.
ಹುಲಿಗೆಮ್ಮ ದೇವಸ್ಥಾನದ ಹುಂಡಿಯಲ್ಲಿ ಕಳೆದ 2024ರ ಡಿ.21 ರಿಂದ ಇಲ್ಲಿಯವರೆಗೆ ಒಟ್ಟು 64,93,500 ರೂ. ಮೊತ್ತ ಸಂಗ್ರಹವಾಗಿದೆ. ಜೊತೆಗೆ ಹುಂಡಿಯಲ್ಲಿ 50ಗ್ರಾಂ ಚಿನ್ನ, 3,500 ಗ್ರಾಂ ಬೆಳ್ಳಿ ಸಂಗ್ರಹವಾಗಿದ್ದು, ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ ಮಾಡಲಾಯಿತು.ಇದನ್ನೂ ಓದಿ: ಅಸ್ತಿ ವಿಸರ್ಜನೆಯಿಂದ ಕಾವೇರಿ ನದಿ ಮಲಿನ – ವೈಜ್ಞಾನಿಕವಾಗಿ ಅಸ್ತಿ ಬಿಡಲು ಯೋಜನೆ ರೂಪಿಸುವಂತೆ ಕೋರ್ಟ್ ನಿರ್ದೇಶನ
ಹುಂಡಿ ಎಣಿಕೆ ಕಾರ್ಯಲಯದಲ್ಲಿ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಹೆಚ್.ಪ್ರಕಾಶರಾವ್, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಹಿಟ್ನಾಳ ಶಾಖೆಯ ವ್ಯವಸ್ಥಾಪಕ ಶಂಕರಪ್ಪ, ಸೂಚಪ್ಪ, ಹುಲುಗಪ್ಪ, ವಿಶ್ವನಾಥ ಶೆಟ್ಟಿ, ದೇವಸ್ಥಾನದ ಸಿಬ್ಬಂದಿ ಸುಮಾ.ಡಿ, ವಿರೇಶ್ ಶಿಲ್ಪಿ, ಸುರೇಶ್ ಬಂಡಾರಿ, ಪ್ರಕಾಶ ಹುರಳಿ, ದಿನೇಶ ಪಾಟೀಲ್, ವಿಜಯಕುಮಾರ, ಮಂಜುನಾಥ, ಸುನೀಲ್ ಕುಮಾರ ಹಾಜರಿದ್ದು, ಹುಂಡಿ ಎಣಿಕೆ ಕಾರ್ಯ ನಿರ್ವಹಿಸಿದರು.
ಇನ್ನೂ ಕನಕಗಿರಿ ಪಟ್ಟಣದ ಐತಿಹಾಸಿಕ ಕನಕಾಚಲಪತಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ದೇವಸ್ಥಾನದಲ್ಲಿ ನಡೆಯಿತು. ಕಳೆದ 70 ದಿನದಲ್ಲಿ ಒಟ್ಟು 4,61,800 ರೂ. ಹಣ ಸಂಗ್ರಹವಾಗಿದ್ದು, ಎಸ್‌ಬಿಐ ಬ್ಯಾಂಕ್ ಗೆ ಜಮಾ ಮಾಡಲಾಯಿತು ಎಂದು ಗ್ರೇಡ್ 2 ತಹಸೀಲ್ದಾರ್ ವಿ.ಹೆಚ್ ಹೊರಪೇಟೆ ತಿಳಿಸಿದ್ದಾರೆ. ಶಿರಸ್ತೇದಾರ ಅನಿತಾ, ತಹಶೀಲ್ದಾರ್ ಕಚೇರಿ ಸಿಬ್ಬಂದಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಾಗರಾಜ ತಗ್ಗಿಹಾಳ, ಸದಸ್ಯರಾದ ಕೀರ್ತಿ ಸೋನಿ, ವೆಂಕಟೇಶ ಸೌದ್ರಿ, ಬಿವಿ ಜೋಶಿ ಇದ್ದರು.ಇದನ್ನೂ ಓದಿ: ಕ್ಯಾಬ್ ಬುಕ್ ಮಾಡಿದ್ದ ಯುವತಿಗೆ ಲೈಂಗಿಕ ಕಿರುಕುಳ – ಕಮ್ಮನಹಳ್ಳಿಯಲ್ಲಿ ಕಾಮುಕರ ಅಟ್ಟಹಾಸ!