ಕೋಲ್ಕತ್ತಾ: ಶುಕ್ರವಾರ ಕೋಲ್ಕತ್ತಾದ (Kolkatta) ಮಾಲ್‌ನಲ್ಲಿ ಭಾರೀ ಅಗ್ನಿ ಅವಘಡ (Massive Fire) ಸಂಭವಿಸಿದ್ದು ಹಲವು ಮಂದಿ ಒಳಗಡೆ ಸಿಲುಕಿದ್ದಾರೆ ಎಂದು ವರದಿಯಾಗಿದೆ.
ಆಕ್ರೊಪೊಲಿಸ್ ಮಾಲ್‌ನಲ್ಲಿ (Acropolis Mall) ಬೆಂಕಿ ಕಾಣಿಸಿಕೊಂಡಿದ್ದು, 10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿವೆ. ಇದನ್ನೂ ಓದಿ: ದರ್ಶನ್ ಇರೋ ಠಾಣೆಗೆ ಶಾಮಿಯಾನ ಹಾಕಿದ್ದರ ಹಿಂದಿನ ಸೀಕ್ರೆಟ್ ರಿವೀಲ್
Watch: A massive fire breaks out at Acropolis Mall in Kolkata. No casualties have been reported so far. More details awaited pic.twitter.com/8WTjXlMCPI
— IANS (@ians_india) June 14, 2024
ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮಾಲ್ ಒಳಗೆ ಇರುವ ಜನರನ್ನು ಸುರಕ್ಷಿತವಾಗಿ ಖಾಲಿ ಮಾಡಿಸುತ್ತಿದ್ದಾರೆ. ಬೆಂಕಿಗೆ ನಿಖರ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ಇದನ್ನೂ ಓದಿ: ಕೋಳಿ ಎಸೆದಂತೆ ಎಸೆದು ಟ್ರಕ್‌ಗೆ ಗುದ್ದಿ, ಸಿಕ್ಕ ಸಿಕ್ಕ ವಸ್ತುಗಳಲ್ಲಿ ಹೊಡೆದು ಹತ್ಯೆ
ಈ ವಾರ ಕೋಲ್ಕತ್ತಾದಲ್ಲಿ ಸಂಭವಿಸುತ್ತಿರುವ ಎರಡನೇ ಘಟನೆ ಇದಾಗಿದೆ. ಮಂಗಳವಾರ ಮುಂಜಾನೆ, ಕೋಲ್ಕತ್ತಾದ ಪಾರ್ಕ್ ಸ್ಟ್ರೀಟ್ ಪ್ರದೇಶದ ರೆಸ್ಟೋರೆಂಟ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು.