ಮೈಸೂರು: ವಿಶ್ವ ವಿಖ್ಯಾತ ಮೈಸೂರು ಅರಮನೆ (Mysuru Palace) ಕಳಪೆ ನಿರ್ವಹಣೆಗೆ ಮತ್ತೊಂದು ಘಟನೆ ಸೇರ್ಪಡೆಯಾಗಿದೆ.
ಅರಮನೆ ದರ್ಬಾರ್ ಹಾಲ್ ಸೋರಿದ್ದು ಆಯ್ತು, ವರಹಾ ದ್ವಾರದಲ್ಲಿ ಕಟ್ಟಡ ಮೇಲ್ಛಾವಣಿ ಕುಸಿದ್ದಿದ್ದೂ ಆಯ್ತು.. ಈಗ ಜಯರಾಮ-ಬಲರಾಮ ದ್ವಾರದ ಗೋಡೆಯಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿದೆ.
ಅಲ್ಲದೇ ಜಯರಾಮ ದ್ವಾರಕ್ಕೆ ಹೊಂದಿಕೊಂಡಿರುವ ಒಂಟೆರಾಮಾಚಾರ್ಯ ಆಂಜನೇಯ ದೇವಸ್ಥಾನದ ಕಟ್ಟಡ ಬಿರುಕು ಬಿಟ್ಟಿದೆ. ಬಿರುಕಿನ ಜಾಗದಲ್ಲಿ 20ಕ್ಕೂ ಹೆಚ್ಚು ಇಟ್ಟಿಗೆಗಳು ಕೆಳಗೆ ಬಿದ್ದಿದ್ದು ಕಟ್ಟಡ ಬಿರುಕಿನಿಂದ ಕಿಟಕಿಗೆಗೆ ಹಾನಿಯಾಗಿದೆ. ಯಾವುದೇ ಕ್ಷಣದಲ್ಲಿ ಗೋಡೆ ಕುಸಿದು ಬೀಳುವ ಪರಿಸ್ಥಿತಿಯಲ್ಲಿ ಇದೆ.
ಇದೇ ಕಟ್ಟಡದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ನಡೆಯುತ್ತಿತ್ತು. ಕಟ್ಟಡ ಶಿಥಿಲವಾದ ಹಿನ್ನೆಲೆ ಕಚೇರಿ ಸ್ಥಳಾಂತರ ಗೊಂಡಿದೆ. ನಿತ್ಯ ಸಾವಿರಾರು ಪ್ರವಾಸಿಗರು ಮೈಸೂರು ಅರಮನೆ ನೋಡಲು ಬರುತ್ತಾರೆ. ಆದಾಯ ಮಾತ್ರ ನೋಡುವ ಅಧಿಕಾರಿಗಳು, ನಿರ್ವಹಣೆ ಮಾಡದಿರುವುದೇ ವಿಪರ್ಯ್ಯಾಸ.


