ಬಳ್ಳಾರಿ: ಹುಬ್ಬಳ್ಳಿಯಲ್ಲಿನ ಗಲಭೆ ಹಲಾಲ್ ಪ್ರಚೋದಿತ ಘಟನೆಯೇ? ವೋಟಿಗಾಗಿ ಜೊಲ್ಲು ಸುರಿಸುವವರು ಇದಕ್ಕೂ ಹಲಾಲ್ ಸರ್ಟಿಫಿಕೇಟ್ ಕೊಡ್ತಾರಾ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ವಿಜನಯನಗರದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಕೆಲವು ಮತಗಳು ತಮ್ಮ ಮತಾಂಧತೆಯನ್ನು ತೋರಿಸುವುದಕ್ಕೇ ಭಯ ಹುಟ್ಟಿಸುತ್ತಾರೆ. ಇದು ಅವರ ತಂತ್ರಗಾರಿಕೆಯ ಭಾಗ. ಶೇ.15 ರಷ್ಟಿದ್ದ ಕಲ್ಲು 40ರಷ್ಟು ಹೆಚ್ಚಾಗಿದೆ ಅಂದರೆ, ಅರ್ಥ ಮಾಡಿಕೊಳ್ಳಬೇಕು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿನಿಮೀಯ ರೀತಿ ದರೋಡೆಕೋರನನ್ನೇ ಹಿಡಿದ ಮನೆಯವರು
Advertisement
Advertisement
ಇತ್ತೀಚೆಗೆ ರಾಮನವಮಿ ಮೆರವಣಿಗೆ ವೇಳೆ ಜಾರ್ಖಂಡ್, ಗುಜರಾತ್, ರಾಜಾಸ್ಥಾನ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಗಲಭೆ ಎಬ್ಬಿಸಿ, ಕಲ್ಲು ತೂರಾಟ ನಡೆಸಿದ್ದವರೇ, ಪೂರ್ವ ನಿಯೋಜಿತವಾಗಿ ಇಲ್ಲಿ ಗಲಭೆ ನಡೆಸಿದ್ದಾರೆ ಎಂದು ಪೊಲೀಸರು ವರದಿ ನೀಡಿದ್ದಾರೆ ಎಂದಿದ್ದಾರೆ.
Advertisement
ಇವರು ಸಣ್ಣ-ಸಣ್ಣ ಸಂಗತಿಗಳಿಗೆ ಯಾಕೆ ಕೆರಳುತ್ತಾರೆ? ವಿವಾದಾತ್ಮಕ ಸ್ಟೇಟಸ್ ಹಾಕಿದ್ದರೆ, ಅವನ ವಿರುದ್ಧ ದೂರು ಕೊಡಲಿ. ಕಾನೂನು ಇದೆ, ಕ್ರಮ ಕೈಗೊಳ್ಳುತ್ತದೆ. ಇವರೇಕೆ ಕಾನೂನು ಕೈಗೆತ್ತಿಕೊಳ್ಳುತ್ತಾರೆ? ಜಾತ್ಯಾತೀಯ ಎನ್ನುವವರು ಈಗ್ಯಾಕೆ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಗೃಹಸಚಿವರು ಚತ್ರಿ ಆಗಬೇಕು – ಯತ್ನಾಳ್ ಕುಟುಕಿದ್ದೇಕೆ?
Advertisement
7ನೇ ಶತಮಾನದಿಂದಲೂ ಇಂತಹ ಘಟನೆ ನಡೆಯುತ್ತಲೇ ಬಂದಿದೆ. ಒಂದು ಕೋಮು ವ್ಯವಸ್ಥಿತ ರೀತಿಯಲ್ಲಿ ಸಂಚು ಮಾಡುತ್ತಿದ್ದು, ದೇಶದಲ್ಲಿ ಹರಾಜಕತೆ ಹುಟ್ಟುಹಾಕುತ್ತಿದೆ. ದಂಗೆ ಎಬ್ಬಿಸಿ ಜನರನ್ನು ಭಯಡಿಸುತ್ತಾರೆ, ಕೊನೆಗೆ ರಕ್ಷಣೆಗೆ ಸಂವಿಧಾನವೇ ಬೇಕೆಂದು ಓಡಿ ಬರ್ತಾರೆ? ಅವರಿಗೆ ಏನು ಮಾಡಬೇಕು? ಎಂದು ಪ್ರಶ್ನಿಸಿದ ಅವರು, ಸಮುದಾಯದ ಮುಖಂಡರೇ ಈ ಬಗ್ಗೆ ತಿಳುವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.