– ಫೆಬ್ರವರಿ 2ರಿಂದ ವಿಮಾನಯಾನ ಶುರು
ಹುಬ್ಬಳ್ಳಿ: ಹುಬ್ಬಳ್ಳಿ- ಪುಣೆ- ಹುಬ್ಬಳ್ಳಿ ಮಾರ್ಗವಾಗಿ ಇನ್ನು ವಾರಕ್ಕೆ ನಾಲ್ಕು ವಿಮಾನಗಳು (Flight) ನಿರಂತರವಾಗಿ ಸಂಚರಿಸಲಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಮಾಹಿತಿ ನೀಡಿದ್ದಾರೆ.
Advertisement
ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಅವರ ಪ್ರಸ್ತಾವನೆ ಮೇರೆಗೆ ಕೇಂದ್ರ ವಿಮಾನಯಾನ ಸಚಿವಾಲಯ ಹುಬ್ಬಳ್ಳಿ- ಪುಣೆ-ಹುಬ್ಬಳ್ಳಿ ಮಾರ್ಗವಾಗಿ ವಿಮಾನ ಸಂಚಾರ ಆರಂಭಕ್ಕೆ ಕ್ರಮ ಕೈಗೊಂಡಿದೆ. ಇದನ್ನೂ ಓದಿ: ಕೇರಳದ ಶ್ರೀಕೃಷ್ಣ ದೇವಾಲಯದಲ್ಲಿ ಪ್ರಧಾನಿ ಮೋದಿ ಪ್ರಾರ್ಥನೆ
Advertisement
Advertisement
2024 ಫೆಬ್ರವರಿ 2ರಿಂದ ಈ ವಾಯು ಮಾರ್ಗದಲ್ಲಿ ನಾಲ್ಕು ವಿಮಾನಗಳು ಸಂಚಾರ ಪುನರಾರಂಭ ಮಾಡಲಿವೆ ಎಂದು ಸಚಿವ ಪ್ರಹ್ಲಾದ್ ಜೋಶಿ ಅವರು ಟ್ವೀಟ್ (Tweet) ಮಾಡಿದ್ದಾರೆ. ಇದನ್ನೂ ಓದಿ: ಶ್ರೀರಾಮನ ಶಕ್ತಿ, ಹನುಮನ ಭಕ್ತಿಯ ಕೆಣಕಿದ ರಾವಣನೇ ಉಳಿಯಲಿಲ್ಲ, ರಾಜಣ್ಣ ಯಾವ ಲೆಕ್ಕ? – ಬಿಜೆಪಿ ತಿರುಗೇಟು
Advertisement
ತಮ್ಮ ಕೋರಿಕೆ- ಪ್ರಸ್ತಾವನೆ ಪರಿಗಣಿಸಿ ಹುಬ್ಬಳ್ಳಿ- ಪುಣೆ- ಹುಬ್ಬಳ್ಳಿ ಮಾರ್ಗವಾಗಿ ವಿಮಾನ ಸಂಚಾರ ಆರಂಭಿಸಿದ್ದಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಇಂಡಿಗೋ 6eಯ ಆಡಳಿತ ಮಂಡಳಿಗೆ ಸಚಿವ ಪ್ರಹ್ಲಾದ್ ಜೋಶಿ ಅವರು ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಮುದ್ದಹನುಮೇಗೌಡ ಕಾಂಗ್ರೆಸ್ ಸೇರ್ಪಡೆ ದಿನಾಂಕ ಹೈಕಮಾಂಡ್ ತೀರ್ಮಾನ ಮಾಡುತ್ತೆ: ಸಚಿವ ಪರಮೇಶ್ವರ್