– ನಾಳೆ ಮದ್ಯದಂಗಡಿಗೆ ಪೂಜೆ ಸಲ್ಲಿಸಲು ಸಿದ್ಧತೆ
ಹುಬ್ಬಳ್ಳಿ: ಲಾಕ್‍ಡೌನ್ ಜಾರಿಯಾದ ದಿನದಿಂದಲೂ ಎಣ್ಣೆ ಸಿಗದೆ ಪರದಾಡಿದ ಕುಡುಕರು ನಾಳೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ರಾಜ್ಯ ಸರ್ಕಾರ ಮೇ 4ರಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದು, ಕುಡುಕರಲ್ಲಿ ಸಂಭ್ರಮ ಮನೆ ಮಾಡಿದೆ.
ಹೀಗಾಗಿ ಮದ್ಯಪ್ರಿಯರು ನಗರದ ಕಾಟನ್ ಮಾರ್ಕೆಟ್ ನಲ್ಲಿ ಸ್ವತ ತಾವೇ ಮುಂದೆ ನಿಂತು ಬಾರ್‍ಗಳಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಾಟನ್ ಮಾರ್ಕೆಟ್‍ನ ಎಂಎಸ್‍ಐಎಲ್ ಮುಂದೆ ನೂಕುನುಗ್ಗಲು ಆಗದಂತೆ ತಾವೇ ಕಟ್ಟಿಗೆಯ ಬ್ಯಾರಿಕೇಡ್ ಗಳನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ.
Advertisement
Advertisement
ಸರತಿ ಸಾಲಿನಲ್ಲಿ ನಿಂತುಕೊಳ್ಳಲು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಬಾಕ್ಸ್ ಗಳನ್ನು ಹಾಕುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ನಾಳೆಯ ದಿನವನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲು ಹಾಗೂ ಯಾವುದೇ ಗೊಂದಲ ಸೃಷ್ಟಿಯಾಗದಂತೆ ನೋಡಿಕೊಳ್ಳಲು ಕುಡುಕರು ಸಿದ್ಧತೆ ನಡೆಸಿದ್ದಾರೆ. ಬೆಳಗ್ಗೆ ಎಂಎಸ್‍ಐಎಲ್ ಪ್ರಾರಂಭವಾಗುತ್ತಿದಂತೆ ಪೂಜೆ ಸಲ್ಲಿಸುವ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದಾರೆ.