ಹುಬ್ಬಳ್ಳಿ: ಅನಧಿಕೃತವಾಗಿ ಹುಕ್ಕಾ ಮಾರಾಟ ಹಾಗೂ ಸೇವನೆಗೆ ಅವಕಾಶ ಕಲ್ಪಿಸಿದ್ದ ಅಂಗಡಿ ಮೇಲೆ ಪಾಲಿಕೆಯ ಆರೋಗ್ಯಾಧಿಕಾರಿಗಳು ದಾಳಿ ನಡೆಸಿ ಐದು ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಹುಬ್ಬಳ್ಳಿಯ ವಿದ್ಯಾನಗರದಲ್ಲಿನ ಅರ್ಬನ್ ರೂಟ್ಸ್ ಅಂಗಡಿಯಲ್ಲಿ ಅನಧಿಕೃತವಾಗಿ ಹುಕ್ಕಾ ಮಾರಾಟ ಮಾಡಲಾಗುತ್ತಿತ್ತು. ಅಲ್ಲದೆ ಅಂಗಡಿಯಲ್ಲೇ ಹುಕ್ಕಾ ಸೇವನೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳು 5 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 15 ಹುಕ್ಕಾ ಪೈಪ್, 20 ಹುಕ್ಕಾ ಸ್ಟ್ಯಾಂಡ್, ವಿವಿಧ ಫ್ಲೇವರ್ಸ್ ನ ವಿಸಲಾ ಪೈಪ್ ಗಳನ್ನು ವಶಪಡಿಸಿಕೊಂಡಿದ್ದಾರೆ.
Advertisement
ಕೇಶ್ವಾಪುರದ ಜಯಶೀಲ ಬಾಲ್ಮಿ, ನರೇಂದ್ರ ತಿಕಂದರ ಮಾಲೀಕತ್ವದ ಅರ್ಬನ್ ರೂಟ್ಸ್ ಹೆಸರಿನಲ್ಲಿ ಅಂಗಡಿ ತೆರದು ಅನಧಿಕೃತವಾಗಿ ಹುಕ್ಕಾ ಮಾರಾಟ ಮಾಡುತ್ತಿದ್ದರು. ಈ ಹುಕ್ಕಾ ಶಾಪಿನಲ್ಲಿ ಪ್ರತಿನಿತ್ಯ ನೂರಾರು ಕಾಲೇಜು ವಿದ್ಯಾರ್ಥಿಗಳು ಹುಕ್ಕಾ ಸೇವೆನೆ ಮಾಡುತ್ತಿದ್ದರು.
Advertisement
ಹುಕ್ಕಾ ಸೇವನೆ ಹಾಗೂ ಮಾರಾಟದ ಬಗ್ಗೆ ಸ್ಥಳೀಯರು ಪೊಲೀಸ್ ಇಲಾಖೆ ಹಾಗೂ ಪಾಲಿಕೆಯ ಆರೋಗ್ಯಾಧಿಕರಿಗಳಿಗೆ ದೂರು ನೀಡಿದ್ದರು. ಹೀಗಾಗಿ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ಅಂಗಡಿ ಜಪ್ತಿ ಮಾಡಿ ಕಾನೂನು ಕ್ರಮ ಮುಂದುವರೆಸಿದ್ದಾರೆ.