ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಪಕ್ಷೇತರ ಸದಸ್ಯೆ ದುರ್ಗಮ್ಮ ಬಿಜವಾಡ ಮರಳಿ ಬಿಜೆಪಿ ಆಗಮಿಸುವುದು ಬಹುತೇಕ ಖಚಿತವಾಗಿದೆ.
Advertisement
ವಾರ್ಡ್ ನಂಬರ್ 69 ರಲ್ಲಿ ಗೆಲುವು ಸಾಧಿಸಿರುವ ಪಕ್ಷೇತರ ಅಭ್ಯರ್ಥಿ ದುರ್ಗಮ್ಮ ಬಿಜವಾಡ ಪತಿ ಶಶಿಕಾಂತ್ ಬಿಜವಾಡ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಮೂಲಕ ಬಿಜೆಪಿ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಪಾಲಿಕೆ ಗದ್ದುಗೆ ಹಿಡಿಯುವುದು ಖಚಿತವಾಗಿದೆ. ಇದನ್ನೂ ಓದಿ: ಆಪರೇಷನ್ ಕಲಬುರಗಿ: ಖರ್ಗೆ, ದೇವೇಗೌಡರು ಚರ್ಚಿಸಿದ್ದಾರೆ ಎಂದ ಡಿ.ಕೆ. ಶಿವಕುಮಾರ್
Advertisement
Advertisement
ದುರ್ಗಮ್ಮ ಪತಿ ಶಶಿಕಾಂತ್ ಬಿಜವಾಡ ಅವರು ಪ್ರದೀಪ್ ಶೆಟ್ಟರ್ ಆತ್ಮೀಯರು. 15 ವರ್ಷಗಳಿಗೂ ಅಧಿಕ ಕಾಲ ಬಿಜೆಪಿಯಲ್ಲೇ ಕಾರ್ಯನಿರ್ವಹಿಸಿದ್ದ ಶಶಿಕಾಂತ ಅವರು ಬಿಜೆಪಿ ಟಿಕೆಟ್ ದೊರೆಯದ ಕಾರಣ ತಮ್ಮ ಪತ್ನಿ ದುರ್ಗಮ್ಮ ಅವರನ್ನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದರು. ವಾರ್ಡ್ ನಂಬರ್ 69 ರಲ್ಲಿ ದುರ್ಗಮ್ಮ ಅವರು ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಕೊಟ್ಟ ಮಾತು ಉಳಿಸಿಕೊಂಡ ಸಿಎಂ – ಶಿಗ್ಗಾಂವಿ ಅಜ್ಜಿ ಮನೆಗೆ ಡಿಸಿ ಭೇಟಿ, 3 ತಿಂಗಳಲ್ಲಿ ಮನೆ ಭರವಸೆ
Advertisement
ಸದ್ಯ ಉಪಮೇಯರ್ ಸ್ಥಾನ ಪರಿಶಿಷ್ಠ ಜಾತಿ ಮಹಿಳೆಗೆ ಮೀಸಲಾಗಿದ್ದು ಈ ಮೀಸಲಿಗೆ ಅರ್ಹರಾದ ಪಾಲಿಕೆ ಸದಸ್ಯರು ಬಿಜೆಪಿಯಲ್ಲಿ ಯಾರೂ ಇಲ್ಲ. ಅಲ್ಲದೇ ದುರ್ಗಮ್ಮ ಶಶಿಕಾಂತ ಬಿಜವಾಡ ಅವರು ಈ ಮೀಸಲಿಗೆ ಅರ್ಹರಾಗಿದ್ದಾರೆ. ಹೀಗಾಗಿ ಎಂಎಲ್‍ಸಿ ಪ್ರದೀಪ ಶೆಟ್ಟರ್ ಹಾಗೂ ಶಶಿಕಾಂತ್ ಭೇಟಿ ಹಿನ್ನೆಲೆಯಲ್ಲಿ ದುರ್ಗಮ್ಮ ಅವರು ಬಿಜೆಪಿಗೆ ಬರುವುದು ಬಹುತೇಕ ಖಚಿತವಾಗಿದ್ದು, ದುರ್ಗಮ್ಮ ಬಿಜವಾಡರಿಗೆ ಉಪಮೇಯರ್ ಸ್ಥಾನ ಖಚಿತವಾಗಿದೆ.