ಹುಬ್ಬಳ್ಳಿ: ಕಳೆದ ಎರಡು ತಿಂಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಕೋಮು ಗಲಭೆಯ ಆರೋಪಿಗಳು ಜೈಲಿಗೆ ಹೋದ ವೇಗದಲ್ಲೇ ವಾಪಸ್ ಜಾಮೀನು ಪಡೆದು ಹೊರಗಡೆ ಬರುತ್ತಿದ್ದಾರೆ. ಈ ಆರೋಪಿಗಳ ವಿರುದ್ಧ ಉತ್ತರ ಪ್ರದೇಶ ಮಾದರಿ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
Advertisement
ದೇಶದಲ್ಲಿ ಕೋಮು ಗಲಭೆಯಿಂದ ನಷ್ಟವಾದ ಸಾರ್ವಜನಿಕ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಲು ಮತ್ತು ನಷ್ಟ ಉಂಟುಮಾಡಿದವರನ್ನು ಮಟ್ಟಹಾಕಲು ಉತ್ತರ ಪ್ರದೇಶ ಇತ್ತೀಚಿನ ದಿನಗಳಲ್ಲಿ ಮಾದರಿಯಾಗಿದೆ. ಬುಲ್ಡೋಜರ್ ಬಾಬಾ ಎಂದೇ ಪ್ರಸಿದ್ಧವಾಗಿ ಸಿಎಂ ಯೋಗಿ ಆದಿತ್ಯನಾಥ್, ಕೋಮು ಹೆಸರಿನಲ್ಲಿ ದಾಂದಲೇ ಮಾಡುವ ದುಷ್ಟರಿಗೆ ತಕ್ಕ ಶಾಸ್ತಿ ಮಾಡುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಇತ್ತೀಚಿಗೆ ನಡೆದ ಮುಸ್ಲಿಂ ಸಮುದಾಯದ ಉಗ್ರರೂಪದ ಪ್ರತಿಭಟನೆ. ಪ್ರವಾದಿಗಳ ಮೇಲೆ ವಿವಾದಾತ್ಮಕ ಹೇಳಿಕೆ ಖಂಡಿಸಿ ನಡೆದ ಪ್ರತಿಭಟನೆ ಹಿಂಸಾಚಾರ ಪಡೆದುಕೊಂಡಿತ್ತು. ಇದನ್ನೆ ಬಂಡವಾಳ ಮಾಡಿಕೊಂಡ ಕೆಲ ಮತಾಂದರು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದರು. ಇದಕ್ಕೆ ತಕ್ಕ ಶಾಸ್ತಿ ಮಾಡಲು ಗಲಭೆಯ ಮಾಸ್ಟರ್ ಮೈಂಡ್ ಮನೆಗೆ ಬುಲ್ಡೋಜರ್ ನುಗ್ಗಿಸಲಾಗಿದೆ. ಇಂತಹ ಕ್ರಮ ನಮ್ಮ ರಾಜ್ಯದಲ್ಲಿ ಜಾರಿಯಾಗಿಬೇಕೆಂಬ ಆಗ್ರಹ ಸಹ ಕೇಳಿಬರುತ್ತಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯಲ್ಲಿ ಪೊಲೀಸರ ಹತ್ಯೆಗೆ ಸಂಚು- ಅಟ್ಟಾಡಿಸಿ ಕೊಲ್ಲಲು ಮುಂದಾಗಿದ್ದ ಗಲಭೆಕೋರರು
Advertisement
Advertisement
ಕಳೆದ ಎರಡು ತಿಂಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಕೋಮು ಗಲಭೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ ಹಾನಿಯಾಗಿದೆ. ಜೊತೆಗೆ ಪೊಲೀಸ್ ಅಧಿಕಾರಿಗಳಿಗೂ ಸಹ ದಾಳಿಯಾಗಿದೆ. ವಿಪರ್ಯಾಸವೆಂದರೆ ಹಾನಿ ಮಾಡಿದವರ ಮೇಲೆ ಸರಿಯಾದ ಕ್ರಮ ಒಂದುಕಡೆ ಇರಲಿ, ಜೈಲಿಗೆ ಹೋದ ವೇಗದಲ್ಲೇ ಆರೋಪಿಗಳು ವಾಪಸ್ ಜಾಮೀನು ಪಡೆದು ಹೊರಗಡೆ ಬರುತ್ತಿದ್ದಾರೆ. ಇಂತಹ ದುಷ್ಟ ಶಕ್ತಿಗಳ ಮಟ್ಟ ಹಾಕಲು ಯೋಗಿ ಮಾದರಿಯೇ ಸರಿ ಎನ್ನುವ ಆಗ್ರಹ ಹುಬ್ಬಳ್ಳಿಯಲ್ಲಿ ಕೇಳಿ ಬರುತ್ತಿದೆ. ಹುಬ್ಬಳ್ಳಿಯಲ್ಲಿ ಉಂಟಾದ ನಷ್ಟದ ಮೌಲ್ಯವನ್ನು 35 ರಿಂದ 40 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಬರ್ತ್‍ಡೇ ಪಾರ್ಟಿ ಮುಗಿಸಿ ಮನೆಗೆ ಬಂದ ಯುವತಿ ಮೇಲೆ ಸ್ನೇಹಿತನಿಂದಲೇ ಅತ್ಯಾಚಾರ
Advertisement
ಅಂಕಿ ಅಂಶದ ಪ್ರಕಾರ:
ಕಟ್ಟಡಗಳ ಹಾನಿ – ದೇವಸ್ಥಾನ 1, ಪೊಲೀಸ್ ಠಾಣೆ 1, ಆಸ್ಪತ್ರೆ 1 ಮತ್ತು ಮನೆಗಳು 3 – ಅಂದಾಜು ಮೊತ್ತ- 5 ಲಕ್ಷ ರೂ., ವಾಹನಗಳು – ಪೊಲೀಸ್ ಅಧಿಕಾರಿ ಜೀಪ್ 5 , ನಿವಾಸಿಗಳ ಕಾರ್ 2, ವಾಹನ ಸವಾರರ ಬೈಕ್ 5 – ಅಂದಾಜು ಮೊತ್ತ – 25 ಲಕ್ಷ ರೂ., ಗಾಯಗೊಂಡವರು – ಪೊಲೀಸ್ ಅಧಿಕಾರಿಗಳು 5, ಕಾನ್ಸ್‌ಟೇಬಲ್ 7, ವಾಹನ ಸವಾರರು 3 – ಆಸ್ಪತ್ರೆ ಖರ್ಚು – 5 ಲಕ್ಷ ರೂ.