ಹುಬ್ಬಳ್ಳಿ: ಇಲ್ಲಿನ ಗಲಭೆ ಸಂಬಂಧ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಾಗುತ್ತಿವೆ. ಗಲಭೆ ವೇಳೆ ಉದ್ರಿಕ್ತರ ಗುಂಪು ಇಬ್ಬರು ಪೊಲೀಸ್ ಕಾನ್ಸ್ ಟೇಬಲ್‍ಗಳ ಹತ್ಯೆಗೆ ಪ್ರಯತ್ನಿಸಿದೆ. ಆದರೆ ಅದೃಷ್ಟವಶಾತ್ ಆ ಇಬ್ಬರು ಪೊಲೀಸರು ಪ್ರಾಣಾಯದಿಂದ ಪಾರಾಗಿದ್ದಾರೆ.
Advertisement
ಕಬಾಸ್‍ಪೇಟೆ ಠಾಣೆಯ ಅನಿಲ್ ಖಾಂಡೇಕರ್ ಮತ್ತು ಮಂಜುನಾಥ್ ನೀಡಿರುವ ದೂರಿನ ಆಧಾರದ ಮೇಲೆ ಕಬಾಸ್‍ಪೇಟೆ ಠಾಣೆಯಲ್ಲಿ ಎಫ್‍ಐಆರ್ ನಮೂದಾಗಿದೆ. ಮಾರ್ಚ್ 16ರ ರಾತ್ರಿ ಗಲಾಟೆ ವಿಚಾರ ತಿಳಿದು ಹಳೇ ಹುಬ್ಬಳ್ಳಿ ಠಾಣೆ ಕಡೆಗೆ ಬೈಕಲ್ಲಿ ತೆರಳುವಾಗ ದಿಡ್ಡಿ ಓಣಿ ಹನುಮಪ್ಪನ ಗುಡಿ ಬಳಿ 100ರಿಂದ 150 ಜನರಿದ್ದ ಉದ್ರಿಕ್ತರ ಗುಂಪು ನಮ್ಮ ಬೈಕ್ ತಡೆದು, ನಿಂದಿಸುತ್ತಾ ಹಲ್ಲೆಗೆ ಯತ್ನಿಸಿತು. ಇದನ್ನೂ ಓದಿ: ಮಸೀದಿ ಮೈಕ್ ವಿರುದ್ಧ ಕ್ರಮಕ್ಕೆ ಡೆಡ್‍ಲೈನ್- ರಂಜಾನ್ ಒಳಗೆ ತೆರವಾಗದಿದ್ರೆ ಮಹಾ ಆರತಿ ಎಚ್ಚರಿಕೆ
Advertisement
Advertisement
ಪ್ರವಾದಿ ಅಪಮಾನಿಸಿದ ಆರೋಪಿಯನ್ನು ಏಕೆ ಇನ್ನೂ ಬಂಧಿಸಿಲ್ಲ ಎಂದು ಅವಾಜ್ ಹಾಕಿದ್ರು. ಕೊನೆಗೆ ನಾವು ಬೈಕ್ ಬಿಟ್ಟು ಸ್ವಲ್ಪ ಮುಂದೆ ಹೋದಾಗ, ಇವ್ರನ್ನು ಬಿಡಬ್ಯಾಡ ಕೊಲ್ರಿ ಎಂಬ ಧ್ವನಿ ಕೇಳಿಬಂತು. ಇದರಿಂದ ಪ್ರಚೋದನೆಗೊಂಡ ಐದಾರು ಮಂದಿ ಪುಂಡರು, ಕೊಲೆ ಮಾಡುವ ಉದ್ದೇಶದಿಂದಲೇ ನಮ್ಮ ಮೇಲೆ ಸೈಜು ಗಲ್ಲು ಎಸೆದ್ರು. ಇದ್ರಿಂದ ನಾವು ತಪ್ಪಿಸಿಕೊಂಡೆವು. ಇದೇ ಕೋಪದಲ್ಲಿ ನಮ್ಮ ಬೈಕ್‍ನ ಪೆಟ್ರೋಲ್ ಟ್ಯಾಂಕ್ ಮೇಲೆ ಕಲ್ಲು ಹಾಕಿದ್ದಾರೆ ಅಂತ ಪೊಲೀಸರು ಠಾಣೆಗೆ ದೂರು ಕೊಟ್ಟಿದ್ದಾರೆ. ಈ ಮಧ್ಯೆ, ಮಾರ್ಚ್ 16ರ ರಾತ್ರಿ, 20ಕ್ಕೂ ಹೆಚ್ಚು ಮಂದಿಯಿದ್ದ ಉದ್ರಿಕ್ತರ ಗುಂಪು ಪೊಲೀಸ್ ಜೀಪ್ ಉರುಳಿಸುವ ದೃಶ್ಯಗಳು ಹೊರಗೆ ಬಂದಿವೆ.
Advertisement
ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂದೆ ಪೊಲೀಸ್ ಕಾರು ಹತ್ತಿ ನಿಂತು ಪ್ರಚೋದನಕಾರಿ ಹೇಳಿಕೆ ನೀಡಿದ್ದವನು ಮೌಲ್ವಿಯಲ್ಲ. ಆತ ಮೌಲ್ವಿ ವೇಷದಲ್ಲಿದ್ದ ಲಾರಿ ಚಾಲಕ ವಾಸೀಂ ಎಂಬ ವಿಚಾರ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಇತ್ತೀಚಿಗೆ ಮೌಲ್ವಿ ವೇಷ ಹಾಕಿದ್ದ ವಾಸೀಂ ಪ್ರಚೋದನಾಕಾರಿ ಭಾಷಣಗಳ ಮೂಲಕ ಹಿಂಬಾಲಕರ ಸಂಖ್ಯೆ ಹೆಚ್ಚಿಸಿಕೊಂಡಿದ್ದ ಎನ್ನಲಾಗಿದೆ. ಸದ್ಯ ಈ ವಾಸಿಂ ಎಲ್ಲಿದ್ದಾನೆ ಎನ್ನುವುದು ಪೊಲೀಸರಿಗೆ ಗೊತ್ತಾಗಿಲ್ಲ. ಹೈದ್ರಾಬಾದ್‍ನಲ್ಲಿ ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಮನೆ ಕೆಡವಲು ಬುಲ್ಡೋಜರ್ ಬಳಸಿ: ರಾಘವ್ ಛಡ್ಡಾ
ಅತ್ತ ಈಗಾಗಲೇ 200ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಪೊಲೀಸ್ರು, 115 ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದವರನ್ನು ಬಿಟ್ಟು ಕಳಿಸಿದ್ದಾರೆ. ಆದರೆ ತಲೆಮರೆಸಿಕೊಂಡಿರುವ ಇನ್ನಷ್ಟು ಪುಂಡರ ಪತ್ತೆಗೆ ಪೊಲೀಸರು ಮೂರು ಸೂತ್ರ ಅನುಸರಿಸ್ತಿದ್ದಾರೆ. ಈ ಮಧ್ಯೆ ಹುಬ್ಬಳ್ಳಿಯಲ್ಲಿ ಏಪ್ರಿಲ್ 23ರವರೆಗೂ ನಿಷೇಧಾಜ್ಞೆಯನ್ನು ಪೊಲೀಸ್ ಇಲಾಖೆ ವಿಸ್ತರಿಸಿದೆ.