ಹುಬ್ಬಳ್ಳಿ: ನಗರದ ಗಲಭೆ ಪ್ರಕರಣದ ಮಾಸ್ಟರ್ ಮೈಂಡ್ ಮೌಲ್ವಿ ವಾಸೀಂ ಪಠಾಣ್‍ನನ್ನು ಇಂದು ಪೊಲೀಸರು ಕೋರ್ಟ್‍ಗೆ ಹಾಜರುಪಡಿಸಲಿದ್ದಾರೆ.
ಮೌಲ್ವಿಯ ಪೊಲೀಸ್ ಕಸ್ಟಡಿ ಇಂದಿಗೆ (ಬುಧವಾರ) ಅಂತ್ಯವಾದ ಹಿನ್ನೆಲೆ ಆತನನ್ನು ಪೊಲೀಸರು ಹುಬ್ಬಳ್ಳಿಯ 4ನೇ ಹೆಚ್ಚುವರಿ ನ್ಯಾಯಾಲಕ್ಕೆ ಹಾಜರುಪಡಿಸಲಿದ್ದಾರೆ. ಖಾಕಿ ಪಡೆಯು ಆತನನ್ನ 11 ಗಂಟೆಗೆ ಕೋರ್ಟ್‍ಗೆ ಕರೆತರಲಿದೆ. ಈಚೆಗೆ ಹಳೇ ಹುಬ್ಬಳ್ಳಿ ಪೊಲೀಸರು ಏ.21ರಂದು ಈತನನ್ನು ಕೋರ್ಟ್‍ಗೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಲಯವು ವಿಚಾರಣೆಗಾಗಿ 5 ದಿನ ಪೊಲೀಸ್ ಕಸ್ಟಡಿಗೆ ನೀಡಿತ್ತು. ಇದನ್ನೂ ಓದಿ: ಪತ್ನಿ ಸಂಬಳ ನೀಡದಿದ್ದಕ್ಕೆ ಶಿಕ್ಷಣ ಇಲಾಖೆಯ ಮಹಿಳಾ ಅಧಿಕಾರಿ ಮೇಲೆ ಪತಿಯಿಂದ ಹಲ್ಲೆ
ಪೊಲೀಸರು ವಾಸೀಂ ಮತ್ತು ಆತನ ಸಹಚರರನ್ನೂ ಮತ್ತೆ 5 ದಿನ ಕಸ್ಟಡಿಗೆ ಕೇಳಲಿದ್ದಾರೆ. ಆರೋಪಿ ವಾಸೀಂ ಪಠಾಣ್, ಈ ಹಿಂದೆ ಹುಬ್ಬಳ್ಳಿ ಗಲಭೆಗೆ ಸಂಬಂಧಪಟ್ಟಂತೆ ಪ್ರಚೋದನಾಕರಿ ವೀಡಿಯೋ ರಿಲೀಸ್ ಮಾಡಿದ ಕೆಲವೇ ಗಂಟೆಗಳಲ್ಲಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದ. ವಾಸೀಂ ವೀಡಿಯೋ ರಿಲೀಸ್ ಮಾಡುತ್ತಿದ್ದಂತೆ ಹುಬ್ಬಳ್ಳಿ ಕೇಶ್ವಾಪೂರ ಠಾಣೆ ಇನ್ಸ್‌ಪೆಕ್ಟರ್ ಜಗದೀಶ್ ಹಂಚಿನಾಳ ತಂಡವು ಕಾರ್ಯಾಚರಣೆ ನಡೆಸಿ ಮುಂಬೈನಲ್ಲಿ ಆರೋಪಿಯನ್ನು ಬಂಧಿಸಿ ಕರೆತರಲಾಗಿತ್ತು. ಇದನ್ನೂ ಓದಿ: ರಥೋತ್ಸವದಲ್ಲಿ ವಿದ್ಯುತ್ ತಗುಲಿ ಇಬ್ಬರು ಮಕ್ಕಳು ಸೇರಿ 11 ಮಂದಿ ದುರ್ಮರಣ