ಹುಬ್ಬಳ್ಳಿ: ಆರು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ನಗರದ ದೀಪಾ ಕಿರಣ ಬದ್ದಿ ಎಂಬ ಗೃಹಿಣಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಎರಡು ಬಾರಿ ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿದ್ದ ಪಾಲಕರ ಅರ್ಜಿಯನ್ನು 1 ನೇ ಜಿಎಂಎಫ್‌ಸಿ ನ್ಯಾಯಾಲಯ ಪುರಸ್ಕರಿಸಿದೆ. ಆರೋಪಿ ಪತಿ ಸೇರಿ ಐವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆದೇಶಿಸಿದೆ. ಹೀಗಾಗಿ ಪೊಲೀಸರು ತೆರೆ ಎಳೆಯಲು ಮುಂದಾಗಿದ್ದ ಪ್ರಕರಣಕ್ಕೆ ಈ ಮೂಲಕ ಮರುಜೀವ ಬಂದಿದೆ.
ದೀಪಾಳ ಸಾವಿಗೆ ಆಕೆಯ ಪತಿ ಸೊರಬದಮಠ ಗಲ್ಲಿಯ ಕಿರಣ ವಿಠಲಸಾ ಬದ್ದಿ, ವಿಠಲಸಾ ಬದ್ದಿ, ಜಯಶ್ರೀ ಬದ್ದಿ, ರಾಜು ಬದ್ದಿ, ಹಾಗೂ ವಿನಯಾ ಹಬೀಬ ಕಾರಣ ಎಂದು ದೀಪಾಳ ಪಾಲಕರು ಸಾಕ್ಷಿ ಸಮೇತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಸರ್ಕಾರಿ ಬಸ್‍ನಲ್ಲಿ ಇಬ್ಬರು ಮಕ್ಕಳ ಜನನ – ಗಿಫ್ಟ್ ಆಗಿ ಸಿಕ್ತು ಜೀವನಪರ್ಯಂತ ಉಚಿತ ಪಾಸ್
Advertisement
Advertisement
ಪ್ರಕರಣದ ವಿಚಾರಣೆ ನಡೆಸಿದ ಹುಬ್ಬಳ್ಳಿಯ 1 ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ತ್ರಿವೇಣಿ ಈರಗಾರ ಅವರು, ಈ ಐವರು ಆರೋಪಿಗಳು ದೀಪಾಳ ಕೊಲೆಗೆ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದಾರೆ. ಸತತ ಆರು ವರ್ಷಗಳ ಹೋರಾಟದ ಬಳಿಕ ನ್ಯಾಯಾಲಯದ ಆದೇಶದಂತೆ, ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಪಿರ್ಯಾದಿದಾರರ ಪರವಾಗಿ ವಕೀಲರಾದ ಎಸ್.ಎಂ.ಬಡಸ್ಕರ, ಎಲ್.ಎಚ್.ಇಂಗಳಹಳ್ಳಿ, ಎಂ.ಎಂ.ಹಳ್ಳಿ ವಾದ ಮಂಡಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಗೆ ಕಚ್ಚಿದ ಕೋತಿ- ಸೊಳ್ಳೆ ಪರದೆ ಸಹಾಯದಿಂದ ಸೆರೆ
Advertisement
ನ್ಯಾಯಾಲಯದ ಮೊರೆ
ಹಳೇಹುಬ್ಬಳ್ಳಿ ಸುಭಾಷ ನಗರದ ನಿವಾಸಿ ಹೀರಾಲಾಲ ಕಾಟವೆ ಅವರು 2014 ರಲ್ಲಿ ನಗರದ ಸೊರಬದಮಠ ಗಲ್ಲಿ ನಿವಾಸಿ ಕಿರಣ ವಿಠಲಸಾ ಬದ್ದಿ ಜೊತೆ ತಮ್ಮ ಮಗಳು ದೀಪಾಳ ಮದುವೆ ಮಾಡಿದ್ದರು. ನಂತರ ದೀಪಾಳಿಗೆ ಹೆಣ್ಣು ಮಗು ಜನಿಸಿತ್ತು. ಡಿಸೆಂಬರ್ 2 , 2015 ರಂದು ದೀಪಾ ಮೃತಪಟ್ಟಿದ್ದಳು. ಈ ಸಾವಿಗೆ ದೀಪಾಳ ಪತಿ ಕಿರಣ ಬದ್ದಿ ಹಾಗೂ ಕುಟುಂಬದವರು ಕಾರಣ ಎಂದು ಹೀರಾಲಾಲ ಕಾಟವೆ ಅವರು ಶಹರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ತನಿಖೆ ನಡೆಸಿದ್ದ ಅಂದಿನ ಪೊಲೀಸ್ ಇನ್‌ಸ್ಪೆಕ್ಟರ್ ಶ್ಯಾಮರಾವ್ ಸಜ್ಜನ ಅವರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು.
Advertisement
ಈ ತನಿಖೆ ನ್ಯಾಯಸಮ್ಮತವಾಗಿಲ್ಲವೆಂದು ಪ್ರಶ್ನಿಸಿ ಹೀರಾಲಾಲ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಕರಣದ ತನಿಖೆ ನಡೆಸಲು ಅಂದಿನ ಶಹರ ಠಾಣೆ ಇನ್‌ಸ್ಪೆಕ್ಟರ್ ಗಿರೀಶ ಬೋಜನವರಗೆ ಆದೇಶಿಸಿತ್ತು. ಅವರು ಮತ್ತೊಮ್ಮೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಇದನ್ನೂ ಪ್ರಶ್ನಿಸಿ ಹೀರಾಲಾಲ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗಾಗಿ ನ್ಯಾಯಾಲಯದ ಹೀರಾಲಾಲರ ಅರ್ಜಿ ಪುರಸ್ಕರಿಸಿ ಮತ್ತೊಮ್ಮೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಮೊಕದ್ದಮೆ ದಾಖಲಿಸಲು ಆದೇಶಿಸಿದೆ.