– ಸಿದ್ಧಾರೂಢರ ನೆಲದಲ್ಲಿ ಶ್ರೀ ರಾಮೇಶ್ವರನ ದರ್ಶನಕ್ಕೆ ಪ್ರಹ್ಲಾದ್ ಜೋಶಿ ಸಂಕಲ್ಪ
ಹುಬ್ಬಳ್ಳಿ: ಮಹಾಶಿವರಾತ್ರಿ (Maha Shivaratri) ದಿನ ಶಂಕರನ ಆರಾಧಕರಿಗೆ ಅಯೋಧ್ಯೆ ಶ್ರೀರಾಮ ಮಂದಿರ (Ram Mandir) ಮಾದರಿಯಲ್ಲಿ ಶ್ರೀ ರಾಮೇಶ್ವರ ಶಿವಲಿಂಗ ದರ್ಶನ ಭಾಗ್ಯ ಕರುಣಿಸಲು ಹುಬ್ಬಳ್ಳಿ (Hubballi) ಸಜ್ಜುಗೊಂಡಿದೆ.
Advertisement
ವಾಣಿಜ್ಯ ನಗರಿ ಹುಬ್ಬಳ್ಳಿ ಶಿವರಾತ್ರಿಯಂದು ಭೋಲೆ ಶಂಕರನನ್ನು ವಿಭಿನ್ನ ರೀತಿಯಲ್ಲಿ ಸ್ತುತಿಸಲು ಸಜ್ಜಾಗುತ್ತಿದೆ. ಹುಬ್ಬಳ್ಳಿ ದೇಶಪಾಂಡೆ ನಗರದ ಜಿಮ್ ಖಾನ ಮೈದಾನದಲ್ಲಿ ಅದ್ಧೂರಿ ತಯಾರಿ ನಡೆದಿದ್ದು, ದಿನವಿಡೀ ಶಿವಸ್ಮರಣೆ ಕಾರ್ಯಕ್ರಮ ನಡೆಯಲಿದೆ.
Advertisement
ಹಿಂದುಗಳ ಪವಿತ್ರ ಕ್ಷೇತ್ರ ಅಯೋಧ್ಯಾ ಶ್ರೀರಾಮ ಮಂದಿರದ ಮಾದರಿಯಲ್ಲೇ ಶ್ರೀ ರಾಮೇಶ್ವರ ಶಿವಲಿಂಗ ಮಂಟಪ ಮತ್ತು ಬೃಹತ್ ಗಾತ್ರದ ಶಿವನ ಮೂರ್ತಿ, ಲಿಂಗ ಅತ್ಯಾಕರ್ಷಕವಾಗಿ ಭಕ್ತ ಗಣವನ್ನು ಸೆಳೆಯುವಂತಿದೆ.
Advertisement
Advertisement
ಶಿವ-ಸಂಗೀತ ಸಮ್ಮಿಲನ:
ಮೂರುಸಾವಿರ ಮಠ, ಸಿದ್ಧಾರೂಢ, ಮುರುಘರಾಜೇಂದ್ರರಂಥ ತಪೋ ಶಿವಯೋಗಿಗಳ, ಶಿವಶರಣರ ನಾಡಿನಲ್ಲಿ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿ ಹೊರಹೊಮ್ಮಲಿದೆ. ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್, ಪುಟ್ಟರಾಜ ಗವಾಯಿ ಅವರಂಥ ಸಂಗೀತ ದಿಗ್ಗಜರ ನೆಲದಲ್ಲಿ ಮಹಾ ಶಿವರಾತ್ರಿಯಂದು ಶಿವ-ಸಂಗೀತ ಸಮ್ಮಿಲನ ಎಂಬಂತೆ ಅಯೋಧ್ಯೆ ಮಾದರಿ ಶ್ರೀ ರಾಮೇಶ್ವರ ಶಿವಲಿಂಗ ದರ್ಶನದ ಜೊತೆಗೆ ಶಿವಸ್ಮರಣೆ ಸಂಗೀತ ಕಾರ್ಯಕ್ರಮವೂ ಭಕ್ತರಿಗೆ ಆಹ್ಲಾದಕರವಾಗಿರಲಿದೆ.
ಪ್ರಹ್ಲಾದ್ ಜೋಶಿ ಸಂಕಲ್ಪ:
ಅಯೋಧ್ಯೆ ಮಾದರಿಯಲ್ಲಿ ಶ್ರೀ ರಾಮೇಶ್ವರ ಶಿವಲಿಂಗ ಪ್ರತಿಷ್ಠಾಪನೆ ಮೂಲಕ ಮಹಾಶಿವರಾತ್ರಿಯಂದು ಅವಳಿ ನಗರದ ಸರ್ವ ಶಿವಭಕ್ತರಿಗೆ ಶಿವನ ದರ್ಶನ ಮತ್ತು ಶಿವನಾಮ ಸ್ಮರಣೆಯಲ್ಲಿ ತೊಡಗಿಸಬೇಕೆಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರ ಸಂಕಲ್ಪ ಈಗ ಈಡೇರುತ್ತಿದೆ.
ಅಯೋಧ್ಯೆ (Ayodhya) ಮಾದರಿ ರಾಮೇಶ್ವರನನ್ನು ಪ್ರತಿಷ್ಠಾಪನೆ ಜೊತೆಗೆ ಝಗಮಗಿಸುವ ವಿದ್ಯುತ್ ದೀಪಾಲಂಕಾರ ಸಹ ಮಾಡಲಾಗಿದೆ. ಭಕ್ತರಿಗೆ ಅಹೋರಾತ್ರಿ ಪ್ರಸಾದ ವಿನಿಯೋಗ ಮತ್ತು ಉಚಿತವಾಗಿ ಪಂಚಮುಖಿ ರುದ್ರಾಕ್ಷಿ ವಿತರಣೆ ವ್ಯವಸ್ಥೆ ಕಲ್ಪಿಸಲಾಗಿದೆ.
ಶಿವರಾತ್ರಿ ದಿನ ಮಾ.8ರ ಬೆಳಗ್ಗೆ ಹಿರೇಮಠದ ಪಂಡಿತ ರುದ್ರಮುನಿ ಮಹಾಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಮಹಾಶಿವನ ಪೂಜಾ ಕೈಂಕರ್ಯ ನೆರವೇರಲಿದೆ.
ಪ್ರಹ್ಲಾದ್ ಜೋಶಿ ಅವರಿಂದ ಸಂಗೀತ-ಶಿವನಾಮ ಸ್ಮರಣೆ ಉದ್ಘಾಟನೆ:
ಶುಕ್ರವಾರ ಸಂಜೆ 6:30ಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ‘ಸಂಗೀತದೊಂದಿಗೆ ಶಿವನಾಮ ಸ್ಮರಣೆ’ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಾಡಿನ ಹೆಸರಾಂತ ಕಲಾವಿದರಿಂದ ಭಕ್ತಿ ಸಂಗೀತದ ರಸದೌತಣ ಏರ್ಪಡಿಸಲಾಗಿದೆ.
ಸಂಗೀತ ಶಿವಾರಾಧನೆಯ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ರಾತ್ರಿ 8 ಗಂಟೆಯಿಂದ ಗಾಯಕ ಯವ ಕಲಾವಿದ ಸಿದ್ಧಾರ್ಥ ಬೆಳ್ಳಣ್ಣು, ಸುಜಯ ಶಾನ್‌ಭಾಗ್ ಹಾಗೂ ತಂಡದಿಂದ ‘ಶಿವ ಸಂಗೀತ’ ಹಾಗೂ ಹುಬ್ಬಳ್ಳಿಯ ಕಲಾಸುಜಯ ತಂಡದಿಂದ ಸಂಜೆ 7 ರಿಂದ 8 ಗಂಟೆವರೆಗೆ ‘ಶಿವತಾಂಡವ’ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ.