ಹುಬ್ಬಳ್ಳಿ: ನಗರದ ತಾರಿಹಾಳ ಕೈಗಾರಿಕಾ ವಲಯದಲ್ಲಿ ಬರ್ತ್‍ಡೆ ಸ್ಪಾರ್ಕ್ ತಯಾರಿಕಾ ಘಟಕ ಬ್ಲಾಸ್ಟ್‌ಗೆ ಸಂಬಂಧಿಸಿದಂತೆ ಫ್ಯಾಕ್ಟರಿಯ ಮಾಲೀಕ ಕೊನೆಗೂ ಪೊಲೀಸರಿಗೆ ಶರಣಾಗಿದ್ದಾನೆ.
ಅಬ್ದುಲ್ ಖಾದರ ಶೇಖ್ ಅಲಿಯಾಸ ಶಿರಟ್ಟಿ ಪೊಲೀಸರಿಗೆ ಶರಣಾಗಿರುವ ಫ್ಯಾಕ್ಟರಿ ಮಾಲೀಕ. ಯಾವುದೇ ಇಲಾಖೆ ಅನುಮತಿ ಪಡೆಯದೆ ಕಾನೂನು ಬಾಹಿರವಾಗಿ ಫ್ಯಾಕ್ಟರಿ ತೆರೆದು ನಾಲ್ಕು ಅಮಾಯಕ ಜೀವಗಳನ್ನು ಬಲಿ ಪಡೆದಿದ್ದ ಅಬ್ದುಲ್ ಖಾದರ್ ಘಟನೆ ನಡೆದ ದಿನದಿಂದ ತಲೆ ಮರೆಸಿಕೊಂಡಿದ್ದ.
Advertisement
Advertisement
ಮಾಲೀಕ ಶೀಘ್ರವಾಗಿ ಬಂಧಿಸುವಂತೆ ಸಾರ್ವಜನಿಕ ಜೊತೆಗೆ ಶಾಸಕರ ಮತ್ತು ಸಚಿವ ಒತ್ತಡ ಪೊಲೀಸರಿಗಿತ್ತು. ಹೀಗಾಗಿ ತಲೆ ಮರೆಸಿಕೊಂಡಿದ್ದ ಅಬ್ದುಲ್‍ಗಾಗಿ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಮೂರು ತಂಡವಾಗಿ ಹುಡುಕಾಟ ನಡೆಸಿದ್ದರು. ಇದೀಗ ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಆ.4ರವರೆಗೆ ಇಡಿ ವಶಕ್ಕೆ ಸಂಜಯ್ ರಾವತ್
Advertisement
Advertisement
ಈ ಬಗ್ಗೆ ಧಾರವಾಡ ಎಸ್‍ಪಿ ಲೋಕೇಶ್ ಪ್ರತಿಕ್ರಿಯೆ ನೀಡಿದ್ದು, ಕಳೆದ ವಾರ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ನಡೆದಿತ್ತು. ತನಿಖೆ ಮಾಡಿದಾಗ ಸುಮಾರು ಪರವಾನಿಗೆ ಇಲ್ಲದೇ ಕೆಮಿಕಲ್ಸ್ ಅಲ್ಲಿ ಇಡಲಾಗಿತ್ತು. ಕಾರ್ಮಿಕರ ಜೀವ ಹಾನಿ ಆಗುವಂತೆ ಕಾರ್ಖಾನೆ ನಡೆಸುತ್ತಿದ್ದರು. ಯಾವುದೇ ಸೆಫ್ಟಿ ಇರಲಿಲ್ಲ. ಇದರಿಂದಾಗಿ ಗಾಯಾಳುಗಳಲ್ಲಿ ನಾಲ್ಕು ಜನ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಖಾಸಗಿ ಬಸ್ – ಕಾರ್ ನಡುವೆ ಭೀಕರ ಅಪಘಾತ – ಓರ್ವ ಸಾವು, 6 ಮಂದಿಗೆ ಗಾಯ