ಹುಬ್ಬಳ್ಳಿ: ರಸ್ತೆಗುಂಡಿ ಮತ್ತು ಧೂಳಿನಿಂದ ಕಂಗಾಲಾಗಿದ್ದ ಹುಬ್ಬಳ್ಳಿ, ಧಾರವಾಡ ಮಂದಿಗೆ ಆಸರೆಯಾಗಲು ಪ್ರಧಾನಿ ನರೇಂದ್ರ ಮೋದಿಯೇ (Narendra Modi) ಬರಬೇಕಾಯಿತು. ಮೋದಿ ಅವರನ್ನು ಮೆಚ್ಚಿಸಲು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ (Hubballi Dharwad Municipal Corporation) ಅಧಿಕಾರಿಗಳು ಹಗಲು ಡ್ರಾಮಾ ಶುರು ಮಾಡಿದ್ದಾರೆ.
ಇದೇ ತಿಂಗಳ 12ರಂದು ಯುವ ಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲು ಅವಳಿ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರೆ. ಹೀಗಾಗಿ ಈ ಹಿಂದೆ ಬಿಬಿಎಂಪಿ (BBMP) ಮಾಡಿದ ಚಾಳಿಯನ್ನು, ಹುಬ್ಬಳ್ಳಿ-ಧಾರವಾಡ ಪಾಲಿಕೆ ಸಹ ಅಳವಡಿಸಿಕೊಳ್ಳಲು ಮುಂದಾಗಿದ್ದು, ರಾತ್ರೋರಾತ್ರಿ ರಸ್ತೆಗಳ (Road) ಅಭಿವೃದ್ಧಿ ಕಾರ್ಯ ನಡೆಯುತ್ತಿದೆ.
ತಮ್ಮ ಬಂಡವಾಳ ಬಯಲಾಗುವ ಭಯದಲ್ಲಿ ರಸ್ತೆಗಳಿಗೆ ತೇಪೆ ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅಲ್ಲದೇ ರಸ್ತೆ ಅಕ್ಕಪಕ್ಕದ ಕಾಂಪೌಂಡ್‍ಗಳಿಗೆ ಸುಣ್ಣ, ಬಣ್ಣ ಬಳಿಸಲು ಸಹ ಮುಂದಾಗಿದ್ದಾರೆ. ಇದನ್ನೂ ಓದಿ: ಬೆಳಗಾವಿ ಹಿಂದೂಪರ ಸಂಘಟನೆ ಮುಖಂಡನ ಮೇಲೆ ಫೈರಿಂಗ್ – ವದಂತಿಗಳಿಗೆ ಕಿವಿಕೊಡಬೇಡಿ: ಅಭಯ್ ಪಾಟೀಲ್ ಮನವಿ
ಹುಬ್ಬಳ್ಳಿ ನಗರದ ರೈಲ್ವೆ ಮೈದಾನದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಮೈದಾನದ ಅಕ್ಕ-ಪಕ್ಕದ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ತಡೆಗೋಡೆಗಳಿಗೆ ಪೇಂಟಿಂಗ್ ಹಚ್ಚಲಾಗುತ್ತಿದೆ. ಇಷ್ಟು ದಿನ ಗುಂಡಿಗಳಿಂದ ತುಂಬಿ ತುಳುಕುತ್ತಿದ್ದ ರಸ್ತೆಗಳು ಈಗ ದಿಢೀರ್ ಡಾಂಬರ್ ಕಾಣುತ್ತಿವೆ. ಆದರೆ ಇದನ್ನು, ಕೇವಲ ಮೋದಿ ಕಾರ್ಯಕ್ರಮ ಉದ್ದೇಶದಿಂದ ರಸ್ತೆಗೆ ತೆಪೆ ಹಾಕಿ, ಒಂದು ಇಂಚು ಡಾಂಬರ್ ಹಾಕಿ ಗುಂಡಿಗಳನ್ನು ಮುಚ್ಚಲಾಗುತ್ತಿದೆ.
ಹಲವು ವರ್ಷಗಳಿಂದ ರಸ್ತೆಗಳೆಲ್ಲ ಗುಂಡಿಗಳಿಂದ ತುಂಬಿ ತುಳುಕುತ್ತಿದ್ದರೂ, ತಲೆ ಕೆಡೆಸಿಕೊಳ್ಳದ ಪಾಲಿಕೆ ಈಗ ಸ್ಮಾರ್ಟ್ ಸಿಟಿ ಕಾಮಗಾರಿ ಕರ್ಮಕಾಂಡ ಮುಚ್ಚಿಹಾಕಲು ಈ ಡ್ರಾಮಾ ಮಾಡುತ್ತಿದೆ ಎಂದು ಜನರು ಕಿಡಿಕಾರಿದ್ದಾರೆ. ಇದನ್ನೂ ಓದಿ: 6ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k