ಚಂಡೀಗಢ: ಪಂಜಾಬ್‍ನಲ್ಲಿ ನೂತನವಾಗಿ ರಚನೆಯಾಗಿರುವ ಆಮ್ ಆದ್ಮಿ ಪಕ್ಷದ ಸರ್ಕಾರದಲ್ಲಿ ಇಬ್ಬರು ವಕೀಲರು ಸ್ಥಾನಗಳಿಸಿದ್ದಾರೆ.
ಸಿಎಂ ಭಗವಂತ್ ಮಾನ್ ಅವರ ಸಚಿವ ಸಂಪುಟಕ್ಕೆ ಹರ್‍ಪಲ್ ಸಿಂಗ್ ಚೀಮಾ ಹಾಗೂ ಹರ್‍ಜೋತ್ ಸಿಂಗ್ ಬೇನ್ಸ್ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ಉಪ್ಪಿ ಕಂಠಸಿರಿಯಲ್ಲಿ ‘ಹುಷಾರ್’ ಹಾಡು
Advertisement
Advertisement
Advertisement
ಈ ಇಬ್ಬರೂ ಪಂಜಾಬ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದವರಾಗಿದ್ದಾರೆ. 31 ವರ್ಷದ ಹರ್‍ಜೋತ್ ಅವರು ಮಾನ್ ಸಂಪುಟದ ಅತಿ ಕಿರಿಯ ವಯಸ್ಸಿನ ಸಚಿವರು ಮಾತ್ರವಲ್ಲ ಇಡೀ ದೇಶದಲ್ಲೇ ಅತಿ ಚಿಕ್ಕ ವಯಸ್ಸಿನ ಸಚಿವರಾಗಿದ್ದಾರೆ. ಹರ್‍ಪಲ್ ಅವರು ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.
Advertisement
ಹರ್‍ಪಲ್ ಸಿಂಗ್ ಚೀಮಾ 2017ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಜೊತೆಗೆ 2017-19ರ ಅವಧಿಯಲ್ಲಿ ಪಂಜಾಬ್‍ನ ಪ.ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದರು. ಹರ್‍ಜೋತ್ ಸಿಂಗ್ ಬೇನ್ಸ್ ಪಂಜಾಬ್ ಆಮ್‍ಆದ್ಮಿ ಘಟಕದ ಮುಖ್ಯ ವಕ್ತಾರರಾಗಿದ್ದರು. 2017ರಲ್ಲಿ ಸಹ್ನೆವಾಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸಹಾಯ ಮಾಡುವುದಿಲ್ಲ: ಸಂಜಯ್ ರಾವತ್
ಸದ್ಯ ಇಬ್ಬರೂ ನೂತನ ಮುಖ್ಯಮಂತ್ರಿಯಾಗಿರುವ ಭಗವಂತ್ ಮಾನ್ ಅವರ ಸಚಿವ ಸಂಪುಟ ಸೇರಿದ್ದಾರೆ. ಸಂಪುಟದಲ್ಲಿ ಸ್ಥಾನ ನೀಡಿದ್ದಕ್ಕೆ ಚೀಮಾ ಮತ್ತು ಬೇನ್ಸ್ ಸಿಎಂ ಗೆ ಅಭಿನಂದನೆ ಸಲ್ಲಿಸಿದ್ದಾರೆ.