ಬೆಳಗಾವಿ: ರಾಜ್ಯದ ಅಭಿವೃದ್ಧಿ ಚರ್ಚೆ ಬಿಟ್ಟು ಜನ ವಿರೋಧಿ ಮತಾಂತರ ಕಾಯ್ದೆ ಜಾರಿ ತರಲು ಹೊರಟಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಬಗ್ಗೆ ಪ್ರಶ್ನೆ ಕೇಳಿದರೆ ಚಕಾರ ಎತ್ತಲ್ಲ. ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ಪ್ರತ್ಯೇಕ ರಾಜ್ಯದ ಕೂಗು ಅನಿವಾರ್ಯ ಎಂದು ಸಿಡಿದರು. ಇದನ್ನೂ ಓದಿ: ಹೆರಿಗೆ ನಂತರ ತೂಕ ಇಳಿಸಿಕೊಳ್ಳೋದು ಸುಲಭ ಅಲ್ಲ: ಯುವರತ್ನ ನಟಿ
Advertisement
ಕಲ್ಯಾಣ ಕರ್ನಾಟಕದ ವಿಷಯವಾಗಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕಾನೂನಾತ್ಮಕವಾಗಿ ಅಭಿವೃದ್ಧಿ ಮಂಡಳಿ ರಚನೆ ಆಗಿಲ್ಲ. ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕವನ್ನ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಅಭಿವೃದ್ಧಿ ಚರ್ಚೆ ಬಿಟ್ಟು ಜನ ವಿರೋಧಿ ಕಾಯ್ದೆ ಜಾರಿ ತರಲು ಹೊರಟಿದ್ದಾರೆ. ಇದೊಂದು ಅಪ್ರಸ್ತುತ ಕಾಯ್ದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮದುವೆ ವಯಸ್ಸು ಹೆಚ್ಚಿಸಿರೋದಕ್ಕೆ ಮಹಿಳೆಯರೇ ಖುಷಿಯಾಗಿದ್ದಾರೆ, ಆಗದವರು ವಿರೋಧಿಸ್ತಿದ್ದಾರೆ: ಮೋದಿ
Advertisement
Advertisement
ಬಲವಂತ ಮತಾಂತರದ ವಿರುದ್ಧ ಈಗಾಗಲೇ ನಮ್ಮ ಕಾನೂನಿನಲ್ಲಿ ಶಿಕ್ಷೆ ಇದೆ. ಒಂದು ಸಮುದಾಯವನ್ನ ಗುರಿಯಾಗಿಟ್ಟುಕೊಂಡು ಕಾಯ್ದೆ ಜಾರಿಗೆ ಮುಂದಾಗಿದ್ದಾರೆ. ಆದರೂ ಈ ಕಾಯ್ದೆ ಯಾರ ಹಿತಕ್ಕೆ? ಇದೊಂದು ಜನ ವಿರೋಧಿ ಸರ್ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.