`ಕಾಂತಾರ’ ನೋಡಿ ತುಂಬಾ ಕಲಿತೆ: ರಿಷಬ್ ಚಿತ್ರಕ್ಕೆ ಹೃತಿಕ್ ರೋಷನ್ ಮೆಚ್ಚುಗೆ

Public TV
2 Min Read
kantara

ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಕ್ರಿಯೆಟ್ ಮಾಡಿದ `ಕಾಂತಾರ’ (Kantara Film) ಸಿನಿಮಾವನ್ನು ಸಿನಿ ಪ್ರೇಕ್ಷಕರು, ಪರಭಾಷೆಯ ತಾರೆಯರು ಹಾಡಿ ಹೊಗಳುತ್ತಿದ್ದಾರೆ. ಈ ಬೆನ್ನಲ್ಲೇ ಬಾಲಿವುಡ್ (Bollywood) ಸೂಪರ್ ಸ್ಟಾರ್ ಹೃತಿಕ್ ರೋಷನ್ (Hrithik Roshan), ರಿಷಬ್ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಅವರಿಗೆ `ಕಾಂತಾರ’ ಕ್ಲೈಮ್ಯಾಕ್ಸ್ ಸಖತ್ ಇಷ್ಟವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

hrithik roshan

ರಿಷಬ್ (Rishab Shetty) ನಟನೆ, ನಿರ್ದೇಶನದ `ಕಾಂತಾರ’ ಸಿನಿಮಾ ಹವಾ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ. ಒಟಿಟಿಯಲ್ಲಿ ಕೂಡ ಸಿನಿಮಾ ಸಂಚಲನ ಮೂಡಿಸುತ್ತಿದೆ. ಇದೀಗ `ಕಾಂತಾರ’ ಚಿತ್ರವನ್ನು ಬಿಟೌನ್ ಸ್ಟಾರ್ ಹೃತಿಕ್ ರೋಷನ್ ನೋಡಿ ಭೇಷ್ ಎಂದಿದ್ದಾರೆ. ಸಿನಿಮಾ ಬಗೆಗಿನ ಭಾವನೆಯನ್ನ ನಟ ಖುಷಿಯಿಂದ ಹೇಳಿಕೊಂಡಿದ್ದಾರೆ.

kantara 2

`ಕಾಂತಾರ’ ಸಿನಿಮಾವನ್ನು ನೋಡಿ ಸಾಕಷ್ಟು ವಿಷಯ ಕಲಿತುಕೊಂಡೆ. ರಿಷಬ್ ಶೆಟ್ಟಿ ಅವರಿಂದಾಗಿ ಈ ಸಿನಿಮಾ ಅಸಾಧಾರಣ ಎನಿಸಿಕೊಂಡಿದೆ. ನಿರೂಪಣೆ, ನಟನೆ ಮತ್ತು ನಿರ್ದೇಶನ ಅತ್ಯುತ್ತಮವಾಗಿದೆ. ಕ್ಲೈಮ್ಯಾಕ್ಸ್‌ನಲ್ಲಿ ಕಂಡ ಬದಲಾವಣೆಯಿಂದ ನನಗೆ ರೋಮಾಂಚನ ಆಯಿತು. ಇಡೀ ತಂಡಕ್ಕೆ ನನ್ನ ಗೌರವ ಮತ್ತು ಅಭಿನಂದನೆಗಳು’ ಎಂದು ಹೃತಿಕ್ ರೋಷನ್ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ರಿಷಬ್ ತಂಡದ ವಿಭಿನ್ನ ಪ್ರಯತ್ನವನ್ನ ಹಾಡಿ ಹೊಗಳಿದ್ದಾರೆ. ಹೃತಿಕ್‌ ರೋಷನ್‌ಗೆ ಪ್ರತಿಯುತ್ತರವಾಗಿ ರಿಷಬ್ ಕೂಡ ಧನ್ಯವಾದಗಳು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್

ಇನ್ನೂ `ಕಾಂತಾರ 2′ ಮಾಡಲು ಪಂಜುರ್ಲಿ ದೈವ ಅನುಮತಿ ನೀಡಿದೆ. ಈ ಸುದ್ದಿ ಕೇಳಿ, ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ರಿಷಬ್ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *