ವಾಷಿಂಗ್ಟನ್: ಬಾಲಿವುಡ್ ನಟ ಹೃತಿಕ್ ರೋಶನ್ ಮೇಲೆ ಕ್ರಶ್ ಇದ್ದ ಕಾರಣ ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನ್ಯೂಯಾರ್ಕ್ನಲ್ಲಿ ನಡೆದಿದೆ.
ಡೊನ್ನೆ ಕೊಲೆಯಾದ ಪತ್ನಿಯಾಗಿದ್ದು, ದಿನೇಶ್ವರ್ ಬುದಿದಾಟ್ ಆತ್ಮಹತ್ಯೆ ಮಾಡಿಕೊಂಡ ಪತಿ. ಡೊನ್ನೆ ಓಝೋನ್ ರಸ್ತೆಯಲ್ಲಿರುವ ಜೆಮಿನಿ ಅಲ್ಟ್ರಾ ಲಾಂಜ್ನಲ್ಲಿ ಬಾರ್ ಟೆಂಡರ್ ಆಗಿ ಕೆಲಸ ಮಾಡುತ್ತಿದ್ದಳು. ಡೊನ್ನೆ ಹಾಗೂ ದಿನೇಶ್ವರ್ ಓಝೋನ್ ಪಾರ್ಕಿನ ವೈಟ್ಲಾ ಸ್ಟ್ರೀಟ್ನಲ್ಲಿರುವ ಆಲ್ಬರ್ಟ್ ರಸ್ತೆಯಲ್ಲಿ ವಾಸಿಸುತ್ತಿದ್ದರು. ಆದರೆ ಎರಡು ವಾರಗಳ ಹಿಂದೆ ಡೊನ್ನೆ ಅಲ್ಲಿಂದ ಹೊರಬಂದು ಬೇರೆ ಕಡೆ ವಾಸಿಸುತ್ತಿದ್ದಳು.
Advertisement
Advertisement
ಶುಕ್ರವಾರ ಡೊನ್ನೆ ತನ್ನ ಪತಿ ದಿನೇಶ್ವರ್ ಜೊತೆ ಸಿನಿಮಾ ನೋಡಲು ಓಝೋನ್ ಪಾರ್ಕಿನ ಅಪಾರ್ಟ್ಮೆಂಟ್ಗೆ ಹೋಗಿದ್ದಳು. ಈ ವೇಳೆ ದಿನೇಶ್ವರ್ ಪತ್ನಿ ಡೊನ್ನೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಳಿಕ ಡೊನ್ನೆಯ ಸಹೋದರಿಗೆ ಮೆಸೇಜ್ ಮಾಡಿ ಹತ್ಯೆ ಮಾಡಿರುವ ವಿಷಯವನ್ನು ತಿಳಿಸಿದ್ದಾನೆ. ಅಲ್ಲದೆ ಅಪಾರ್ಟ್ಮೆಂಟ್ನ ಕೀಯನ್ನು ಹೂ ಕುಂಡದ ಕೆಳಗಿಡಲಾಗಿದೆ ಎಂದು ಕೂಡ ಡೊನ್ನೆ ಸಹೋದರಿಗೆ ಮೆಸೇಜ್ ಮಾಡಿ ಅಲ್ಲಿಂದ ಹೊರಟು ಹೋಗಿದ್ದಾನೆ.
Advertisement
ಹಾಗೆಯೇ ಸಂಜೆ ಸುಮಾರು 7.30ಕ್ಕೆ ಡೊನ್ನೆ ಸಹೋದರಿ ಸ್ಥಳಕ್ಕೆ ತಲುಪಿ ಹೂಕುಂಡ ಕೆಳಗಿಟ್ಟಿದ್ದ ಕೀ ಅನ್ನು ತೆಗೆದುಕೊಂಡು ಮನೆಯೊಳಗೆ ಪ್ರವೇಶಿಸಿದ್ದಾಳೆ. ಈ ವೇಳೆ ಅಲ್ಲಿ ಡೊನ್ನೆ ಮೃತದೇಹ ಪತ್ತೆಯಾಗಿದ್ದು, ತಕ್ಷಣ ಆಕೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಇತ್ತ ದಿನೇಶ್ವರ್ ಹೊವಾರ್ಡ್ ಬೀಚಿಗೆ ಹೋಗಿ ಅಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Advertisement
ದಿನೇಶ್ವರ್ ತನ್ನ ಪತ್ನಿಯನ್ನು ತುಂಬಾನೇ ಪ್ರೀತಿಸುತ್ತಿದ್ದನು. ಆದರೆ ಆಕೆ ಮಾಡುತ್ತಿದ್ದ ಕೆಲಸ ಆತನಿಗೆ ಇಷ್ಟವಿರಲಿಲ್ಲ. ಇತ್ತ ಡೊನ್ನೆ ನೋಡಲು ಸುಂದರವಾಗಿದ್ದು, ಆಕೆ ಯಾವಾಗಲೂ ಸಂಪಾದನೆ ಮಾಡುತ್ತಿದ್ದಳು. ಇದರಿಂದ ದಿನೇಶ್ವರ್ ಆಕೆಯ ಮೇಲೆ ಹೊಟ್ಟೆಕಿಚ್ಚು ಪಡುತ್ತಿದ್ದನು. ದಿನೇಶ್ವರ್ ಯಾವಾಗಲೂ ಡೊನ್ನೆಯನ್ನು ನಿಂದಿಸುತ್ತಿದ್ದನು, ಹೊಡೆಯುತ್ತಿದ್ದನು ಹಾಗೂ ಕೊಲೆ ಮಾಡುವ ಬೆದರಿಕೆ ಕೂಡ ಹಾಕುತ್ತಿದ್ದನು. ಆದರೆ ಡೊನ್ನೆ ತನ್ನ ಪತಿಯ ಬೆದರಿಕೆಗೆ ಹೆದರುತ್ತಿರಲಿಲ್ಲ ಎಂದು ಡೊನ್ನೆ ಸ್ನೇಹಿತ ರಾಡ್ನಿ ತಿಳಿಸಿದ್ದಾನೆ.
ಡೊನ್ನೆ ತನ್ನ ನೆಚ್ಚಿನ ನಟ ಹೃತಿಕ್ ರೋಶನ್ ಅಭಿನಯಿಸಿದ ಹಾಡುಗಳನ್ನು ಅಥವಾ ಚಿತ್ರಗಳನ್ನು ನೋಡುತ್ತಿದ್ದರೆ ದಿನೇಶ್ವರ್ ಹೊಟ್ಟೆಕಿಚ್ಚು ಪಡುತ್ತಿದ್ದನು. ಅಲ್ಲದೆ ಹೊಟ್ಟೆಕಿಚ್ಚು ಪಟ್ಟು ಆತ ಚಾನೆಲ್ ಚೇಂಜ್ ಮಾಡುವಂತೆ ಡೊನ್ನೆಗೆ ಹೇಳುತ್ತಿದ್ದನು ಎಂದು ಡೊನ್ನೆಯ ಸಹೋದ್ಯೋಗಿ ಮಾಲಾ ರಾಮ್ದಾನಿ ಹೇಳಿದ್ದಾರೆ.