War 2 Teaser: ಹೃತಿಕ್ ರೋಷನ್ ಮುಂದೆ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದ ಜ್ಯೂ.ಎನ್‌ಟಿಆರ್

Public TV
2 Min Read
hrithik roshan jr ntr

ತೆಲುಗಿನ ಸ್ಟಾರ್ ನಟ ಜ್ಯೂ.ಎನ್‌ಟಿಆರ್‌ಗೆ (Jr.NTR) ಇಂದು (ಮೇ 20) ಹುಟ್ಟುಹಬ್ಬದ ಹಿನ್ನೆಲೆ ‘ವಾರ್ 2’ (War 2) ಟೀಸರ್ ರಿಲೀಸ್ ಮಾಡಲಾಗಿದೆ. ಹೃತಿಕ್ ರೋಷನ್ (Hrithik Roshan) ಮುಂದೆ ಖಡಕ್ ವಿಲನ್ ಆಗಿ ತಾರಕ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇದನ್ನೂ ಓದಿ:ಲಿಫ್ಟ್‌ನಲ್ಲಿ ಹಠ ಹಿಡಿದು ದರ್ಶನ್ ನಂಬರ್ ಪಡೆದ ಪವಿತ್ರಾಗೌಡ

jr ntr 1‘ವಾರ್ 2’ ಟೀಸರ್‌ನಲ್ಲಿ ಹೃತಿಕ್ ಮುಂದೆ ಜ್ಯೂ.ಎನ್‌ಟಿಆರ್ ಅಬ್ಬರಿಸಿದ್ದಾರೆ. ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ನನ್ನ ಕಣ್ಣುಗಳ ಯಾವತ್ತಿನಿಂದಲೋ ನಿನ್ನನ್ನು ಹುಡುಕಾಡುತ್ತಿದೆ ಎನ್ನುತ್ತಾ ತಾರಕ್ ಡೈಲಾಗ್ ಶುರುವಾಗಿದೆ. ನಿನಗೆ ನನ್ನ ಬಗ್ಗೆ ಗೊತ್ತಿಲ್ಲ. ಈಗ ಗೊತ್ತಾಗುತ್ತದೆ, ಗೆಟ್ ರೆಡಿ ಫಾರ್ ವಾರ್ ಎಂದು ತಾರಕ್ ಡೈಲಾಗ್ ಹೊಡೆದಿದ್ದಾರೆ. ಹೃತಿಕ್ ಮತ್ತು ತಾರಕ್ ಜುಗಲ್‌ಬಂದಿ ಮಸ್ತ್ ಆಗಿದೆ. ಇಬ್ಬರೂ ಪೈಪೋಟಿಯಲ್ಲಿ ಫೈಟಿಂಗ್ ಮಾಡಿದಂತಿದೆ. ಅಷ್ಟರ ಮಟ್ಟಿಗೆ ಆ್ಯಕ್ಷನ್ ಸೀಕ್ವೆನ್ಸ್ ಟೀಸರ್‌ನಲ್ಲಿ ತೋರಿಸಲಾಗಿದೆ. ಈ ಚಿತ್ರದ ಟೀಸರ್ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದನ್ನೂ ಓದಿ:ವಿಚಾರಣೆ ಮುಗಿಸಿ ದರ್ಶನ್‌ ಕೈ ಹಿಡಿದುಕೊಂಡು ಹೊರ ಬಂದ ಪವಿತ್ರಾ ಗೌಡ

ಗ್ಲ್ಯಾಮರ್‌ ಗೊಂಬೆಯಾಗಿ ಕಿಯಾರಾ ಅಡ್ವಾಣಿ (Kiara Adavni) ನಟಿಸಿದ್ದು, ಬಿಕಿನಿಯಲ್ಲಿ ಮಿಂಚಿದ್ದಾರೆ. ರಾ ಏಜೆಂಟ್ ಆಗಿರೋ ಹೃತಿಕ್‌ಗೆ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರವನ್ನು 150 ದಿನಗಳ ಕಾಲ 6 ದೇಶಗಳಲ್ಲಿ ‘ವಾರ್ 2’ ಶೂಟಿಂಗ್ ಮಾಡಲಾಗಿದೆ.

ಯಶ್ ರಾಜ್ ಫಿಲ್ಮ್ ನಿರ್ಮಾಣದ ಈ ಸಿನಿಮಾವನ್ನು ‘ಬ್ರಹ್ಮಾಸ್ತ್ರ’ ಡೈರೆಕ್ಟರ್ ಅಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದಾರೆ. ಆ.14ರಂದು ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ವಾರ್ 2 ರಿಲೀಸ್ ಆಗಲಿದೆ.

Share This Article