Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಗರ್ಭಕಂಠದ ಕ್ಯಾನ್ಸರ್‌ ತಡೆಗೆ HPV ಲಸಿಕೆ – ಕ್ಯಾನ್ಸರ್‌ಗೆ ಕಾರಣಗಳೇನು, ಲಕ್ಷಣಗಳು ಹೇಗಿರುತ್ತೆ? 
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಗರ್ಭಕಂಠದ ಕ್ಯಾನ್ಸರ್‌ ತಡೆಗೆ HPV ಲಸಿಕೆ – ಕ್ಯಾನ್ಸರ್‌ಗೆ ಕಾರಣಗಳೇನು, ಲಕ್ಷಣಗಳು ಹೇಗಿರುತ್ತೆ? 

Latest

ಗರ್ಭಕಂಠದ ಕ್ಯಾನ್ಸರ್‌ ತಡೆಗೆ HPV ಲಸಿಕೆ – ಕ್ಯಾನ್ಸರ್‌ಗೆ ಕಾರಣಗಳೇನು, ಲಕ್ಷಣಗಳು ಹೇಗಿರುತ್ತೆ? 

Public TV
Last updated: March 1, 2026 11:14 pm
Public TV
Share
4 Min Read
Cervical Cancer
SHARE

ದೇಶದ ಮಹಿಳೆಯರಲ್ಲಿ ಎರಡನೇ ಸಾಮಾನ್ಯ ರೀತಿಯ ಕ್ಯಾನ್ಸರ್ ಎಂದರೆ ಅದು ಗರ್ಭಕಂಠದ ಕ್ಯಾನ್ಸರ್. ಇದು ಸುಮಾರು 1.25 ಲಕ್ಷ ಜನರನ್ನು ಬಾಧಿಸುತ್ತದೆ ಮತ್ತು ಪ್ರತಿ ವರ್ಷ 75 ಸಾವಿರ ಮಂದಿ ಮೃತಪಡುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರ ಆರೋಗ್ಯವನ್ನು ಬಲಪಡಿಸಲು ಮತ್ತು ಈ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆದು ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರವು ಇದೀಗ ಎಚ್ ಪಿ ವಿ ಲಸಿಕೆ ಅಭಿಯಾನವನ್ನು ಆರಂಭಿಸಿದೆ. 

2020 ಮತ್ತು 2021 ರಲ್ಲಿ ಸ್ವೀಡನ್ ಮತ್ತು ಇಂಗ್ಲೆಂಡ್‌ನಲ್ಲಿ ನಡೆದ ಅಧ್ಯಯನಗಳು ಹದಿಹರೆಯದವರಲ್ಲಿ ಲಸಿಕೆ ಹಾಕುವುದರಿಂದ 30 ವರ್ಷ ವಯಸ್ಸಿನಲ್ಲಿ ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು 85% ಕ್ಕಿಂತ ಹೆಚ್ಚು ಕಡಿಮೆ ಮಾಡಬಹುದು ಎಂದು ತೋರಿಸಿವೆ. ಈ ಮೂಲಕ ದೇಶದ ಮಹಿಳೆಯರು ಬಳಲುತ್ತಿರುವ ಗರ್ಭಕಂಠದ ಕ್ಯಾನ್ಸರ್  ವಿರುದ್ಧ ಸೆಣಸಾಡಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಈ ಮೂಲಕ ಹೆಚ್ ಪಿವಿ ಪ್ರಾರಂಭಿಸಿರುವ ಜಗತ್ತಿನ 160 ದೇಶಗಳ ಪೈಕಿ ಭಾರತವು ಒಂದು.
       CANCER 1

ಫೆಬ್ರವರಿ 28ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜಸ್ಥಾನದ ಅಜ್ಮೀರ್ ನಲ್ಲಿ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆಗಾಗಿ ರಾಷ್ಟ್ರ ವ್ಯಾಪಿ ಎಚ್ ಪಿ ವಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಮೂಲಕ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 9 ರಿಂದ 14 ವರ್ಷ ವಯಸ್ಸಿನ ಸುಮಾರು 8 ಕೋಟಿ ಮಕ್ಕಳು ಲಸಿಕೆ ಪಡೆಯಲಿದ್ದಾರೆ. ಲಸಿಕೆ ಅಭಿಯಾನವನ್ನು ಶಾಲೆಗಳು ಮತ್ತು ಸರ್ಕಾರದ ಅಸ್ತಿತ್ವದಲ್ಲಿರುವ ಲಸಿಕೆ ಕೇಂದ್ರಗಳ ಮೂಲಕ ನಡೆಸಲಾಗುತ್ತದೆ.

ಭಾರತ ಸರ್ಕಾರ ನೀಡುವ ಲಸಿಕೆಯನ್ನು ಅಮೆರಿಕ ಮೂಲದ ಮೆರ್ಕ್ & ಕಂಪನಿ ತಯಾರಿಸುತ್ತದೆ. ಅಮೆರಿಕ ಮತ್ತು ಕೆನಡದ ಹೊರಗಡೆ ಇದನ್ನು ಎಂಎಸ್‌ಡಿ ಎಂದು ಕರೆಯಲಾಗುತ್ತದೆ. ಲಸಿಕೆ ಒಕ್ಕೂಟವಾದ ಗವಿ ಜೊತೆ ಪಾಲುದಾರಿಕೆಯಲ್ಲಿ ಸರ್ಕಾರ ಸರಬರಾಜು ಮಾಡಲು ಮುಂದಾಗಿದೆ.

pm modi meeting

ಭಾರತದಲ್ಲಿ ಖಾಸಗಿ ಮಾರುಕಟ್ಟೆಯಲ್ಲಿ, ಗಾರ್ಡಸಿಲ್ 9 ಲಸಿಕೆಗೆ ಪ್ರತಿ ಡೋಸ್‌ಗೆ ಸುಮಾರು 10,850 ರೂ. ದರವಿದೆ. ಆದರೆ ಸರ್ಕಾರ ಪರಿಚಯಿಸಲಿರುವ ಕ್ವಾಡ್ರಿವೇಲೆಂಟ್ ಗಾರ್ಡಸಿಲ್ 4 – ಪ್ರತಿ ಡೋಸ್‌ಗೆ ಸುಮಾರು 3,000 – 4,000 ರೂ. ಬೆಲೆಯಿದೆ.

ಈ ಲಸಿಕೆ ಸ್ವಯಂಪ್ರೇರಿತವಾಗಿದ್ದು ಕೇಂದ್ರ ಸರ್ಕಾರದ ಡಿಜಿಟಲ್‌ ವೇದಿಕೆಯಾದ U-WIN ಸ್ಲಾಟ್‌ಬುಕ್‌ ಮಾಡಿ ಪೋಷಕರು ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳಬಹುದು. ಆಯುಷ್ಮಾನ್ ಆರೋಗ್ಯ ಮಂದಿರ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಉಪ-ಜಿಲ್ಲಾ ಮತ್ತು ಜಿಲ್ಲಾ ಆಸ್ಪತ್ರೆಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳು ಸೇರಿದಂತೆ ಗೊತ್ತುಪಡಿಸಿದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಡೋಸ್‌ಗಳನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ. ಹಾಗಾದ್ರೆ ಏನಿದು ಗರ್ಭಕಂಠದ ಕ್ಯಾನ್ಸರ್? ಇದರ ಕಾರಣಗಳೇನು ಹಾಗೂ ಈ ಕ್ಯಾನ್ಸರ್ ನ ಲಕ್ಷಣಗಳೇನು ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

Centre to launch HPV vaccination drive for girls aged 14 to prevent cancer 2

ಏನಿದು ಗರ್ಭಕಂಠ ಕ್ಯಾನ್ಸರ್?
ಇದು ಸಾಮಾನ್ಯವಾಗಿ ಲೈಂಗಿಕವಾಗಿ ಹರಡುವ ಸೋಂಕು ಆಗಿದೆ. ಗಂಟಲು, ಜನನಾಂಗ ಹಾಗೂ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಗರ್ಭಕಂಠದ ದ್ವಾರ ಅಥವಾ ಅದರ ಸುತ್ತ ಮುತ್ತ ಕಂಡು ಬರುವ ತೀವ್ರ ಸ್ವರೂಪದ ಗೆಡ್ಡೆಯಾಗಿದೆ. ಇದು ಯೋನಿ ಸ್ರಾವದಲ್ಲಿ ಕಂಡು ಬಂದರೂ ರೋಗಲಕ್ಷಣಗಳು ಮಾತ್ರ ಕ್ಯಾನ್ಸರ್‌ನ ಮುಂದುವರಿದ ಹಂತಗಳಲ್ಲಷ್ಟೇ ಕಂಡು ಬರಬಹುದಾಗಿದೆ.

ಗರ್ಭಕಂಠವು ಗರ್ಭಾಶಯದ ಕೆಳಗಿನ ಭಾಗವಾಗಿದ್ದು, ಯೋನಿಯೊಂದಿಗೆ ಸಂಪರ್ಕಿಸುತ್ತದೆ. ಹ್ಯೂಮನ್‌ ಪ್ಯಾಪಿಲೋಮ ವೈರಸ್ (HPV) ಎಂದು ಕರೆಯಲ್ಪಡುವ ವಿವಿಧ ತಳಿಗಳು ಈ ಗರ್ಭಕಂಠದ ಕ್ಯಾನ್ಸರ್‌ ಉಂಟುಮಾಡುವಲ್ಲಿ ಮುಖ್ಯವಾದ ಪಾತ್ರ ವಹಿಸುತ್ತವೆ. HPV ಲೈಂಗಿಕ ಸಂಪರ್ಕದ ಮೂಲಕ ಹಾದುಹೋಗುವ ಸಾಮಾನ್ಯ ಸೋಂಕು. HPVಗೆ ಒಡ್ಡಿಕೊಂಡಾಗ ನಮ್ಮ ದೇಹದ ರೋಗನಿರೋಧಕ ಶಕ್ತಿಯು ಸಾಮಾನ್ಯವಾಗಿ ಈ ವೈರಸ್ ದೇಹದ ಅಂಗಗಳಿಗೆ ಹಾನಿ ಮಾಡದಂತೆ ತಡೆಯುತ್ತದೆ. ಆದರೆ ಕೆಲವು ಪ್ರಕರಣಗಳಲ್ಲಿ ಈ ವೈರಸ್ ಹಲವು ವರ್ಷಗಳವರೆಗೆ ಬದುಕುತ್ತದೆ. ಇದು ಗರ್ಭಕಂಠದ ಕೋಶಗಳನ್ನು ಕ್ಯಾನ್ಸರ್ ಕೋಶಗಳಾಗಿ ಪರಿವರ್ತಿಸುತ್ತದೆ.

cervical cancer 1

ಕಾರಣಗಳೇನು? 

  • ಸಾಮಾನ್ಯವಾಗಿ ಲೈಂಗಿಕವಾಗಿ ಹರಡುವ ಸೊಂಕು ಇದಾಗಿದೆ. ಇದನ್ನು ಹೊರತುಪಡಿಸಿ ಧೂಮಪಾನ, ಅತಿಯಾದ ತಂಬಾಕು ಸೇವನೆಯಿಂದಾಗಿ ಹರಡಿದ ಸೋಂಕನ್ನ ತಡೆದು ಹಾಕಲು ಅಡ್ಡಿಪಡಿಸುತ್ತದೆ. ತಂಬಾಕಿನಲ್ಲಿರುವ ಕೆಲವು ರಾಸಾಯನಿಕಗಳು ಗರ್ಭಕಂಠದ ಕೋಶಗಳನ್ನು ಹಾನಿಗೊಳಿಸುತ್ತದೆ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. 
  • ಹೆಚ್ಚಿನ ರೋಗನಿರೋಧಕ ಮಾತ್ರೆಗಳನ್ನು ಸೇವಿಸುವುದರಿಂದ ಗರ್ಭಕಂಠದ ಕ್ಯಾನ್ಸರ್ ಹೆಚ್ಚಿಸುವ ಅಪಾಯವಿದೆ. ಸಾಮಾನ್ಯವಾಗಿ  ಗರ್ಭ ನಿರೋಧಕ ಮಾತ್ರೆಗಳನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹವು ಸೋಂಕಿನ ವಿರುದ್ಧ ಹೋರಾಡಲು ಮತ್ತು ಆ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಗರ್ಭಕಂಠದ ಕ್ಯಾನ್ಸರ್ ಹೆಚ್ಚಾಗುವ ಸಾಧ್ಯತೆ ಇರುತ್ತದೆ. 
  • ಐದು ವರ್ಷಕ್ಕಿಂತ ಹೆಚ್ಚು ಗರ್ಭ ನಿರೋಧಕ ಮಾತ್ರಗಳನ್ನು ಬಳಸುವ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್ ಎದುರಿಸುವ ಸಾಧ್ಯತೆಗಳು ಇದೆ ಎಂದು ಅಧ್ಯಯನಗಳು ತಿಳಿಸುತ್ತವೆ.  ಇನ್ನು ಹೆರಿಗೆ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆ ಇದಕ್ಕೆ ಕಾರಣವಾಗಬಹುದು
  • ಚಿಕ್ಕ ವಯಸ್ಸಿನಲ್ಲಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿ ಕೊಳ್ಳುವುದರಿಂದ ಗರ್ಭಕಂಠವು ಸೋಂಕಿಗೆ ಗುರಿಯಾಗಬಹುದು.

Centre to launch HPV vaccination drive for girls aged 14 to prevent cancer

ಗುಣಲಕ್ಷಣಗಳು ಏನು?

  • ವಾಸನೆಯುಕ್ತ ಬಿಳಿಸೆರಗು, ಆಗಾಗ ರಕ್ತಸ್ರಾವ ಸಮಸ್ಯೆ ಕಂಡುರುತ್ತದೆ.
  • ಸಂಭೋಗದ ನಂತರ, ಪಿರಿಯಡ್ಸ್​ ಮುಗಿದ ನಂತರ ಯೋನಿಯಲ್ಲಿ ರಕ್ತಸ್ರಾವ ಉಂಟಾಗುವುದು.
  • ಮುಟ್ಟಿನ ಸಮಯದಲ್ಲಿ ವಿಪರೀತ ರಕ್ತಸ್ರಾವ ಹಾಗೂ ಇದು ದೀರ್ಘಕಾಲದವರೆಗೆ ಇರುವುದು.
  • ಸಂಭೋಗದ ಸಮಯದಲ್ಲಿ ನೋವು ಉಂಟಾಗುವುದು
  • ಇಡೀ ಜೀವಕೋಶಗಳ ಮೇಲೆ ಈ ಗರ್ಭಕಂಠದ ಕ್ಯಾನ್ಸರ್‌ ಪರಿಣಾಮ ಬೀರುತ್ತದೆ. ನಾಲ್ಕನೆ ಹಂತಕ್ಕೆ ಹೋದಾಗ ಇದರ ಚಿಕಿತ್ಸೆ ಕಷ್ಟ
  •  ಮೂತ್ರವಿಸರ್ಜನೆಯ ಸಂದರ್ಭದಲ್ಲಿ ನೋವು
  • ಋತುಚಕ್ರದ ಅವಧಿಯಲ್ಲಿ ಬೆನ್ನು ನೋವು, ತುರಿಕೆ ಮತ್ತು ಉರಿ, ಹೆಚ್ಚು ಆಯಾಸ, ತುರ್ತು ಮೂತ್ರ ವಿಸರ್ಜನೆ, ಹೊಟ್ಟೆ ಉಬ್ಬರ

Cancer Vaccine

ಗರ್ಭಕಂಠದ ಕ್ಯಾನ್ಸರ್ ಗೆ ಚಿಕಿತ್ಸೆ:
ಬಹುತೇಕರಿಗೆ ಮೊದಲ ಹಂತದ ಗರ್ಭಕಂಠದ ಕ್ಯಾನ್ಸರ್‌ ಗುಣಲಕ್ಷಣಗಳು ಪತ್ತೆಯಾಗುವುದಿಲ್ಲ. ಈ ಗರ್ಭಕಂಠ ಕ್ಯಾನ್ಸರ್‌ 30 ಮತ್ತು 65 ವರ್ಷ ವಯೋಮಾನದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹೀಗಾಗಿ ಈ ವಯಸ್ಸಿನಲ್ಲಿ ಪ್ರತಿ ಐದು ವರ್ಷಗಳಿಗೆ ಒಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು. HPV ಸೋಂಕಿನಿಂದ ರಕ್ಷಿಸುವ ಲಸಿಕೆಯನ್ನು ಪಡೆಯುವ ಮೂಲಕ ನೀವು ಗರ್ಭಕಂಠದ ಕ್ಯಾನ್ಸರ್ ಅಪಾಯದಿಂದ ಪಾರಾಗಬಹುದು.

ಗರ್ಭಕಂಠದ ಕ್ಯಾನ್ಸರ್ ತಡೆಗೆ  ಪರಿಣಾಮಕಾರಿಯಾದ ಮಾರ್ಗವೆಂದರೆ ಅದು ಗರ್ಭಕಂಠದ ಕ್ಯಾನ್ಸರ್ ಲಸಿಕೆ. ಎಚ್ ಪಿ ವಿ ಲಸಿಕೆಯನ್ನು ತೆಗೆದುಕೊಂಡರೆ ಇದು ಸೋಂಕಿನ ವಿರುದ್ಧ ಹೋರಾಡುತ್ತದೆ. ಗಾರ್ಡಿಸಿಲ್, ಗಾರ್ಡಿಸಿಲ್ 9 ಮತ್ತು ಸೇವಾರಿಕ್ಸ್ ಎಂಬ ಲಸಿಕೆ ನಿರ್ದಿಷ್ಟವಾಗಿ ಇದರ ವಿರುದ್ಧ ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ.

ಆರಂಭಿಕ ಹಂತದಲ್ಲಿಯೇ ಗರ್ಭಕಂಠದ ಕ್ಯಾನ್ಸರ್​ ಬಗ್ಗೆ ಸುಳಿವು ಸಿಕ್ಕಲ್ಲಿ ರೆಡಿಯೇಷನ್​ ಥೆರಪಿ, ಶಸ್ತ್ರಚಿಕಿತ್ಸೆಯ ಮೂಲಕ ಕ್ಯಾನ್ಸರ್​ಕಾರಕ ಕೋಶಗಳನ್ನು ಸಾಯಿಸಿ ರೋಗಿಯನ್ನು ಬದುಕಿಸಬಹುದು.

TAGGED:Central govtcervical cancerHPV VaccineHPV ಲಸಿಕೆPM Modiಕೇಂದ್ರ ಸರ್ಕಾರಗರ್ಭಕಂಠದ ಕ್ಯಾನ್ಸರ್ನರೇಂದ್ರ ಮೋದಿಲಸಿಕೆ ಅಭಿಯಾನ
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda 1
ದೇಶಾದ್ಯಂತ ಅನ್ನದಾನ ಮಾಡಲು ಮುಂದಾದ ರಶ್ಮಿಕಾ-ವಿಜಯ್
Cinema Latest South cinema Top Stories
Rajath Kishan and Dog Satish
ಶೌಚಾಲಯದಲ್ಲಿದ್ದ ವಿಡಿಯೋವೊಂದಕ್ಕೆ ಸುದೀಪ್ ಮೂವಿ ಹಾಡು – ಡಾಗ್ ಸತೀಶ್ ವಿರುದ್ಧ ರಜತ್ ದೂರು
Bengaluru City Cinema Karnataka Latest Main Post Sandalwood
Vijay Sangeetha Sornalingam
ನಟಿ ಜೊತೆ ವಿವಾಹೇತರ ಸಂಬಂಧ ಆರೋಪ; ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ನಟ ವಿಜಯ್‌ ಪತ್ನಿ
Cinema Latest Main Post South cinema
The Kerala Story 2
‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ಬಿಗ್‌ ರಿಲೀಫ್‌ – ರಿಲೀಸ್‌ಗಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್‌
Cinema Court Latest Main Post South cinema

You Might Also Like

crude oil
Latest

ಯುದ್ಧ ಮುಂದುವರಿದರೆ ಭಾರತಕ್ಕೂ ಆರ್ಥಿಕ ಹೊಡೆತ – ತೈಲ ಬೆಲೆ ಏರಿಕೆ ಆತಂಕ!

Public TV
By Public TV
22 minutes ago
Iran Raises Red Flag Over Mosque After Khamenei Killing
Latest

ಪ್ರಸಿದ್ಧ ಶಿಯಾ ಮಸೀದಿ ಮೇಲೆ ಹಾರಿತು ಕೆಂಪು ಧ್ವಜ – ಪ್ರತೀಕಾರದ ಶಪಥ ಮಾಡಿದ ಇರಾನ್

Public TV
By Public TV
23 minutes ago
daily horoscope dina bhavishya
Astrology

ದಿನ ಭವಿಷ್ಯ: 2-3-2026

Public TV
By Public TV
1 hour ago
Basavaraj Rayareddy Daughter
Koppal

ಇಸ್ರೇಲ್‌-ಇರಾನ್‌ ಯುದ್ಧ; ದುಬೈನಲ್ಲಿ ಸಿಲುಕಿರೋ ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಪುತ್ರಿ

Public TV
By Public TV
9 hours ago
Sanju Samson
Cricket

ಸಂಜು ಬೆಂಕಿ ಆಟ, 5 ವಿಕೆಟ್‌ಗಳ ರೋಚಕ ಜಯ – ಸೆಮಿಗೆ ಟೀಂ ಇಂಡಿಯಾ

Public TV
By Public TV
9 hours ago
bjp leader
Chamarajanagar

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ – ತಮ್ಮ ವಾಹನದಲ್ಲೇ ಆಸ್ಪತ್ರೆಗೆ ದಾಖಲಿಸಿದ ಬಿಜೆಪಿ ಮುಖಂಡ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?