ನವದೆಹಲಿ: 2008ರ ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ತಹವ್ವೂರ್ ರಾಣಾನನ್ನ (Tahawwur Rana) ಕೊನೆಗೂ ಭಾರತಕ್ಕೆ ಕರೆತರಲಾಗಿದೆ. ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಎನ್‌ಐಎ ಆತನನ್ನು ಬಂಧಿಸಿದೆ. ಆದರೆ ಹಸ್ತಾಂತರ ಪ್ರಕ್ರಿಯೆ ಮುಗಿದ ಬಳಿಕ ಅಮೆರಿಕದಿಂದ (USA) ಆತನನ್ನ ನಿಗೂಢವಾಗಿ ಭಾರತಕ್ಕೆ ಕರೆತಂದಿದ್ದು ಹೇಗೆ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ.
ಅಮೆರಿಕದಲ್ಲಿ ರಾಣಾ ಹಸ್ತಾಂತರ ಪ್ರಕ್ರಿಯೆ ಮುಗಿದಿ ಬಳಿಕ ಸೂಪರ್ ಮಿಡ್ ಸೈಜ್ ಬಿಸಿನೆಸ್ ಜೆಟ್‌ನಲ್ಲಿ ಅಮೆರಿಕದಿಂದ ನವದೆಹಲಿಗೆ ಕರೆತರಲಾಯಿತು. ಈ ವಿಶೇಷ ವಿಮಾನವನ್ನು ವಿಯೆನ್ನಾ ಮೂಲದ ವಿಮಾನ ಚಾರ್ಟರ್ ಸೇವೆಯಿಂದ ಬಾಡಿಗೆಗೆ ಪಡೆಯಲಾಗಿತ್ತು. ರಾಣಾನನ್ನು ಕರೆತಂದ ʻಗಲ್ಫ್‌ಸ್ಟ್ರೀಮ್-G550ʼ (Gulfstream G550) ವಿಶೇಷ ವಿಮಾನವು ದೀರ್ಘ ಶ್ರೇಣಿಯ ಮತ್ತು ಅತ್ಯಂತ ಆರಾಮದಾಯಕ ಒಳಾಂಗಣವನ್ನು ಒಳಗೊಂಡಿದೆ. 2013ರಲ್ಲಿ ನಿರ್ಮಿಸಲಾದ ಈ ಜೆಟ್ ಅಲ್ಟ್ರಾ ಲಾಂಗ್‌ರೇಂಜ್ ಮತ್ತು ಮಧ್ಯಮ ಗಾತ್ರದ್ದಾಗಿದೆ. ಇದನ್ನೂ ಓದಿ: ಮುಂಬೈ ದಾಳಿ ಮಾಸ್ಟರ್‌ಮೈಂಡ್ ತಹವ್ವೂರ್ ರಾಣಾ ಅರೆಸ್ಟ್
ಅಷ್ಟೇ ಅಲ್ಲ ಈ ವಿಮಾನದಲ್ಲಿ 9 ಆಸನಗಳು, 6 ಮಲಗುವ ಹಾಸಿಗೆ ಸೇರಿದಂತೆ 19 ಮಂದಿ ಹೈಕ್ಲಾಸ್ ಪ್ರಯಾಣ ಮಾಡಬಹುದಾಗಿದೆ. ವಿಮಾನದಲ್ಲೇ ಇಂಟರ್‌ನೆಟ್ ಸೇವೆ, ಸ್ಯಾಟಲೈಟ್ ಫೋನ್, ಮನರಂಜನಾ ವ್ಯವಸ್ಥೆಯಂತಹ ಐಷಾರಾಮಿ ಸೌಲಭ್ಯಗಳು ಇದೆ. ಇದನ್ನೂ ಓದಿ: 26 ರಫೇಲ್ ಯುದ್ಧ ವಿಮಾನ ಖರೀದಿ – ಭಾರತ ಫ್ರಾನ್ಸ್ ಮಧ್ಯೆ 63,000 ಕೋಟಿ ಡೀಲ್‌ಗೆ ಅನುಮೋದನೆ
ಟೈಮ್‌ಲೈನ್ ಹೇಗೆ?
ರಾಣಾನನ್ನು ಕರೆತರುವ ವಿಶೇಷ ವಿಮಾನ ಸ್ಥಳೀಯ ಕಾಲಮಾನ ಬುಧವಾರ ಬೆಳಗ್ಗಿನ ಜಾವ 2:15ಕ್ಕೆ ಮಿಯಾಮಿಯಿಂದ ಹೊರಟಿತ್ತು. ಅದೇ ದಿನ ಸಂಜೆ 7 ಗಂಟೆಗೆ ರುಮೇನಿಯಾದ ರಾಜಧಾನಿ ಬುಕಾರೆಸ್ಟ್‌ಗೆ ಆಗಮಿಸಿತು. ಬುಕಾರೆಸ್ಟ್‌ನಿಂದ 11 ಗಂಟೆ ಪ್ರಯಾಣದ ಬಳಿಕ ಗುರುವಾರ (ಇಂದು) ಸಂಜೆ 6:22ರ ಸುಮಾರಿಗೆ ದೆಹಲಿಯ ಪಾಲಂ ವಿಮಾನ ನಿಲ್ದಾಣ ತಲುಪಿತು. ಬಂದಿಳಿಯುತ್ತಿದ್ದಂತೆ ಎನ್‌ಐಎ ಅಧಿಕಾರಿಗಳ ತಂಡ ರಾಣಾನನ್ನ ಬಂಧಿಸಿತು. ಇದನ್ನೂ ಓದಿ: ಬಾಂಬ್ ದಾಳಿಗೂ ಜಗ್ಗಲ್ಲ – ಮುಂಬೈ ದಾಳಿಕೋರನನ್ನ ಕರೆತರಲು ಸಿದ್ಧವಾಯ್ತು NIA ಬುಲೆಟ್ ಪ್ರೂಫ್ ಕಾರು