ಬೆಂಗಳೂರು: ವಿದ್ಯಾರ್ಥಿಗಳಿಗೆ ಫೋನ್ ಬಳಕೆ ನಿರ್ಬಂಧದ ಬಗ್ಗೆ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ನಿಮ್ಹಾನ್ಸ್‌ನಿಂದ ಡಿಜಿಟಲ್ ಬಳಕೆಯ ಪರಿಣಾಮ ಅನುಷ್ಠಾನ ಮಾರ್ಗಸೂಚಿ ರಿಲೀಸ್ ಆಗಿದೆ.
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ ಹೇರುವ ವಿಷಯ ಚರ್ಚೆ ಇರುವ ಬೆನ್ನಲ್ಲೇ ಮಕ್ಕಳು ಡಿಜಿಟಲ್ ಬಳಕೆ ಬಗ್ಗೆ ನಿಮಾನ್ಸ್ ತಜ್ಞರ ತಂಡ ಅಧ್ಯಯನ ನಡೆಸಿದೆ. ಮಕ್ಕಳು ಡಿಜಿಟಲ್ ಬಳಕೆ ಹೇಗಿರಬೇಕು? ಡಿಜಿಟಲ್ ಬಳಕೆಯಲ್ಲಿ ಪೋಷಕರು, ಶಿಕ್ಷಕರು, ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಆರೋಗ್ಯ ಇಲಾಖೆ ಪಾತ್ರ ಹೇಗಿರಬೇಕು ಅಂತಾ ಅಧ್ಯಯನ ನಡೆಸಿ ವರದಿ ಸಿದ್ಧಮಾಡಿದೆ. 27 ಪುಟಗಳ ಒಳಗೊಂಡ ಅಧ್ಯಯನದ ವರದಿಯನ್ನ ನಿಮ್ಹಾನ್ಸ್ ಆರೋಗ್ಯ ಇಲಾಖೆಗೆ ಶಿಫಾರಸು ಮಾಡಿದೆ.ಇದನ್ನೂ ಓದಿ:ಮಿನಿಸ್ಟರ್ Vs MLA ವಾರ್ – ಸ್ವಪಕ್ಷೀಯ ಸಚಿವರ ವಿರುದ್ಧವೇ ಸರ್ಕಾರಿ ಜಮೀನು ನುಂಗಿದ ಆರೋಪ: ರಮೇಶ್ ಬಂಡಿಸಿದ್ದೇಗೌಡ
ವಿದ್ಯಾರ್ಥಿಗಳಲ್ಲಿ ಜಾಗೃತಿ ಹಾಗೂ ಇನ್ಮುಂದೆ ಶಾಲೆಗಳಲ್ಲಿ ಕಡ್ಡಾಯ ಡಿಜಿಟಲ್ ವೆಲ್‌ನೆಸ್ ಕಮಿಟಿ ಇರಬೇಕು. ಪ್ರತಿ ಶಾಲೆಯಲ್ಲಿಯೂ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಗತಿ, ಫೋನ್ ಅಡಿಕ್ಷನ್ ಬಗ್ಗೆ ಗಮನಹರಿಸಲು ಒಬ್ಬ ಶಿಕ್ಷಕರಿಗೆ ಟ್ರೈನಿಂಗ್ ಕೊಡ್ಬೇಕು. ವಿದ್ಯಾರ್ಥಿಗಳ ಫೋನ್‌ಗಳಲ್ಲಿ ಆಡಿಯೋ ಮಾತ್ರ ಇರಬೇಕು. ಸಂಜೆ 7 ಗಂಟೆಯ ನಂತರ ಸಂಪೂರ್ಣ ಡೇಟಾ ಬಂದ್ ಸೇರಿದಂತೆ ಹಲವು ವಿಷಯಗಳು ಗೈಡ್‌ಲೈನ್ಸ್‌ನಲ್ಲಿದೆ.
ವಿದ್ಯಾರ್ಥಿಗಳ ಡಿಜಿಟಲ್ ಬಳಕೆ ಹೇಗೆ?
1. ಹೆಲ್ತಿ ಸ್ಕ್ರೀನ್ ಟೈಂ ಪ್ರಾಕ್ಟಿಸ್ ಮಾಡಿಕೊಳ್ಳಬೇಕು.
2. ಆನ್‌ಲೈನ್ ಸೇಫ್ಟಿ ತಿಳಿದುಕೊಳ್ಳಬೇಕು
3. ಬೌದ್ಧಿಕ ಬೆಳವಣಿಗೆಗೆ ಟೆಕ್ನಾಲಜಿ ಬಳಕೆ ಮಾಡಿಕೊಳ್ಳಬೇಕು
4. ಡಿಜಿಟಲ್ ಬಳಕೆಗೆ ಮುನ್ನ ಆನ್‌ಲೈನ್ ರಿಸ್ಕ್ & ಸೈಬರ್ ಫ್ರಾಡ್ ಬಗ್ಗೆ ತಿಳಿದುಕೊಳ್ಳಬೇಕು
5. ಆಫ್‌ಲೈನ್ ಆ್ಯಕ್ಟಿವಿಟಿಗಳನ್ನು ಅಳವಡಿಸಿಕೊಳ್ಳಬೇಕು
5. ಡಿಜಿಟಲ್ ಬಳಕೆಯ ಕಾರ್ಯಾಗಾರಗಳಲ್ಲಿ ಭಾಗಿಯಾಗಬೆಕು
6. ವಿದ್ಯಾರ್ಥಿಗಳಿಗೆ ಸೈಬರ್ ಬುಲ್ಲಿಂಗ್ ಬಗ್ಗೆ ಜಾಗೃತಿ, ಸೈಬರ್ ಸಂಬಂಧಿ ಕಿರುಕುಳ ಬೆದರಿಕೆ ಬಂದಾಗ ಅದನ್ನು ಶಿಕ್ಷಕರ ಗಮನಕ್ಕೆ ತರುವಂತೆ ಪ್ರೋತ್ಸಾಹಿಸಬೇಕು.
7. ಶಾಲೆಗಳು ಸೈಬರ್ ಕ್ರೈಂ ಪೊಲೀಸ್ ಸ್ಟೇಷನ್ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು.
8. ಮೊಬೈಲ್ ಬಳಕೆಯಿಂದ ಹೊರತರಲು ಹೋರಾಂಗಣ ಕ್ರೀಡೆಗೆ ಒತ್ತು ಕೊಡಬೇಕು
9. ಸಂಗೀತ, ಕಲೆ, ನೃತ್ಯ, ಸಾಹಿತ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸಬೇಕು.
ಪೋಷಕರ ಪಾತ್ರ ಏನು ?
1. ಮಕ್ಕಳ ಸ್ಕ್ರೀನ್ ಟೈಂಗೆ ಸಮಯ ನಿಗದಿ ಮಾಡಬೇಕು
2. ಡಿಜಿಟಲ್ ಬಳಕೆ ಬಿಟ್ಟು, ಫ್ಯಾಮಿಲಿ ಜೊತೆ ಸಮಯ ಕಳೆಯುವ ವಾತಾವರಣ ಸೃಷ್ಟಿಸಬೇಕು
3. ಮಕ್ಕಳ ಡಿಜಿಟಲ್ ಬಳಕೆ ಬಗ್ಗೆ ನಿಗಾ ವಹಿಸಬೇಕು
4. ಡಿಜಿಟಲ್ ಬಳಕೆ ಕಾರ್ಯಾಗಾರಕ್ಕೆ ಕಳಿಸಬೇಕು
5. ಆನ್‌ಲೈನ್ ಬಿಟ್ಟು ಧನಾತ್ಮಕ ಆಫ್‌ಲೈನ್ ಆ್ಯಕ್ಟಿವಿಟಿಗಳನ್ನು ಮಾಡಿಸಬೇಕು.ಇದನ್ನೂ ಓದಿ:ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಮೇ ತಿಂಗಳಲ್ಲಿ ಪಿಂಕ್ ಲೈನ್ ಸಂಚಾರಕ್ಕೆ ಮುಕ್ತ

