ಪ್ರತಿ ವರ್ಷ ಬಕ್ರೀದ್ ಹಬ್ಬಕ್ಕಾಗಿ ಚಿಕನ್ ಫ್ರೈ, ಕಬಾಬ್ ಮಾಡುತ್ತೀರಿ. ಈ ವರ್ಷ ಬಕ್ರೀದ್ ಹಬ್ಬಕ್ಕಾಗಿ ಏನಾದರೂ ವಿಶೇಷವಾದ ಅಡುಗೆ ಮಾಡಬೇಕು ಎಂದುಕೊಂಡಿರುತ್ತೀರಾ. ಆದ್ದರಿಂದ ನಿಮಗಾಗಿ ಸ್ಪೆಷಲ್ ಮಟನ್ ಲಿವರ್ ಫ್ರೈ ಮಾಡುವ ವಿಧಾನ ಇಲ್ಲಿದೆ..
ಬೇಕಾಗುವ ಸಾಮಾಗ್ರಿಗಳು
1. ಮಟನ್ ಲಿವರ್ – 1/4 ಕೆಜಿ
2. ಈರುಳ್ಳಿ – 1 ದಪ್ಪದು
3. ಎಣ್ಣೆ – ಕೊತ್ತಂಬರಿ
4. ಬ್ಲಾಕ್ ಪೆಪ್ಪರ್ ಪುಡಿ – ಒಂದೂವರೆ ಚಮಚ
5. ಅರಿಶಿನ ಪುಡಿ – ಚಿಟಿಕೆ
6. ಖಾರದ ಪುಡಿ – 1 ಚಮಚ
7. ನಿಂಬೆ ರಸ – 1 ಹಣ್ಣಿನ ರಸ
8. ಶುಂಠಿ – ಬೆಳ್ಳುಳ್ಳಿ ಪೇಸ್ಟ್
9. ಉಪ್ಪು – ರುಚಿಗೆ ತಕ್ಕಷ್ಟು
Advertisement
Advertisement
ಮಾಡುವ ವಿಧಾನ
* ನಾನ್ ಸ್ಟಿಕ್ ಪ್ಯಾನ್‍ಗೆ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಅದಕ್ಕೆ ಉದ್ದುದ್ದಕ್ಕೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಈರುಳ್ಳಿ ಗೋಲ್ಡನ್ ಬ್ರೌನ್ ಬರುವ ತನಕ ಫ್ರೈ ಮಾಡಿರಿ.
* ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವ ತನಕ ಕೈಯಾಡಿಸಿ.
* ನಂತರ ತೊಳೆದ ಮಟನ್ ಲಿವರ್ ಸೇರಿಸಿ. ಬಣ್ಣ ಬದಲಾಗುವವರೆಗೆ ಫ್ರೈ ಮಾಡಿರಿ.
* ಲಿವರ್ ಬಣ್ಣ ಬದಲಾದ ಮೇಲೆ ಅದಕ್ಕೆ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ, ಬ್ಲಾಕ್ ಪೆಪ್ಪರ್ ಪುಡಿ ಸೇರಿಸಿ ಮಿಕ್ಸ್ ಮಾಡಿರಿ.
* 3-4 ನಿಮಿಷ ಕಡಿಮೆ ಉರಿಯಲ್ಲಿ ಲಿಡ್ ಮುಚ್ಚಿ ಬೇಯಲು ಬಿಡಿ.
* ಮಿಶ್ರಣದೊಂದಿಗೆ ಲಿವರ್ ಬೆಂದ ಬಳಿಕ. ಅದಕ್ಕೆ ಕೊತ್ತಂಬರಿ ಸೊಪ್ಪು, ನಿಂಬೆ ಹಣ್ಣಿನ ರಸ ಸೇರಿಸಿ ಕೆಳಗಿಳಿಸಿರಿ.
( ಬೇಕಿದ್ದಲ್ಲಿ ಚೆನ್ನಾಗಿ ಬಲಿತ ಕರಿಬೇವನ್ನು ಎಣ್ಣೆಯಲ್ಲಿ ಫ್ರೈ ಮಾಡಿ ಸೇರಿಸಬಹುದು)
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv