ಬೇಸಿಗೆಯ ಬೇಗೆ ಶುರುವಾಗಿದೆ. ಅಂಗಡಿ ಮುಗ್ಗಟ್ಟುಗಳಲ್ಲಿ ಪಾನೀಯಗಳ ಬೇಡಿಕೆ ಹೆಚ್ಚಾಗಿದೆ. ಮಾರುಕಟ್ಟೆಗೆ ರಾಶಿ ರಾಶಿ ಹಣ್ಣುಗಳು ಬಂದಿವೆ. ಕಲ್ಲಂಗಡಿ ಹೆಚ್ಚಾಗಿ ಎಲ್ಲರ ಗಮನವನ್ನು ಸೆಳೆಯುತ್ತಿದೆ. ತಂಪು ಮತ್ತು ಆರೋಗ್ಯಕರವಾದ ಕಲ್ಲಂಗಡಿ ಎಂದರೆ ಎಲ್ಲರಿಗೂ ಇಷ್ಟ. ಇದೇ ಹಣ್ಣನ್ನು ಕಟ್ ಮಾಡಿ ಹಾಗೇ ತಿನ್ನುವುದು ಮಾತ್ರವಲ್ಲದೆ ಜ್ಯೂಸ್ ಮತ್ತು ಸ್ಮೂತಿಯನ್ನ ಮನೆಯಲ್ಲಯೇ ತಯಾರಿಸಿ ಸವಿಯಿರಿ
Advertisement
ಬೇಕಾಗುವ ಸಾಮಗ್ರಿಗಳು:
* ಕಲ್ಲಂಗಡಿ ಹಣ್ಣು- 2 ಕಪ್
* ಮೊಸರು- 1 ಕಪ್
* ಜೇನುತುಪ್ಪ-3 ಸ್ಪೂನ್
* ಐಸ್ ಕ್ಯೂಬ್ಸ್ 3
Advertisement
Advertisement
ಮಾಡುವ ವಿಧಾನ :
* ಕಲ್ಲಂಗಡಿ ಹಣ್ಣು, ಜೇನು ಹಾಗೂ ಪುದಿನಾ ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ
* ಇದೇ ಜಾರಿಗೆ ಮೊಸರು ಹಾಕಿ ಮತ್ತೆ ಚೆನ್ನಾಗಿ ರುಬ್ಬಿಕೊಳ್ಳಿ ಇದನ್ನೂ ಓದಿ: ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ
* ನಂತರ ಒಂದು ಗ್ಲಾಸ್‍ಗೆ ರುಬ್ಬಿದ ಕಲ್ಲಂಗಡಿ ಸ್ಮೂತಿ ಹಾಕಿ ಐಸ್ ಕ್ಯೂಬ್ಸ್ ಹಾಕಿ ಬೇಕಾದಲ್ಲಿ ಸಕ್ಕರೆಯನ್ನು ಸೇರೆಸಿಕೊಳ್ಳಿ. ರುಚಿಯಾದ ತಂಪಾದ ಕಲ್ಲಂಗಡಿ ಸ್ಮೂತಿ ಸಿದ್ಧವಾಗುತ್ತದೆ. ಇದನ್ನೂ ಓದಿ: ಬಸ್ಸಾರು ಮಾಡುವ ಸರಳ ವಿಧಾನ ನಿಮಗಾಗಿ