ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರವಾಗಿದೆ. ನೀವು ಫ್ರೈಡ್ ರೈಸ್ ಇಷ್ಟಪಡುವುದಾದರೆ ಹಲವಾರು ರುಚಿಯಲ್ಲಿ ಸವಿಯಬಹುದು. ವೆಜ್ ಫ್ರೈಡ್ ರೈಸ್, ಎಗ್, ನಾನ್‍ವೆಜ್ ಫ್ರೈಡ್ ರೈಸ್ ಹೀಗೆ ನಾನಾ ರುಚಿಯಲ್ಲಿ ಮಾಡಿ ಸವಿಯಬಹುದು. ಇಲ್ಲಿ ನಾವು ಸ್ವೀಟ್ ಕಾರ್ನ್ ಫ್ರೈಡ್ ರೈಸ್ ರೆಸಿಪಿ ಮಾಡುವುದು ಹೇಗೆ ಎಂಬುದನ್ನು ನೋಡಿ ನೀವು ಮನೆಯಲ್ಲಿ ಟ್ರೈ ಮಾಡಿ ನಿಮ್ಮ ಮನೆ ಮಂದಿಗೆ ಇಷ್ಟವಾಗುತ್ತದೆ.
Advertisement
ಬೇಕಾಗುವ ಸಾಮಗ್ರಿಗಳು:
Advertisement
* ಅಕ್ಕಿ-1 ಕಪ್
* ಸ್ವೀಟ್ ಕಾರ್ನ್ 1 ಕಪ್
* ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ
* ಸೋಯಾ ಸಾಸ್ 1 ಚಮಚ
* ವಿನೆಗರ್ 1 ಚಮಚ
* ಚಿಲ್ಲಿ ಸಾಸ್ 1 ಚಮಚ
* ಸ್ಪ್ರಿಂಗ್‍ಆನಿಯನ್ 2 ಚಮಚ
* ಅಡುಗೆ ಎಣ್ಣೆ- ಅರ್ಧ ಕಪ್
* ರುಚಿಗೆ ತಕ್ಕ ಉಪ್ಪು
* ಹಸಿ ಮೆಣಸಿನಕಾಯಿ- 2
*ಈರುಳ್ಳಿ-1
Advertisement
Advertisement
ಮಾಡುವ ವಿಧಾನ:
* ಅಕ್ಕಿಯನ್ನು ನೀರಿನಲ್ಲಿ 10 ನಿಮಿಷ ನೆನೆಹಾಕಿ. ನಂತರ ಬೇಯಿಸಿ.
* ಸ್ವೀಟ್ ಕಾರ್ನ್ ಬೇಯಿಸಿ ಇಡಿ.
* ಪ್ಯಾನ್ ಎಣ್ಣೆ ಹಾಕಿ ಬಿಸಿಯಾದ ನಂತರ ಅದಕ್ಕೆ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು.
* ಈಗ ಸ್ವೀಟ್ ಕಾರ್ನ್, ವಿನೆಗರ್, ಸೋಯಾ ಸಾಸ್, ಚಿಲ್ಲಿ ಸಾಸ್ ಹಾಕಿ ಚೆನ್ನಾಗಿ ಬೇಯಿಸಬೇಕು. ಇದನ್ನೂ ಓದಿ: ಬಿಸಿ ಬಿಸಿ ಕ್ಯಾಪ್ಸಿಕಂ ಬೋಂಡಾ ಮಾಡಿ ಸವಿಯಿರಿ
* ಈಗ ರುಚಿಗೆ ತಕ್ಕ ಉಪ್ಪು, ಬೇಯಿಸಿದ ಅನ್ನ ಹಾಕಿ ಮಿಶ್ರ ಮಾಡಿದರೆ ಸ್ವೀಟ್ ಕಾರ್ನ್ ಫ್ರೈಡ್ ರೈಸ್ ಸಿದ್ಧವಾಗುತ್ತದೆ.
* ಬೇಕಾದಲ್ಲಿ ಈ ಮಿಶ್ರಣಕ್ಕೆ ಕ್ಯಾರೆಟ್, ಕ್ಯಾಪ್ಸಿಕಂ, ಬೀನ್ಸ್ ಇವೆಲ್ಲಾ ಸೇರಿಸಿದರೆ ರುಚಿಯಾಗಿರುತ್ತದೆ.