ಭಾರತೀಯ ಅಡುಗೆಗಳಲ್ಲಿ ಚಟ್ನಿಗೆ ವಿಶೇಷ ಸ್ಥಾನವಿದೆ. ಅಡುಗೆ ಪರಿಣಿತರ ಪ್ರತಿಭೆಯಿಂದಾಗಿ ಕೆಲವೇ ಪದಾರ್ಥಗಳನ್ನು ಬಳಸಿ ಮಾಡುವ ಈ ಚಟ್ನಿ ಬಾಯಲ್ಲಿ ನೀರೂರಿಸುವಂತಿರುತ್ತದೆ. ದೋಸೆ, ಚಪಾತಿ, ರೊಟ್ಟಿಗೆ ತೆಂಗಿನ ಕಾಯಿ ಚಟ್ನಿ ಮಾಡಿ.
Advertisement
ಬೇಕಾಗುವ ಸಾಮಗ್ರಿಗಳು:
* ತೆಂಗಿನಕಾಯಿ ತುರಿ- 1 ಕಪ್
* ಈರುಳ್ಳಿ- 2
* ಹಸಿಮೆಣಸು- 5
* ರುಚಿಗೆ ತಕ್ಕಷ್ಟು ಉಪ್ಪು
* ಹುಣಸೆಹಣ್ಣು- ಸ್ವಲ್ಪ
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಬೆಲ್ಲ- ಸ್ವಲ್ಪ
* ಅಡುಗೆ ಎಣ್ಣೆ- 2 ಚಮಚ
* ಸಾಸಿವೆ- ಅರ್ಧ ಚಮಚ
* ಇಂಗು- ಸ್ವಲ್ಪ
* ಕರಿ ಬೇವು- ಸ್ವಲ್ಪ
Advertisement
Advertisement
ಮಾಡುವ ವಿಧಾನ:
* ಮಿಕ್ಸರಿಗೆ ಕಾಯಿ, ಈರುಳ್ಳಿ, ಉಪ್ಪು, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಬೆಲ್ಲ, ಹುಣಸೆಹಣ್ಣು ಹಾಗೂ ಸ್ವಲ್ಪ ನೀರನ್ನು ಹಾಕಿ ಸಣ್ಣಗೆ ರುಬ್ಬಿಕೊಳ್ಳಬೇಕು. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್
Advertisement
* ಬೇಕಾದಲ್ಲಿ ಮತ್ತೆ ನೀರನ್ನು ಹಾಕಿ ತಿರುವಿದರೆ ಚಟ್ನಿ ಈಗ ರೆಡಿ. ಇದನ್ನೂ ಓದಿ: ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ
* ಒಂದು ಸೌಟಿಗೆ ಚಮಚ ಅಡುಗೆ ಎಣ್ಣೆ, ಸಾಸಿವೆ, ಇಂಗು ಹಾಕಿ. ಸಾಸಿವೆ ಕರಿಬೇವನ್ನು ಹಾಕಿ. ಇದನ್ನು ಚಟ್ನಿಗೆ ಹಾಕಿ ಮಿಕ್ಸ್ ಮಾಡಿ ಒಗ್ಗರಣೆ ಮಾಡಿದರೆ ರುಚಿಯಾದ ಚಟ್ನಿ ಸವಿಯಲು ಸಿದ್ಧವಾಗುತ್ತದೆ.