ಲಾಕ್‍ಡೌನ್ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲಿದ್ದಾರೆ. ಸಂಜೆ ಆದರೆ ಸಾಕು ಎಲ್ಲರೂ ಟೀ ಜೊತೆ ತಿನ್ನಲು ಏನಾದರೂ ಸ್ಯಾಕ್ಸ್ ಕೇಳುತ್ತಾರೆ. ಆದ್ದರಿಂದ ನಿಮಗಾಗಿ ಸಣ್ಣ ಚೌಚೌ ಮಾಡುವ ವಿಧಾನ ಇಲ್ಲಿದೆ……
ಬೇಕಾಗುವ ಸಾಮಗ್ರಿಗಳು
1. ಕಡ್ಲೆಹಿಟ್ಟು – 1/2 ಕಪ್
2. ಉಪ್ಪು – ರುಚಿಗೆ ತಕ್ಕಷ್ಟು
3. ಓಂ ಕಾಳು – ಸ್ವಲ್ಪ
4. ಖಾರದ ಪುಡಿ – ಸ್ವಲ್ಪ
5. ಚಕ್ಕುಲಿ ಒರಳು
6. ಎಣ್ಣೆ – ಕರಿಯಲು
Advertisement
Advertisement
ಮಾಡುವ ವಿಧಾನ
* ಒಂದು ಮಿಕ್ಸಿಂಗ್ ಬೌಲ್‍ಗೆ ಕಡ್ಲೆಹಿಟ್ಟು, ಉಪ್ಪು, ಖಾರದ ಪುಡಿ, ಓಂ ಕಾಳನ್ನು ಪುಡಿ ಮಾಡಿ ಹಾಕಿ ಮಿಕ್ಸ್ ಮಾಡಿ.
* ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಚಕ್ಕುಲಿ ಹದಕ್ಕೆ ಕಲಿಸಿಕೊಳ್ಳಿ.
* 15-20 ನಿಮಿಷ ನೆನೆಯಲು ಬಿಡಿ
* ಈಗ ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ.
* ಈ ವೇಳೆ ಚಕ್ಕುಲಿ ಒರಳಿಗೆ ಸಣ್ಣ ಸಣ್ಣ ತೂತಿನ ಪ್ಲೇಟ್ ಹಾಕಿ ಎಣ್ಣೆ ಸವರಿ ಒಂದು ಉಂಡೆ ಹಿಟ್ಟನ್ನು ಹಾಕಿ.
* ಎಣ್ಣೆ ಕಾದ ಮೇಲೆ ಡೈರೆಕ್ಟ್ ಆಗಿ ಎಣ್ಣೆಗೆ ಚೌಚೌವನ್ನು ಒರಳಿನಿಂದ ಪ್ರೆಸ್ ಮಾಡಿ ಹಾಕಿ ಫ್ರೈ ಮಾಡಿ.
* 2-4 ನಿಮಿಷಗಳ ಫ್ರೈ ಮಾಡಿದರೆ ಸಣ್ಣ ಚೌಚೌ ಸವಿಯಲು ಸಿದ್ಧ.