ನೆತ್ತಿ ಮೇಲೆ ಬಿಸಿಲು ಸುಡುತ್ತಿದ್ದರೆ ಏನಾದ್ರೂ ತಂಪು ತಂಪಾಗಿರುವ ಪಾನೀಯ ಕುಡಿಯಬೇಕು ಅನಿಸುವುದು ಸಹಜ. ಅಂತೆಯೇ ಈ ವೇಳೆ ನಾವು ಹಣ್ಣುಗಳ ಜ್ಯೂಸ್ ಕುಡಿಯಲು ಅಂಗಡಿಗಳಿಗೆ ತೆರಳುತ್ತೇವೆ. ಆದರೆ ಮನೆಯಲ್ಲಿಯೇ ತಂಪಾದ ಎಳ್ಳು ಜ್ಯೂಸ್ ಮಾಡಿ ಕುಡಿಯಬಹುದು. ಇದು ಆರೋಗ್ಯಕ್ಕೂ ಒಳ್ಳೆಯದು.
ಹೌದು. ಎಳ್ಳು ಅನೇಕ ಆರೋಗ್ಯಕಾರಿ ಅಂಶಗಳನ್ನು ಹೊಂದಿದೆ. ಇದು ಅಸ್ತಮಾ, ರಕ್ತದೊತ್ತಡ, ಹೃದಯಾಘಾತ, ಪಾರ್ಶ್ವವಾಯು, ಕರುಳಿನ ಕ್ಯಾನ್ಸರ್, ಆಸ್ಟಿಯೊಪೊರೋಸಿಸ್, ಮೈಗ್ರೇನ್ ಹಾಗೂ ಮಧುಮೇಹ ರೋಗಗಳಿಗೆ ರಾಮಬಾಣ ಎಂದು ಹೇಳಲಾಗುತ್ತಿದೆ. ಇಷ್ಟು ಆರೋಗ್ಯಕರವಾದ ಎಳ್ಳು ಜ್ಯೂಸ್ ಮಾಡುವ ಸುಲಭ ವಿಧಾನ ಇಲ್ಲಿದೆ.
Advertisement
Advertisement
ಬೇಕಾಗುವ ಸಾಮಗ್ರಿಗಳು:
ಬಿಳಿ ಎಳ್ಳು- ಅರ್ಧ ಕಪ್
ಪುಡಿ ಮಾಡಿದ ಬೆಲ್ಲ- ಅರ್ಧ ಕಪ್
ನೀರು- 2 ಕಪ್
ಹಾಲು- 2 ಕಪ್
ಏಲಕ್ಕಿ- 1
Advertisement
Advertisement
ಮಾಡುವ ವಿಧಾನ:
* ಚಿಕ್ಕ ಬಾಣಲೆಗೆ ಎಣ್ಣೆ ಹಾಕದೆ ಎಳ್ಳು ಸ್ವಲ್ಪ ಉಬ್ಬುವವರೆಗೆ ಹುರಿದಿಟ್ಟುಕೊಳ್ಳಬೇಕು. ನಂತರ ಅದು ತಣ್ಣಗಾಗುವವರೆಗೆ ಬಿಡಬೇಕು.
* ಎಳ್ಳು ತಣಿದ ಬಳಿಕ ಅದಕ್ಕೆ ಬೆಲ್ಲ ಹಾಗೂ ಏಲಕ್ಕಿಯನ್ನು ಹಾಕಿ ಮಿಕ್ಸಿ ಜಾರಿನಲ್ಲಿ ಪುಡಿಮಾಡಿಕೊಳ್ಳಿ. ಈ ವೇಳೆ ಅಗತ್ಯಕ್ಕೆ ಬೇಕಾದಷ್ಟು ನೀರು ಬಳಸಿಕೊಂಡು ನಯವಾಗಿ ಅರೆಯಿರಿ. ಇದನ್ನೂ ಓದಿ: ಬೇಸಿಗೆಗೆ ತಂಪಾದ ಸೋಲ್ ಕಡಿ ಅಥವಾ ಕೋಕಮ್ ಡ್ರಿಂಕ್ ಮಾಡಿ ಸವಿಯಿರಿ
* ಹೀಗೆ ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಹಾಲು ಮತ್ತು ಉಳಿದ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
* ಚೆನ್ನಾಗಿ ಮಿಕ್ಸ್ ಆದ ಬಳಿಕ ಕೆಲ ಹೊತ್ತು ಫ್ರಿಡ್ಜ್ ನಲ್ಲಿಡಿ. ಈಗ ತಂಪಾದ ಎಳ್ಳು ಜ್ಯೂಸ್ ಸವಿಯಿರಿ. ಇದನ್ನೂ ಓದಿ: ತೂಕ ಇಳಿಸಿಕೊಳ್ಳಲು ಬಯಸುವವರು ಓಟ್ಸ್ ಸೂಪ್ ಮಾಡಿ ಸವಿಯಿರಿ