ಗುಲಾಬಿ ದಳಗಳನ್ನೂ ಸಹ ಬಳಸಿ ಚಿಕ್ಕಿ ಮಾಡ್ಬಹುದು. ಇದು ಗುಲಾಬಿ ಪರಿಮಳ ಮತ್ತು ರುಚಿಯನ್ನು ಹೊಂದಿರುತ್ತದೆ. ನೀವು ರೋಸ್ ಪ್ರಿಯರಾಗಿದ್ರೆ ಇದು ಮತ್ತಷ್ಟು ನಾಲಿಗೆಗೆ ರುಚಿ ಕೊಡುತ್ತೆ.
ಬೇಕಾಗುವ ಪದಾರ್ಥಗಳು
*ಸಕ್ಕರೆ – ¾ ಬಟ್ಟಲು
*ಗೋಡಂಬಿ, ಬಾದಾಮಿ, ಪಿಸ್ತಾ ಚೂರುಗಳು – ¾ ಬಟ್ಟಲು
*ಒಣಗಿದ ಗುಲಾಬಿ ದಳ – 4 ಬಟ್ಟಲು
ಮಾಡುವ ವಿಧಾನ
1. ಎಲ್ಲ ಬೀಜಗಳನ್ನೂ 2 ನಿಮಿಷ ಮೈಕ್ರೋವೇವ್‌ನಲ್ಲಿ ಇಟ್ಟು ಬಿಸಿ ಮಾಡಬೇಕು. ನಂತರ ತಣ್ಣಗಾಗಲು ಬಿಡಬೇಕು.
2. ಒಂದು ಪಾತ್ರೆಯಲ್ಲಿ ಸಕ್ಕರೆ ಮತ್ತು 50 ಮಿಲಿ ನೀರನ್ನು ಹಾಕಿ. ಸಣ್ಣ ಉರಿಯಲ್ಲಿ ಕುದಿಸಬೇಕು. ಸಕ್ಕರೆಯು ಕರಗಲು ಆರಂಭವಾಗುತ್ತಿದ್ದಂತೆ ತೆಗೆಯಬೇಕು.
3. ಸ್ಟವ್‌ನಿಂದ ಪಾತ್ರೆ ತೆಗೆಯಬೇಕು. ನಂತರ ಸಕ್ಕರೆಗೆ ಮೇಲೆ ಹೇಳಲಾದ ಬೀಜಗಳು, ಗುಲಾಬಿ ದಳಗಳನ್ನು ಹಾಕಿ ಚೆನ್ನಾಗಿ ಕಲಿಸಬೇಕು.
4 ಒಂದು ತಟ್ಟೆಗೆ ಎಣ್ಣೆಯನ್ನು ಸವರಿ ಮತ್ತು ಈ ಮಿಶ್ರಣವನ್ನು ಅದರಲ್ಲಿ ಹರಡಿ. ಲಟ್ಟಣಿಗೆಯಲ್ಲಿ ಲಟ್ಟಿಸಿದರೆ ತೆಳುವಾದ ಚಿಕ್ಕಿ ಸಿದ್ಧವಾಗುತ್ತದೆ. ಇನ್ನೂ ಸ್ವಲ್ಪ ಬಿಸಿ ಇರುವಾಗಲೇ ಚಾಕುವಿನಿಂದ ಚೌಕಾಕಾರವಾಗಿ ಕತ್ತರಿಸಬೇಕು. ಈಗ ನಿಮ್ಮ ಮುಂದೆ ಗುಲಾಬಿ ಚಿಕ್ಕಿ ಸವಿಯಲು ಸಿದ್ಧ!