ನಾಲಿಗೆಯನ್ನು ತಣಿಸುವ ರುಚಿಕರ ತರಕಾರಿ ಸಾರು ಮಾಡಿಕೊಳ್ಳುವ ಬಯಕೆ ನಿಮಗಾಗಿಲ್ಲವೆ. ಹಾಗದ್ರೆ ಕ್ಯಾರೆಟ್, ಮೂಲಂಗಿ, ಕ್ಯಾಪ್ಸಿಕಂ (ದಪ್ಪ ಮೆಣಸಿನ ಕಾಯಿ), ಹಸಿರು ಬಟಾಣಿ, ಬೀಟ್‍ರೂಟ್, ಎಲೆಕೋಸು, ಹೂಕೋಸು ಹೀಗೆ ತರಹೇವಾರಿ ತರಕಾರಿಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿವೆ. ಇಂದು ರುಚಿಕರವಾದ ಆಲೂ ಕ್ಯಾಪ್ಸಿಕಂನ ಕರಿಯನ್ನು ಮಾಡಿದರೆ ಬಿಸಿ ಬಿಸಿಯಾದ ಅನ್ನಕ್ಕೆ ಸೂಪರ್ ಆಗಿರುತ್ತದೆ. ಒಮ್ಮೆ ನೀವು ಮನೆಯಲ್ಲಿ ಮಾಡಲು ಪ್ರಯತ್ನಿಸಲು ಇಲ್ಲಿದೆ ಮಾಡುವ ವಿಧಾನ ಜೊತೆಗೆ ಬೇಕಾಗುವ ಸಾಮಗ್ರಿಗಳ ಪಟ್ಟಿ.
Advertisement
ಬೇಕಾಗುವ ಸಾಮಗ್ರಿಗಳು:
Advertisement
* ಆಲೂಗಡ್ಡೆ- 4
* ಕ್ಯಾಪ್ಸಿಕಂ – 3
* ಈರುಳ್ಳಿ – 1
* ಟೊಮೆಟೊ – 2
* ಬೆಳ್ಳುಳಿ – 1
* ಅರಿಶಿಣ ಪುಡಿ – 1 ಟೀ ಸ್ಪೂನ್
* ಖಾರದ ಪುಡಿ – 1 ಟೀ ಸ್ಪೂನ್
* ಜೀರಿಗೆ ಪುಡಿ – 2 1 ಟೀ ಸ್ಪೂನ್
* ಗರಂ ಮಸಾಲ ಪುಡಿ – 1 ಟೀ ಸ್ಪೂನ್
* ಜೀರಿಗೆ – 1 1 ಟೀ ಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಅಡುಗೆ ಎಣ್ಣೆ- 1 ಟೀ ಸ್ಪೂನ್
Advertisement
Advertisement
ಮಾಡುವ ವಿಧಾನ:
* ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿಕೊಂಡು ಕಾಯಿಸಿ ಮತ್ತು ಅದಕ್ಕೆ ಜೀರಿಗೆ, ಬೆಳ್ಳುಳ್ಳಿ, ಈರುಳ್ಳಿ ಸೇರಿಸ ಚೆನ್ನಾಗಿ ಫ್ರೈ ಮಾಡಿ.
* ನಂತರ ಅರಿಶಿಣ ಪುಡಿ, ಖಾರದ ಪುಡಿ, ಜೀರಿಗೆ ಪುಡಿ, ಆಲೂಗಡ್ಡೆಗಳು, ಕ್ಯಾಪ್ಸಿಕಂ ಅನ್ನು ಬೆರೆಸಿ. 4-5 ನಿಮಿಷಗಳ ಕಾಲ ಬೇಯಿಸಿ. ನಂತರ, ಇದಕ್ಕೆ ಕತ್ತರಿಸಿದ ಟೊಮೇಟೊ, ಉಪ್ಪು, ಸ್ವಲ್ಪ ನೀರು ಸೇರಿಸಿ ಬೇಯಿಸಬೇಕು. ಇದನ್ನೂ ಓದಿ:
ಫಟಾ ಫಟ್ ಅಂತ ಮಾಡಿ ಟೊಮೆಟೊ ಚಟ್ನಿ
* ತರಕಾರಿಗಳೆಲ್ಲ ಬೆಂದ ಮೇಲೆ, ಮುಚ್ಚಳವನ್ನು ತೆಗೆಯಿರಿ, ಅದರ ಮೇಲೆ ಗರಂ ಮಸಾಲವನ್ನು ಚಿಮುಕಿಸಿ.
* ಈಗ ಉರಿಯನ್ನು ಆರಿಸಿ, ಕರಿಯ ಮೇಲೆ ಕೊತ್ತಂಬರಿಯ ಸೊಪ್ಪನ್ನು ಚಿಮುಕಿಸಿ, ಅಲಂಕಾರಿಕವಾಗಿ ಕಾಣುವಂತೆ ಮಾಡಿ. ಈಗ ನಿಮ್ಮ ಮುಂದೆ ರುಚಿಕರವಾದ ಆಲೂ ಕರಿ ತಯಾರಾಗಿದೆ.