ಪ್ರೇಮಿಗಳ ದಿನದ ಸೆಲೆಬ್ರೆಷನ್ಗೆ ನಿಮ್ಮ ಪ್ರಿಯಕರನನ್ನು ಖುಷಿಪಡಿಸಲು ರುಚಿಯಾದ ಹಾಗೂ ಸಿಹಿಯಾದನ್ನು ತಿಂಡಿಯನ್ನು ಮಾಡಿ ತಿಂದರೆ ಚೆನ್ನಾಗಿರುತ್ತದೆ. ಹೀಗಾಗಿ ನೀವು ಇಂದು ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಅಂತ ಅನಾನಸ್ ಹಲ್ವಾ ಮಾಡಬಹುದು.
Advertisement
ಬೇಕಾಗುವ ಸಾಮಗ್ರಿಗಳು:
* ಅನಾನಸ್- 2 ಕಪ್
* ಕಾರ್ನ್ ಹಿಟ್ಟು- 1 ಕಪ್
* ಸಕ್ಕರೆ- 1 ಕಪ್
* ತುಪ್ಪ- ಅರ್ಧ ಕಪ್
* ಏಲಕ್ಕಿ ಪೌಡರ್- ಸ್ವಲ್ಪ
* ಡ್ರೈ ಪ್ರೂಟ್ಸ್- ಸ್ವಲ್ಪ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ, ಮಿಕ್ಸಿ ಜಾರ್ಗೆ ಅನಾನಸ್ ಹಾಗೆ ರುಬ್ಬಿಕೊಳ್ಳಿ. ಈ ಜ್ಯೂಸ್ನ್ನು ಚೆನ್ನಾಗಿ ಸೊಸೆಕೊಳ್ಳಬೇಕು. ಇದನ್ನೂ ಓದಿ: ಸೂಪರ್ ಕೂಲ್ ದ್ರಾಕ್ಷಿ ಹಣ್ಣಿನ ಲಸ್ಸಿ ಮಾಡುವ ಸರಳ ವಿಧಾನ ನಿಮಗಾಗಿ
Advertisement
* ನಂತರ ಅನಾನಸ್ ಜ್ಯೂಸ್ನ್ನು ಒಂದು ಬೌಲ್ಗೆ ಹಾಕಿ ಕಾನ್ ಪ್ಲೋರ್ ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು.
* ನಂತರ ಒಂದು ಬಾಣಲೆಗೆ ನೀರು, ಸಕ್ಕರೆ ಸೇರಿಸಿ ಕುದಿಸಿಕೊಳ್ಳಬೇಕು.
* ಈಗ ಇದೆ ಬಾಣಲೆಗೆ ಅನಾನಸ್ ಜ್ಯೂಸ್ ಮಿಶ್ರಣ, ಡ್ರೈ ಪ್ರೂಟ್ಸ್, ತುಪ್ಪ ಬೇಕಾದಲ್ಲಿ ಸ್ವಲ್ಪ ಬಣ್ಣವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಿ ತುಪ್ಪ ಸವರಿದ ತಟ್ಟೆಗೆ ಹಾಕಿ ಬೇಕಾದ ರೀತಿಯಲ್ಲಿ ಕತ್ತರಿಸಿದರೆ ರುಚಿಯಾದ ಅನಾನಸ್ ಹಲ್ವಾ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ