ಸಂಜೆ ವೇಳೆ ಟೀ, ಕಾಫಿ ಜೊತೆಗೆ ನಾಲಿಗೆ ಏನನ್ನಾದರು ತಿನ್ನಲು ಬಯಸುತ್ತದೆ. ನಾಲಿಗೆಗೆ ರುಚಿಕೊಡಬೇಕು ಹಾಗೂ ಆರೋಗ್ಯಕರವಾದ ತಿಂಡಿಯನ್ನು ತಿನ್ನಲು ನಾವು ಬಯಸುತ್ತೇವೆ. ಹೆಸರು ಬೇಳೆ ಚಾಟ್ ಕೇವಲ ರುಚಿಕರ ಮಾತ್ರವಲ್ಲ, ಹೆಸರು ಬೇಳೆ ಮತ್ತು ಮೊಳಕೆ ಬರಿಸಿದ ಹೆಸರುಕಾಳಿನ ಎಲ್ಲಾ ಗುಣಗಳನ್ನು ಹೊಂದಿದ್ದು ಅತಿ ಆರೋಗ್ಯಕರ ಆಹಾರವಾಗಿದೆ. ಈ ಚಾಟ್ ಇನ್ನೊಂದು ಹೆಗ್ಗಳಿಕೆ ಎಂದರೆ ಇದನ್ನು ದಿನದ ಯಾವುದೇ ಹೊತ್ತಿನಲ್ಲಿ ಸೇವಿಸಬಹುದು. ಉಪಾಹಾರದಲ್ಲಿ ರೊಟ್ಟಿ, ಇಡ್ಲಿ ದೋಸೆಗಳ ಜೊತೆಗೆ, ಮಧ್ಯಾಹ್ನ ಅನ್ನ, ರಾತ್ರಿ ಚಪಾತಿ ರೊಟ್ಟಿಗಳೊಂದಿಗೆ ಸೇವಿಸಬಹುದಾಗಿದೆ.
Advertisement
ಬೇಕಾಗುವ ಸಾಮಗ್ರಿಗಳು:
*ನಯವಾಗಿ ಹುರಿದ ಹೆಸರು ಬೇಳೆ- 2 ಕಪ್
*ಮೊಳಕೆ ಬರಿಸಿದ ಹೆಸರು ಕಾಳು- ಅರ್ಧ ಕಪ್
*ಈರುಳ್ಳಿ-ಅರ್ಧ ಕಪ್
*ಟೊಮೇಟೊ-ಅರ್ಧ ಕಪ್
*ಕ್ಯಾರೆಟ್ – ಅರ್ಧ ಕಪ್
*ಹುಣಸೆ ಹುಳಿಯ ನೀರು – 1 ಟೀ ಸ್ಪೂನ್
*ಹಸಿ ಮೆಣಸಿನ ಪೇಸ್ಟ್- 1 ಟೀ ಸ್ಪೂನ್
*ಬೆಲ್ಲದ ಸಿರಪ್ – 1 ಟೀ ಸ್ಪೂನ್
*ಕೊತ್ತಂಬರಿ ಸೊಪ್ಪು- ಸ್ವಲ್ಪ
*ಲಿಂಬೆ ರಸ – 1 ಟೀ ಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
Advertisement
ಮಾಡುವ ವಿಧಾನ:
* ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಈರುಳ್ಳಿ, ಟೊಮೇಟೊ, ಕ್ಯಾರೆಟ್, ಹಸಿಮೆಣಸಿನ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
*ಇದಕ್ಕೆ ಹುರಿದ ಹೆಸರುಬೇಳೆ ಮತ್ತು ಮೊಳಕೆ ಬರಿಸಿದ ಹೆಸರು ಕಾಳು ಹಾಕಿ ಮಿಶ್ರಣ ಮಾಡಿ.
Advertisement
Advertisement
*ಬಳಿಕ ಹುಣಸೆ ಹುಳಿ, ಬೆಲ್ಲದ ನೀರು ಹಾಕಿ ಮಿಶ್ರಣ ಮಾಡಿ ಇದನ್ನೂ ಓದಿ: ನಾಲಿಗೆ ರುಚಿ ಹೆಚ್ಚಿಸುವ ಸ್ವೀಟ್ ಕಾರ್ನ್ ಫ್ರೈಡ್ ರೈಸ್
*ನಂತರ ಉಪ್ಪು ಮತ್ತು ಲಿಂಬೆರಸ ಹಾಕಿ ಮಿಶ್ರಣ ಮಾಡಿ.
* ನಂತರ ತಟ್ಟೆಗೆ ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಹೆಸರು ಬೇಳೆ ಚಾಟ್ ಸವಿಯಲಿ ಸಿದ್ಧವಾಗುತ್ತದೆ.