ಬಿಸಿಲೇರುತ್ತಿದೆ. ಆಚೆ ಹೋಗೋಕು ಆಗ್ತಿಲ್ಲ. ಮನೆಯಲ್ಲೇ ಏನಾದ್ರೂ ತಣ್ಣಗೆ ತಿನ್ನೋಣ. ಕುಡಿಯೋಣ ಅನ್ನೋರಿಗಾಗಿ ಇಲ್ಲಿದೆ ಕುಲ್ಫಿ ಐಸ್‍ಕ್ರೀಂ ರೆಸಿಪಿ
ಬೇಕಾಗಿರುವ ಸಾಮಾಗ್ರಿಗಳು
ಕೆನೆಭರಿತ ಹಾಲು – 1/2ಲೀಟರ್
ಸಕ್ಕರೆ – 1/4 ಕಪ್
ಜೋಳದ ಹಿಟ್ಟು – 1 ಟಿಎಸ್‍ಪಿ
ಕೇಸರಿ ದಳಗಳು
ಕನ್ಡೆನ್ಸ್‍ಡ್ ಮಿಲ್ಕ್ – 1/4 ಕಪ್
ಗೋಡಂಬಿ, ಪಿಸ್ತಾ, ಬಾದಾಮಿ – 8-10
———-
Advertisement
ಮಾಡುವ ವಿಧಾನ
* ಒಂದು ಪ್ಯಾನ್‍ಗೆ ಕೆನೆ ಭರಿತ ಅರ್ಧ ಲೀಟರ್ ಹಾಲನ್ನು ಮುಕ್ಕಾಲು ಭಾಗವಾಗುವಷ್ಟು ಚೆನ್ನಾಗಿ ಕುದಿಸಿ
* 1 ಟಿಎಸ್‍ಪಿ ಜೋಳದ ಹಿಟ್ಟುನ್ನು ನೀರಿನಲ್ಲಿ ಕಲಸಿ ಹಾಲಿಗೆ ಮಿಕ್ಸ್ ಮಾಡಿ ತಿರುಗಿಸಿ. ಹಾಲು ಸ್ವಲ್ಪ ಗಟ್ಟಿ ಆಗಲು ಆರಂಭಿಸುತ್ತದೆ.
* ಗಟ್ಟಿಯಾದ ಹಾಲಿಗೆ 1/4 ಕಪ್ ಸಕ್ಕರೆ ಸೇರಿಸಿ ತಿರುಗಿಸಿ.
* ಕುದಿಯುತ್ತಿರುವ ಹಾಲಿಗೆ ಕೇಸರಿ ದಳಗಳನ್ನು ಹಾಕಿ ತಿರುಗಿಸಿ ಸ್ಟವ್ ಆಫ್ ಮಾಡಿ.
* ಆರಿದ ಹಾಲನ್ನು ಒಂದು ಬೌಲ್‍ಗೆ ಹಾಕಿಕೊಳ್ಳಿ. ಅದಕ್ಕೆ 1/4 ಕಪ್ ಕನ್ಡೆನ್ಸ್ ಡ್ ಮಿಲ್ಕ್ ಸೇರಿಸಿ ಬ್ಲೇಂಡ್ ಮಾಡಿ. ಎಲ್ಲವೂ ಸಮ ಪ್ರಮಾಣದಲ್ಲಿ ಮಿಕ್ಸ್ ಆಗೋವರೆಗೂ ಬ್ಲೇಂಡ್ ಮಾಡಿ
* ಬಳಿಕ ಅದಕ್ಕೆ ಸಣ್ಣಗೆ ಹೆಚ್ಚಿದ ಗೋಡಂಬಿ, ಪಿಸ್ತಾ, ಬಾದಾಮಿ ಚೂರುಗಳನ್ನು ಮಿಕ್ಸ್ ಮಾಡಿ. ಒಂದು ಪ್ಲಾಸ್ಟಿಕ್ ಕಪ್ ಅಥವಾ ಮೌಲ್ಡ್‍ಗೆ ವರ್ಗಾಯಿಸಿ. ಮಧ್ಯೆದಲ್ಲಿ ಐಸ್‍ಕ್ರೀಂ ಕಡ್ಡಿ ಇಡಿ.
* 15-20 ನಿಮಿಷ ಫ್ರೀಜ್ ಮಾಡಿ ಹೊರತೆಗೆಯಿಸಿ. ಬೇಸಿಗೆ ದಾಹ ತೀರಿಸಲು ನಿಮ್ಮ ಕುಲ್ಫಿ ಐಸ್‍ಕ್ರೀಂ ರೆಡಿ.