ನಾಲಿಗೆ ರುಚಿ ರುಚಿ ಅಡುಗೆ ಕೇಳುತ್ತಾ..? – ಕಾಜು ಮಶ್ರೂಮ್ ಮಸಾಲಾ ಮಾಡ್ಕೊಡಿ!

Public TV
2 Min Read
How to make Kaju Mushroom Masala Recipe 1

ಳೆಗಾಲ.. ಹೊರಗೆ ಏನಾದ್ರೂ ತಿನ್ನೋಕೆ ಹೋಗೋಣ ಅಂದ್ರೆ ಕಿರಿ ಕಿರಿ ಅಲ್ವಾ..? ಮನೆಯಲ್ಲಿ ಏನಾದ್ರೂ ಮಾಡಿ ತಿನ್ನೋ ಪ್ಲ್ಯಾನ್‌ ಮಾಡ್ತಿದಿರಾ? ಕಾಜು ಮಶ್ರೂಮ್ ಮಸಾಲಾ ಕರಿಯನ್ನ ಯಾಕೆ ಟ್ರೈ ಮಾಡಬಾರದು? ಒಮ್ಮೆ ಇದನ್ನ ಮಾಡಿ ಸವಿದ್ರೆ, ಮತ್ತೆ ಮತ್ತೆ ಮಾಡ್ತಾನೆ ಇರ್ತಿರಿ, ಅಷ್ಟು ಟೇಸ್ಟ್‌ ಇರುತ್ತೆ ಇದು. ಹಾಗಾದ್ರೆ ಕಾಜು ಮಶ್ರೂಮ್ ಮಸಾಲಾ (Kaju Mushroom Masala) ಮಾಡೋದು ಹೇಗೆ ಎಂದು ತಿಳಿಯೋಣ.

ಬೇಕಾಗುವ ಪದಾರ್ಥಗಳು
ಟೊಮೆಟೊ – 3
ಗೋಡಂಬಿ – 1/4 ಕಪ್ (15 ನಿಮಿಷಗಳ ಕಾಲ ನೆನೆಸಿಡಿ)
ಮೆಣಸಿನಕಾಯಿ-3
ಬೆಳ್ಳುಳ್ಳಿ ಎಸಳು – 4
ಏಲಕ್ಕಿ – 2
ಲವಂಗ – 3
ಒಂದು ಸಣ್ಣ ತುಂಡು ಶುಂಠಿ
ಮೊಸರು – 1/4 ಕಪ್
ಒಣ ಮೆಣಸಿನಕಾಯಿ – 2
ಕರಿ ಮೆಣಸು – 1/2 ಟೀ ಸ್ಪೂನ್
ಅಣಬೆ – 150 ಗ್ರಾಂ
ಗೋಡಂಬಿ – 3/4 ಕಪ್
ಎಣ್ಣೆ – ಬೇಕಾಗುವಷ್ಟು
ಈರುಳ್ಳಿ – 1
ಜೀರಿಗೆ – 1 ಟೀ ಸ್ಪೂನ್
ಗರಂ ಮಸಾಲಾ – 1/2 ಟೀ ಸ್ಪೂನ್
ಧನಿಯಾ ಪುಡಿ-1/2 ಟೀ ಸ್ಪೂನ್
ಉಪ್ಪು – ಬೇಕಾಗುವಷ್ಟು
ನೀರು – ಬೇಕಾಗುವಷ್ಟು
ತುಪ್ಪ – 1 ಟೀ ಸ್ಪೂನ್
ಕೊತ್ತಂಬರಿ ಸೊಪ್ಪು
ನಿಂಬೆ ರಸ – ಸ್ವಲ್ಪ

How to make Kaju Mushroom Masala Recipe

ಮಾಡೋದು ಹೇಗೆ?
ಮೊದಲು ಗ್ರೇವಿಗೆ ಬೇಕಾಗುವ ಪದಾರ್ಥಗಳನ್ನು ರುಬ್ಬಿಕೊಳ್ಳಬೇಕು. ಟೊಮೆಟೊ, ಒಂದು ತುಂಡು ಶುಂಠಿ, ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ಲವಂಗ, ಏಲಕ್ಕಿ, ಕರಿ ಮೆಣಸು, ನೆನೆಸಿದ ಗೋಡಂಬಿ, ಒಂದು ಕಪ್ ಮೊಸರು, ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.

ನಂತರ ಸ್ಟವ್ ಆನ್ ಮಾಡಿ ಬಾಣಲೆ ಇಟ್ಟು ಎಣ್ಣೆ ಹಾಕಿ. 1/4 ಕಪ್​ ಗೋಡಂಬಿ ಹಾಕಿ ಒಂದು ನಿಮಿಷ ಹುರಿಯಬೇಕು. ಈಗ ಅರ್ಧಕ್ಕೆ ಕತ್ತರಿಸಿದ ಅಣಬೆ ಸೇರಿಸಬೇಕು. ಅಣಬೆ ಮತ್ತು ಗೋಡಂಬಿ ಬ್ರೌನ್ ಆಗುವ ತನಕ ಫ್ರೈ ಮಾಡಬೇಕು. ನಂತರ ಅವುಗಳನ್ನು ಒಂದು ಕಡೆ ತೆಗೆದಿಡಬೇಕು.

ಈಗ ಅದೇ ಎಣ್ಣೆಯಲ್ಲಿ ಜೀರಿಗೆ ಮತ್ತು ಈರುಳ್ಳಿ ತುಂಡುಗಳನ್ನು ಹಾಕಿ ಹುರಿಯಬೇಕು. ನಂತರ ಮೆಣಸಿನಕಾಯಿ, ಗರಂ ಮಸಾಲ ಮತ್ತು ಕೊತ್ತಂಬರಿ ಪುಡಿ ಹಾಕಿ ಮಿಶ್ರಣ ಮಾಡಿ. ರುಬ್ಬಿದ ಗೋಡಂಬಿ ಮಿಶ್ರಣ ಸೇರಿಸಿ ಮತ್ತು ಎಣ್ಣೆ ಮೇಲಕ್ಕೆ ತೇಲುವವರೆಗೆ ಬೇಯಿಸಿ. ನಂತರ ನೀರು ಸೇರಿಸಿ ಮತ್ತು ಗ್ರೇವಿ ದಪ್ಪವಾಗುವವರೆಗೆ ಬೇಯಿಸಬೇಕು. ಈಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಹುರಿದ ಗೋಡಂಬಿ, ಮಶ್ರೂಮ್ ಹಾಕಿ 5 ನಿಮಿಷ ಬೇಯಿಸಬೇಕು.

ಈಗ ಒಂದು ಚಮಚ ತುಪ್ಪ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಕಡಿಮೆ ಉರಿಯಲ್ಲಿ 2 ನಿಮಿಷ ಬೇಯಿಸಬೇಕು. ಈಗ ವಿಶ್ವದ ರುಚಿಕರ ಕಾಜು ಮಶ್ರೂಮ್ ಕರಿ ನಿಮ್ಮ ಮುಂದೆ ಸವಿಯೋಕೆ ಸಿದ್ಧ!

Share This Article