ಬೆಳಗ್ಗೆಯ ಉಪಾಹಾರಕ್ಕೆ ಆರೋಗ್ಯಕರವೆಂದೇ ಪರಿಗಣಿಸಿರುವ ಇಡ್ಲಿಯನ್ನು ವಿಭಿನ್ನವಾಗಿ ಮಾಡುವುದು ಉಂಟು. ತಟ್ಟೆ ಇಡ್ಲಿ, ರವೆ ಇಡ್ಲಿ, ಸಾಮಾನ್ಯವಾಗಿ ಇಡ್ಲಿ ಅಥವಾ ರವೆ ಇಡ್ಲಿಯನ್ನು ಮಾಡುತ್ತೇವೆ. ಈ ಎರಡು ರುಚಿಯನ್ನು ಹೊರತು ಪಡಿಸಿ ಹೊಸ ರುಚಿ ಬೇಕೆನ್ನುವವರು ಸೌತೆಕಾಯಿ ಇಡ್ಲಿ ಸಹ ಟ್ರೈ ಮಾಡಬಹುದು.
Advertisement
ಬೇಕಾಗುವ ಸಾಮಗ್ರಿಗಳು:
* ಅಕ್ಕಿ -2 ಕಪ್
* ಸೌತೆಕಾಯಿ – 1 ಕಪ್
* ಅವಲಕ್ಕಿ- ಅರ್ಧ ಕಪ್
* ತೆಂಗಿನಕಾಯಿ- ಅರ್ಧ ಕಪ್
* ರವೆ ಅರ್ಧ ಕಪ್
* ಮೊಸರು -ಅರ್ಧ ಕಪ್
Advertisement
Advertisement
ಮಾಡುವ ವಿಧಾನ:
Advertisement
* ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಅಕ್ಕಿ ಹಾಕಿ ಹುರಿದುಕೊಂಡು ನಂತರ ಅದನ್ನ ಆರಿಸಿ ನೀರು ಹಾಕಿ ನೆನೆಸಿಡಿ.
* ಸೌತೆಕಾಯಿಯನ್ನು ಸಿಪ್ಪೆ ತೆಗೆದುಕೊಂಡು ತುರಿದುಕೊಂಡು ಹಾಕಿ. ಇದನ್ನೂ ಓದಿ: ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ
* ಅಕ್ಕಿ, ಅವಲಕ್ಕಿ, ತೆಂಗಿನಕಾಯಿ ತುರಿ, ಉಪ್ಪು ಸೇರಿಸಿ ಹಿಟ್ಟು ಇಡ್ಲಿ ಹದಕ್ಕೆ ರುಬ್ಬಿಕೊಳ್ಳಬೇಕು.
* ಒಂದು ಬಾಣಲೆಯನ್ನು ತೆಗೆದುಕೊಂಡು ತುಪ್ಪ ಹಾಕಿ ರವೆಯನ್ನು ಹುರಿದುಕೊಂಡು, ಆರಿಸಿಕೊಳ್ಳಿ.
* ನಂತರ ತಯಾರಿಸಿಕೊಂಡ ಮಿಶ್ರಣಕ್ಕೆ ತುಪ್ಪದಲ್ಲಿ ಹುರಿದ ರವೆ ಮತ್ತು ಮೊಸರು, ಸೌತೆಕಾಯಿ ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್
* ನಂತರ ಇಡ್ಲಿ ಪಾತ್ರೆಗೆ ಹಾಕಿ ಬೇಯಿಸಿದರೆ ರುಚಿ ರುಚಿಯಾದ ಸೌತೆಕಾಯಿ ದೋಸೆ ರೆಡಿ.