ಶುಂಠಿ ಟೀ ಕುಡಿದರೆ ಶೀತ, ಕೆಮ್ಮಿನಂತಹ ಕಾಯಿಲೆಗಳು ದೂರ ಉಳಿಯುತ್ತದೆ. ಶುಂಠಿ ಹಾಕಿ ತಯಾರಿಸಿದ ಆಹಾರ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಮಾಂಸಹಾರದ ಅಡುಗೆಗಳಲ್ಲಿ ಹೆಚ್ಚಾಗಿ ಶುಂಠಿಯನ್ನು ಬಳಕೆ ಮಾಡುತ್ತಾರೆ. ಆದರೆ ನಾವು ಇಂದು ಶುಂಠಿ ಉಪ್ಪಿನಕಾಯಿಯನ್ನು ಮಾಡುವುದು ಹೇಗೆ ಎಂದು ಸರಳ ವಿಧಾನದ ಮೂಲಕವಾಗಿ ವಿವರಿಸಲಿದ್ದೇವೆ.
ಬೇಕಾಗುವ ಸಾಮಗ್ರಿಗಳು:
* ಶುಂಠಿ – 1ಕಪ್
* ಮೆಂತೆ – 2 ಚಮಚ
* ಜೀರಿಗೆ – 2 ಚಮಚ
* ಖಾರದ ಪುಡಿ – 1 ಚಮಚ
* ಹುಣಸೆ ಹಣ್ಣಿನ ರಸ
* ಇಂಗು ಚಿಟಿಕೆಯಷ್ಟು
* ಅರಿಶಿಣ ಪುಡಿ- ಅರ್ಧ ಚಮಚ
* ತೆಂಗಿನಕಾಯಿ – 1 ಕಪ್
* ಅಡುಗೆ ಎಣ್ಣೆ – 1 ಕಪ್
* ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ:
* ಬಾಣಲೆಯನ್ನು ತೆಗದುಕೊಂಡು ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಬೇಕು. ಎಣ್ಣೆ ಬಿಸಿಯಾದಾಗ ಅದಕ್ಕೆ ದೊಡ್ಡ ಜೀರಿಗೆ, ಮೆಂತೆ, ಖಾರದ ಪುಡಿ ಹಾಕಬೇಕು.
* ನಂತರ ಶುಂಠಿಯನ್ನು ಎಣ್ಣೆಯಲ್ಲಿ ಹಾಕಿ 10-15 ನಿಮಿಷ ಹುರಿಯಬೇಕು. ಇದನ್ನೂ ಓದಿ: ಕೆಲವೇ ಸಾಮಗ್ರಿಗಳಲ್ಲಿ ಮಾಡಿ ರುಚಿಯಾದ ಮೊಟ್ಟೆ ಪಲ್ಯ
* ಕತ್ತರಿಸಿದ ತೆಂಗಿನ ತುಂಡುಗಳನ್ನು ಸ್ವಲ್ಪ ಕಂದು ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಹುರಿಯಬೇಕು.
* ನಂತರ ಶುಂಠಿಯನ್ನು ತೆಂಗಿನಕಾಯಿಯ ಜೊತೆ ಸೇರಿಸಿ, ಇದಕ್ಕೆ ಹುಣಸೆ ಹಣ್ಣಿನ ರಸ, ಇಂಗು, ಅರಿಶಿಣ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಎರಡು ನಿಮಿಷ ಹುರಿದು ತಣ್ಣಗಾಗಲು ಇಡಬೇಕು.
* ತಣ್ಣಗಾದ ಮೇಲೆ ಅದನ್ನು ಬಾಕ್ಸ್‌ನಲ್ಲಿ ಹಾಕಿ ಮುಚ್ಚಿಡಬೇಕು. ಈ ಉಪ್ಪಿನಕಾಯಿಯನ್ನು 2 ವಾರಗಳ ಕಾಲ ಇಡಬಹುದಾಗಿದೆ.