ದೋಸೆ, ಇಡ್ಲಿ ಮಾಡಿದರೆ ಸಾಂಬಾರ್ ಇದ್ದರು ಜೊತೆಗೆ ಚಟ್ನಿ ಮಾಡುವುದು ಸಾಮಾನ್ಯ. ಹಲವರಿಗೆ ಚಟ್ನಿ ಎಂದರೆ ತುಂಬಾ ಇಷ್ಟ ಪಟ್ಟು ಸವಿಯುತ್ತಾರೆ. ಹೀಗಿರುವಾಗ ನಾವು ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ರುಚಿಯಾದ ಚಟ್ನಿಯನ್ನು ಮಾಡುವುದು ಹೇಗೆ ಎಂದು ನೋಡೊಣ. ಬೆಳ್ಳುಳ್ಳಿ ಚಟ್ನಿಯನ್ನು ದೋಸೆ, ಚಪಾತಿ ಜೊತೆ ತಿನ್ನಬಹುದು ಅಥವಾ ಅನ್ನಕ್ಕೆ ಸೈಡ್ ಡಿಶ್ ಆಗಿಯೂ ಬಳಸಬಹುದು. ಖಾರದ ಈ ಚಟ್ನಿ ಆಹಾರದ ಸ್ವಾದವನ್ನು ಹೆಚ್ಚಿಸುವುದು. ರೆಸಿಪಿ ತುಂಬಾ ಸರಳವಾಗಿದ್ದು, ಮಾಡುವ ವಿಧಾನ ನೋಡಿ ಇಲ್ಲಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ಬೆಳ್ಳುಳ್ಳಿ-2
* ಒಣ ಮೆಣಸು 6-7
* ತೆಂಗಿನ ತುರಿ -1 ಕಪ್
* ಹುಣಸೆಹಣ್ಣು- ಸ್ವಲ್ಪ
* ರುಚಿಗೆ ತಕ್ಕ ಉಪ್ಪು
* ಸಾವಿವೆ_ ಅರ್ಧ ಸ್ಪೂನ್
* ಕರೀಬೆವು
* ಅಡುಗೆ ಎಣ್ಣೆ
Advertisement
ಮಾಡುವ ವಿಧಾನ:
* ಬೆಳ್ಳುಳ್ಳಿ ಮತ್ತು ತೆಂಗಿನ ತುರಿಯನ್ನು ಎಣ್ಣೆಯಲ್ಲಿ ಚೆನ್ನಾಗಿ ಹುರಿಯಿರಿ.
Advertisement
* ಒಣ ಮೆಣಸನ್ನು ಸ್ವಲ್ಪ ಅಡುಗೆ ಎಣ್ಣೆಯನ್ನು ಹಾಕಿ ಹುರಿಯಿರುದುಕೊಳ್ಳಬೇಕು.
Advertisement
* ಈಗ ಹುರಿದ ಬೆಳ್ಳುಳ್ಳಿ, ಒಣ ಮೆಣಸು, ಸ್ವಲ್ಪ ಹುಣಸೆ ಹಣ್ಣು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ರುಬ್ಬಿದರೆ ರುಚಿ-ರುಚಿಯಾದ ಚಟ್ನಿ ರೆಡಿಯಾಗುತ್ತದೆ. ಇದನ್ನೂ ಓದಿ: ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ
* ಬೆಳ್ಳುಳ್ಳಿ, ಸಾವಿಸಿವೆ, ಕರಿಬೇವು, ಅಡುಗೆ ಎಣ್ಣೆ ಹಾಕಿ ಒಗ್ಗರಣೆ ಕೊಟ್ಟರೆ ರುಚಿಯಾದ ಬೆಳ್ಳುಳ್ಳಿ ಚಟ್ನಿ ಸವಿಯಲು ಸಿದ್ಧವಾಗುತ್ತದೆ.