Connect with us

ಬೇಸಿಗೆಯಲ್ಲಿ ತಂಪಾಗಿರೋಕೆ ಇಲ್ಲಿದೆ ಸಿಂಪಲ್ ಫ್ರೂಟ್ ಕಸ್ಟರ್ಡ್ ರೆಸಿಪಿ

ಬೇಸಿಗೆಯಲ್ಲಿ ತಂಪಾಗಿರೋಕೆ ಇಲ್ಲಿದೆ ಸಿಂಪಲ್ ಫ್ರೂಟ್ ಕಸ್ಟರ್ಡ್ ರೆಸಿಪಿ

ಇಂದು ಎಲ್ಲೆಡೆ ಹೋಳಿ ಹಬ್ಬದ ಸಂಭ್ರಮ. ಹಬ್ಬದ ದಿನ ಗೆಳಯರ ಜೊತೆ ರಂಗಿನ ಓಕುಳಿ ಆಡಿ ಸುಸ್ತಾಗಿರೋವಾಗ ಏನಾದ್ರೂ ಕೂಲ್ ಆಗಿರೋದನ್ನು ತಿನ್ನಬೇಕು ಅಥವಾ ಕುಡಿಯಬೇಕು ಅನ್ನಿಸುತ್ತೆ. ಅಲ್ಲದೆ ಬೇಸಿಗೆಯ ಸುಡುಬಿಸಿಲಿನಲ್ಲಿ ದಣಿದು ಬಂದಾಗಲೂ ತಂಪಾದ ಪಾನಿಯ ಕುಡಿದರೆ ಮನಸಿಗೆ ಹಿತ ಎನ್ನಿಸುತ್ತದೆ. ಇದಕ್ಕಾಗಿ ಇಲ್ಲಿದೆ ಸುಲಭವಾದ ಫ್ರೂಟ್ ಕಸ್ಟರ್ಡ್ ರೆಸಿಪಿ.

ಬೇಕಾಗುವ ಸಾಮಾಗ್ರಿಗಳು:
1. ಹಾಲು- 2 ಕಪ್
2. ಕಸ್ಟರ್ಡ್ ಪೌಡರ್- 2 ಚಮಚ (ಮಾರುಕಟ್ಟೆಯಲ್ಲಿ ಲಭ್ಯ, ವೆನಿಲ್ಲಾ ಫ್ಲೇವರ್ ಆಯ್ದುಕೊಳ್ಳಬಹುದು)
3. ಸಕ್ಕರೆ- 1/4 ಕಪ್
4. ಕಪ್ಪು/ಬಿಳಿ ಸೀಡ್ಲೆಸ್ ದ್ರಾಕ್ಷಿ – 1/4 ಕಪ್(ಕಟ್ ಮಾಡಿಟ್ಟುಕೊಳ್ಳಿ)
5. ಬಾಳೆಹಣ್ಣು – 1/4 ಕಪ್
6. ದಾಳಿಂಬೆ – 1/4 ಕಪ್
7. ಮಾವಿನ ಹಣ್ಣು – 1/4 ಕಪ್
8. ಸೇಬು – 1/4 ಕಪ್
9. ಏಲಕ್ಕಿ – 1/4 ಚಮಚ

ಮಾಡುವ ವಿಧಾನ:

* ಒಲೆಯ ಮೇಲೆ ಒಂದು ಪಾತ್ರೆಯಲ್ಲಿ 2 ಕಪ್ ಹಾಲು ಹಾಕಿ ಬಿಸಿ ಮಾಡಿ.
* ಒಂದು ಕಪ್‍ನಲ್ಲಿ ಕಸ್ಟರ್ಡ್ ಪೌಡರ್‍ಗೆ 3 ಚಮಚ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುದಿಯುತ್ತಿರುವ ಹಾಲಿಗೆ ಬೆರೆಸಿ.
* ಅದಕ್ಕೆ ಸಕ್ಕರೆ ಹಾಕಿ ಸ್ವಲ್ಪ ದಪ್ಪ ಹಾಗೂ ಹಳದಿ ಕಲರ್ ಬರೋವರೆಗೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಂದು ಬೌಲ್ ಗೆ ಹಾಕಿ ತಣ್ಣಗಾಗಲು ಬಿಡಿ.
* ಹಾಲು ತಣ್ಣಗಾದ ಬಳಿಕ ಅದಕ್ಕೆ ಕಟ್ ಮಾಡಿದ ದ್ರಾಕ್ಷಿ, ಬಾಳೆಹಣ್ಣು, ದಾಳಿಂಬೆ, ಮಾವಿನ ಹಣ್ಣು, ಸೇಬು, ಏಲಕ್ಕಿ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, 2 ಗಂಟೆಗಳ ಕಾಲ ಫ್ರಿಡ್ಜ್‍ನಲ್ಲಿ ಇಟ್ಟು ನಂತರ ಸವಿಯಲು ಕೊಡಿ.

Advertisement
Advertisement