ನೀವು ಹಲವು ರೀತಿಯ ಬಿರಿಯಾನಿ ಸವಿದಿರಬಹುದು. ಆದ್ರೆ ನಾನು ಇವತ್ತು ಹೇಳೋ ವಿಶೇಷವಾದ ನುಗ್ಗೆಕಾಯಿ ಬಿರಿಯಾನಿಯನ್ನು ನೀವು ತಿಂದಿರಲಿಕ್ಕಿಲ್ಲ. ಈ ನುಗ್ಗೆಕಾಯಿ ಆರೋಗ್ಯಕ್ಕೆ ಒಳ್ಳೆಯದು ಅದರ ಜೊತೆ ಇದನ್ನು ಬಿರಿಯಾನಿ ಮಾಡಿದ್ರೆ ಸಕತ್ ರುಚಿಯನ್ನು ಕೊಡುತ್ತೆ. ಹಾಗಾದ್ರೆ ಈ ನುಗ್ಗೆಕಾಯಿ ಬಳಸಿ ಬಿರಿಯಾನಿ ಮಾಡೋದು ಹೇಗೆ ಎಂದು ತಿಳಿದುಕೊಳ್ಳೋಣ.
ನುಗ್ಗೆಕಾಯಿ ಬಿರಿಯಾನಿ ಮಾಡೋಕೆ ಏನೆಲ್ಲ ಬೇಕು?
*ಅಕ್ಕಿ
*ನುಗ್ಗೆಕಾಯಿ
*ದಾಲ್ಚಿನ್ನಿ
*ಏಲಕ್ಕಿ
*ಲವಂಗ
*ಚಕ್ರಮೊಗ್ಗು
*ಈರುಳ್ಳಿ
*ಟೊಮೆಟೋ
*ಪುದೀನ
*ಕೊತ್ತಂಬರಿ ಸೊಪ್ಪು
*ಹಸಿರು ಮೆಣಸಿನಕಾಯಿ
*ಹಸಿರು ಬಟಾಣಿ
*ಮೊಸರು
*ಶುಂಠಿ ಬೆಳ್ಳುಳ್ಳಿ ಪೇಸ್ಟ್
*ಬಿರಿಯಾನಿ ಪೌಡರ್
*ಕಸೂರಿ ಮೇಥಿ
*ಖಾರದ ಪುಡಿ
*ಅಡುಗೆ ಎಣ್ಣೆ
*ರುಚಿಗೆ ತಕ್ಕಷ್ಟು ಉಪ್ಪು
ನುಗ್ಗೆಕಾಯಿ ಬಿರಿಯಾನಿ ಮಾಡುವುದು ಹೇಗೆ?
ಮೊದಲಿಗೆ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಏಲಕ್ಕಿ, ಚಕ್ಕೆ, ಲವಂಗ, ಪಲಾವ್ ಎಲೆ, ಮೊಗ್ಗು ಹಾಕಿ. ಹಾಗೆ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. 3 ನಿಮಿಷದ ಬಳಿಕ ಈಗ ಪುದಿನ, ಕೊತ್ತಂಬರಿ ಸೊಪ್ಪು, ಕಸೂರಿ ಮೇಥಿ ಸಹ ಹಾಕಿ, ನಂತರ ಖಾರದ ಪುಡಿ, ಹಸಿ ಮೆಣಸು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಫ್ರೈ ಮಾಡಿಕೊಳ್ಳಬೇಕು.
ಹೆಚ್ಚಿದ ಟೊಮೆಟೋ ಹಾಕಿಕೊಂಡು ಬಳಿಕ ಬಟಾಣಿ, ಹಾಗೆ ಕತ್ತರಿಸಿಕೊಂಡಿರುವ ನುಗ್ಗೆಕಾಯಿ ಸ್ವಲ್ಪ ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡುತ್ತಾ ಮಿಕ್ಸ್ ಮಾಡಬೇಕು. ನಂತರ ಉಪ್ಪು ಕೂಡ ಹಾಕಿ 5 ನಿಮಿಷ ಫ್ರೈ ಮಾಡಿಕೊಳ್ಳಿ. ಹಾಗೆ ಬಿರಿಯಾನಿ ಪೌಡರ್ ಹಾಕಿ ಫ್ರೈ ಮಾಡಿಕೊಳ್ಳಬೇಕು.
ಬಳಿಕ ಅಕ್ಕಿಯನ್ನು ತೆಗೆದುಕೊಂಡು ನೆನಸಿಡಬೇಕು. ಈಗ ನೀರನ್ನು ಅದರ ಎರಡರಷ್ಟು ತೆಗೆದುಕೊಂಡು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಉಪ್ಪು ಹಾಕಿ 5 ನಿಮಿಷ ಕುದಿಸಬೇಕು. ಈಗ ನೆನೆಸಿಟ್ಟಿರುವ ಅಕ್ಕಿಯನ್ನು ಇದಕ್ಕೆ ಹಾಕಿಕೊಂಡು ಒಮ್ಮೆ ಮಿಕ್ಸ್ ಮಾಡಿ. ನಂತರ ಚೆನ್ನಾಗಿ ಕುದಿಸಬೇಕು. ನೀರು ಕಡಿಮೆಯಾದಾಗ ಉರಿ ಸಣ್ಣದಾಗಿ ಮಾಡಿ ಮುಚ್ಚಳ ಮುಚ್ಚಿ 15 ನಿಮಿಷ ಬಿಡಬೇಕು.
ಬಳಿಕ ಒಲೆ ಆಫ್ ಮಾಡಿ, ಮುಚ್ಚಳ ತೆಗೆದು ಮಿಕ್ಸ್ ಮಾಡಿದ್ರೆ ನುಗ್ಗೆಕಾಯಿ ಬಿರಿಯಾನಿ ರೆಡಿ! ಇದರ ಜೊತೆಗೆ ಮೊಸರು ಬಜ್ಜಿ ಅಥವಾ ಕುರ್ಮಾ ಮಾಡಿಕೊಂಡು ಸವಿಯಬಹುದು.