ನಿಮಗೂ ಮನೆಯಲ್ಲಿ ನಿತ್ಯ ಒಂದೇ ರೀತಿಯ ದಾಲ್ ತಿಂದು ಬೋರ್ ಆದಾಗ ವಿಭಿನ್ನ ಶೈಲಿಯ ದಾಲ್ ಮಾಡಬೇಕು ಎಂದರೆ ಈ ದಾಲ್ ಮಾಡಬಹುದು. ನಾವು ಈ ಕೆಳಗೆ ಹೇಳಲಿರುವ ಶೈಲಿಯಲ್ಲಿ ದಾಲ್ ಮಾಡಿದರೆ ಮನೆಯಲ್ಲೇ ಡಾಬಾ ಶೈಲಿಯ ದಾಲ್ ಅನ್ನು ಜೀರಾ ರೈಸ್, ಚಪಾತಿ, ಪರೋಟ ಜೊತೆ ಸವಿಯಬಹುದು.
Advertisement
ಬೇಕಾಗುವ ಸಾಮಗ್ರಿಗಳು:
* ಕಡಲೇಬೇಳೆ- ಅರ್ಧ ಕಪ್
* ತೊಗರಿ ಬೇಳೆ ಅರ್ಧ ಕಪ್
* ಮಸೂರ್ ದಾಲ್ ಅರ್ಧ ಕಪ್
* ಹೆಸರು ಬೇಳೆ ಅರ್ಧ ಕಪ್
* ಉದ್ದಿನ ಬೇಳೆ- ಅರ್ಧ ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಅಡುಗೆ ಎಣ್ಣೆ – ಅರ್ಧ ಕಪ್
* ಜೀರಿಗೆ 1 ಚಮಚ
* ತುಪ್ಪ 1 ಚಮಚ
* ಒಣ ಮೆಣಸಿನಕಾಯಿ 2
* ಈರುಳ್ಳಿ-1
* ಬೆಳ್ಳುಳ್ಳಿ-1
* ಶುಂಠಿ
* ಹಸಿ ಮೆಣಸಿನಕಾಯಿ -2
* ಟೊಮೆಟೊ -2
* ಕಸೂರಿ ಮೇತಿ- ಅರ್ಧ ಚಮಚ
* ಮೆಣಸಿನ ಪುಡಿ -1 ಚಮಚ
* ಅರಿಶಿನ ಪುಡಿ – ಅರ್ಧ ಚಮಚ
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಚಮಚ ನಿಂಬೆ ಹಣ್ಣು- ಅರ್ಧ ಇದನ್ನೂ ಓದಿ: ಬಾಯಲ್ಲಿ ನೀರೂರಿಸುವ ದೊನ್ನೆ ಬಿರಿಯಾನಿ ಮನೆಯಲ್ಲಿ ಮಾಡಿ
Advertisement
Advertisement
ಮಾಡುವ ವಿಧಾನ:
* ಎಲ್ಲಾ ಬೇಳೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಮತ್ತು ಒಂದೆರಡು ಬಾರಿ ನೀರಿನಿಂದ ತೊಳೆದು ಅರ್ಧ ಗಂಟೆ ನೆನೆಸಿಡಿ.
* ಪ್ರೆಶರ್ ಕುಕ್ಕರ್‍ನಲ್ಲಿ ಬೇಳೆಗಳು, ನೀರು, ಅರಿಶಿನ ಪುಡಿ ಸೇರಿಸಿ ಮುಚ್ಚಳವಿಲ್ಲದೆ ಒಲೆಯ ಮೇಲೆ ಇಡಿ, ಮೊದಲ ಕುದಿಯ ನಂತರ ಮುಚ್ಚಳವನ್ನು ಹಾಕಿ. 3-5 ಸೀಟಿಗಳಿಗೆ ಬೇಯಿಸಿ.
Advertisement
* ಪ್ರೆಶರ್ ಕುಕ್ಕರ್ ತಣ್ಣಗಾಗಲು ಬಿಡಿ ನಂತರ ಬೇಯಿಸಿದ ದಾಲ್ ಅನ್ನು ಮ್ಯಾಶ್ ಮಾಡಿ.
* ಬಾಣಲೆ ಎಣ್ಣೆ ಹಾಕಿ ನಂತರ ಜೀರಿಗೆ, ಹಿಂಗು,ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸೇರಿಸಿ.
* ಮಿಶ್ರಣವನ್ನು ಒಂದೆರಡು ನಿಮಿಷ ಹುರಿದು ನಂತರ ಹಸಿ ಮೆಣಸಿನಕಾಯಿ, ಟೊಮೆಟೊ, ಕಸೂರಿ ಮೇತಿ ಸೇರಿಸಿ ಮತ್ತು ಸಂಪೂರ್ಣವಾಗಿ ಬೇಯಿಸಿ.
* ನಂತರ ಈ ಮಿಶ್ರಣಕ್ಕೆ ಬೇಯಿಸಿದ ದಾಲ್ ಸೇರಿಸಿ ಸ್ವಲ್ಪ ನೀರು ಹಾಕಿ.
* ಉಪ್ಪು ಸೇರಿಸಿ 10-12 ನಿಮಿಷಗಳ ಕಾಲ ಕುದಿಸಲು ಬಿಡಿ.
* ಈಗ ಬೇಯಿಸಿದ ದಾಲ್‍ಗೆ ನಿಂಬೆ ರಸ, ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಬಿಸಿಬಿಸಿ ದಾಲ್ ಸಿದ್ಧವಾಗುತ್ತದೆ.