ಬೆಳಗ್ಗಿನ ಉಪಹಾರಕ್ಕೆ ಏನು ಮಾಡುವುದು ಎಂದು ನೀವು ಯೋಚಿಸುತ್ತಿದ್ದಿರಾ? ಚಳಿ ಇರುವುದರಿಂದ ಬಿಸಿಯಾದ ಟೀ, ಕಾಫಿ ಜೊತೆಗೆ ಹೆಸರು ಬೇಳೆ ರೊಟ್ಟಿ ಮಾಡಿದರೆ ಸಖತ್ ರುಚಿಯಾಗಿರುತ್ತದೆ. ಈ ರೊಟ್ಟಿ ಎಷ್ಟು ಸುಲಭ ಅಷ್ಟೇ ರುಚಿಯಾಗಿದೆ. ಹೆಸರು ಬೇಳೆ ರೊಟ್ಟಿ ಮಾಡುವ ಸರಳ ವಿಧಾನ ಈ ಕೆಳಗಿನಂತಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ಹೆಸರು ಬೇಳೆ- 1 ಕಪ್
* ಅಕ್ಕಿ ಹಿಟ್ಟು- 2ಕಪ್
* ಮೆಣಸಿನ ಪುಡಿ- 1 ಚಮಚ
* ಪೆಪ್ಪರ್ ಪುಡಿ- 2 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
Advertisement
Advertisement
ಮಾಡುವ ವಿಧಾನ:
* ಒಂದು ಕಪ್ ಹೆಸರು ಬೇಳೆಯನ್ನು 1 ಗಂಟೆ ನೆನೆಹಾಕಿ. ನಂತರ ಅದನ್ನು ಮಿಕ್ಸ್ರ್ನಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ.
Advertisement
* ರುಬ್ಬಿದ ಮಿಶ್ರಣ, ಅಕ್ಕಿ ಹಿಟ್ಟನ್ನು ಹಾಕಿ ಕಲಸಿಕೊಳ್ಳಬೇಕು. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ
* ಈಗ ಆ ಮಿಶ್ರಣಕ್ಕೆ ನಿಮ್ಮ ರುಚಿಗೆ ತಕ್ಕಂತೆ ಉಪ್ಪು, ಮೆಣಸು, ಕೆಂಪು ಮೆಣಸಿನ ಪುಡಿ ಸೇರಿಸಿ ಮತ್ತೊಮ್ಮೆ ಚನ್ನಾಗಿ ಮಿಶ್ರಣ ಮಾಡಿದರೆ ಹಿಟ್ಟು ಸಿದ್ಧವಾಗುತ್ತದೆ.
* ಈಗ ಒಂದು ತವಾವನ್ನು ಬಿಸಿ ಮಾಡಲುಯ ಇಡಿ. ಸ್ವಲ್ಪ ಎಣ್ಣೆ ಹಾಕಿ ರೊಟ್ಟಿ ಹಿಟ್ಟನ್ನು ಹಾಕಿ ತಟ್ಟಿ ಬೇಯಿಸಿದರೆ gರುಚಿಯಾದ ರೊಟ್ಟಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ