ಬೆಳಗ್ಗಿನ ಉಪಹಾರಕ್ಕೆ ಏನು ಮಾಡುವುದು ಎಂದು ನೀವು ಯೋಚಿಸುತ್ತಿದ್ದಿರಾ? ಚಳಿ ಇರುವುದರಿಂದ ಬಿಸಿಯಾ ಟೀ, ಕಾಫಿ ಜೊತೆಗೆ ಸೌತೆಕಾಯಿ ರೊಟ್ಟಿ ಮಾಡಿದರೆ ಸಖತ್ ರುಚಿಯಾಗಿರುತ್ತದೆ. ಈ ರೊಟ್ಟಿ ಎಷ್ಟು ಸುಲಭ ಅಷ್ಟೇ ರುಚಿಯಾಗಿದೆ. ಸೌತೆಕಾಯಿ ರೊಟ್ಟಿ ಮಾಡುವ ಸರಳ ವಿಧಾನ ಈ ಕೆಳಗಿನಂತಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ಸೌತೆಕಾಯಿ-2
* ತೆಂಗಿನಕಾಯಿ ತುರಿ-ಅರ್ಧ ಕಪ್
* ರವೆ- ಅರ್ಧ ಕಪ್
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಹಸಿಮೆಣಸಿನಕಾಯಿ-1
* ಅಡುಗೆ ಎಣ್ಣೆ- ಅರ್ಧ ಕಪ್
* ರುಚಿಗೆ ತಕ್ಕಷ್ಟು ಉಪ್ಪು ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ
Advertisement
ಮಾಡುವ ವಿಧಾನ:
* ಮೊದಲು ಒಂದು ಪಾತ್ರೆಯಲ್ಲಿ ತುರಿದ ಸೌತೆಕಾಯಿ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು, ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ ಮತ್ತು ಸ್ವಲ್ಪ ಉಪ್ಪನ್ನು ಸೇರಿಸಿ, ಚೆನ್ನಾಗಿ ಕಲಸಿಕೊಳ್ಳಬೇಕು.
Advertisement
Advertisement
* ನಂತರ ಈ ಮಿಶ್ರಣಕ್ಕೆ ರವೆಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
* ಈ ಮಸಾಲೆಯನ್ನು ರೊಟ್ಟಿಯ ಹದಕ್ಕೆ ಕಲಸಿಕೊಳ್ಳಿ. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ
* ನಂತರ ರೊಟ್ಟಿಯ ಬಾಣಲೆಗೆ ಸ್ವಲ್ಪ ಅಡುಗೆ ಎಣ್ಣೆಯನ್ನು ಸವರಿ ತಯಾರಿಸಿಕೊಂಡಿರುವ ಹಿಟ್ಟನ್ನು ಒಂದು ಉಂಡೆಯನ್ನು ತೆಗೆದುಕೊಂಡು, ಮಸಾಲೆ ರೊಟ್ಟಿ ತಟ್ಟುವಂತೆ ತಟ್ಟಿ. ಅದರ ಮೆಲೆ ಸ್ವಲ್ಪ ಎಣ್ಣೆಯನ್ನು ಹಾಕಿ, ಚನ್ನಾಗಿ ಬೇಯಿಸಿದರೆ ಸೌತೆಕಾಯಿ ರೊಟ್ಟಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಬಿಸಿ ಬಿಸಿಯಾದ ಮಸಾಲೆ ರೊಟ್ಟಿ ಮಾಡುವ ವಿಧಾನ