ಬಿಟ್ರೋಟ್ ದೋಸೆ, ರಾಗಿ ದೋಸೆ, ಗೋಧಿ ದೋಸೆ ಎಂದು ನೀವು ತಿಂದಿರುತ್ತೀರ ಆದರೆ ಪ್ರತಿಸಲ, ಅದೇ ಉದ್ದಿನ ದೋಸೆ ತಿಂದು ಬೋರಾಗಿದ್ರೆ ಈ ತೆಂಗಿನ ಕಾಯಿ ದೋಸೆ ಟ್ರೈ ಮಾಡಿ. ಮಕ್ಕಳಿಂದ ಹಿಡಿದು, ನಿಮ್ಮ ಮನೆಯಲ್ಲಿ ಪ್ರತಿಯೊಬ್ಬರೂ ಇಷ್ಟಪಟ್ಟು ತಿನ್ನುತ್ತಾರೆ. ಇದರ ಹಿಟ್ಟು ಹದ ಬರಬೇಕಾಗಿರೋದ್ರಿಂದ ರಾತ್ರಿ ರುಬ್ಬಿಟ್ಟು ಬೆಳಗ್ಗೆ ಮಾಡಿಕೊಳ್ಳುವುದು ಉತ್ತಮ ಆಯ್ಕೆಯಾಗಿದೆ. ಇದನ್ನೂ ಓದಿ: ಹಬ್ಬಕ್ಕೆ ಮಾಡಿ ಗೋಧಿ ಹಿಟ್ಟಿನ ಲಡ್ಡು
Advertisement
ಬೇಕಾಗುವ ಸಾಮಗ್ರಿಗಳು:
* ಅಕ್ಕಿ- 1ಕಪ್
* ಮೆಂತ್ಯೆ- 2 ಚಮಚ
* ತೆಂಗಿನಕಾಯಿ – 1 ಕಪ್
* ಅವಲಕ್ಕಿ – ಸ್ವಲ್ಪ
Advertisement
ಮಾಡುವ ವಿಧಾನ:
* ಮೊದಲನೆಯದಾಗಿ, ಒಂದು ಬೌಲ್‍ಗೆ ಅಕ್ಕಿ ಮತ್ತು ಮೆಂತ್ಯೆ ಹಾಕಿ 4 ಗಂಟೆಗಳ ಕಾಲ ನೆನೆಸಿಟ್ಟಿರಬೇಕು.
* ನಂತರ, ನೆನಸಿಟ್ಟ ಅಕ್ಕಿ, ಮೆಂತೆ, ತೆಂಗಿನಕಾಯಿ ಮಿಕ್ಸಿ ಜಾರ್‍ಗೆ ಹಾಕಿ ಸ್ವಲ್ಪ ನೀರು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ.
Advertisement
Advertisement
* ರುಬ್ಬಿಕೊಂಡ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ 8 ಗಂಟೆಗಳ ಕಾಲ ಮುಚ್ಚಿಡಿ. ( ರಾತ್ರಿ ರುಬ್ಬಿಟ್ಟು ಬೆಳಗ್ಗೆ ಮಾಡುವುದು ಉತ್ತಮ)
* ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ. ಇದನ್ನೂ ಓದಿ: ಭಾನುವಾರದ ಬಾಡೂಟಕ್ಕೆ ಫಟಾಫಟ್ ಮಾಡಿ ಸಿಗಡಿ ಫ್ರೈ
* ತವಾ ಬಿಸಿಗಿಟ್ಟು, ಅದು ಬಿಸಿಯಾದ ನಂತರ, ದೋಸೆ ಹಾಕಿ ಚೆನ್ನಾಗಿ ಬೇಯಿಸಿದರೆ ಬಿಸಿ ಬಿಸಿಯಾದ ತೆಂಗಿನ ಕಾಯಿ ದೋಸೆ ಅವಿಯಲು ಸಿದ್ಧವಾಗುತ್ತದೆ.