ಬೇಸಿಗೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ತಂಪಾದ ನೀರು, ಪಾನೀಯ ಹಾಗೂ ಇನ್ನಿತರ ಕೋಲ್ಡ್ ಜ್ಯೂಸ್ ಗಳನ್ನು ಸೇವಿಸಲು ಇಷ್ಟಪಡುತ್ತಾರೆ. ಹೆಚ್ಚಿನ ಜನರು ಹೊರಗಿನ ಅಂಗಡಿಗಳಲ್ಲಿ ಮಾಡುವ ತಂಪು ಪಾನೀಯಗಳನ್ನು ಸೇವಿಸುತ್ತಾರೆ. ಆದರೆ ಕೆಲವು ಜ್ಯೂಸ್ ಹಾಗೂ ಪಾನೀಯಗಳನ್ನು ಬಣ್ಣದ ಮಿಶ್ರಣ ಹಾಗೂ ಇನ್ನಿತರ ಕೆಮಿಕಲ್ ಗಳನ್ನು ಬಳಸಿ ಮಾಡಿಕೊಡುತ್ತಾರೆ. ಹೀಗಿರುವಾಗ ಈ ಬೇಸಿಗೆಗೆ ತಂಪಾದ ನಿಂಬೆಹಣ್ಣಿನ ಮಜಿಟೋವನ್ನು (Lime Mojito) ಮನೆಯಲ್ಲಿ ಸುಲಭವಾಗಿ ಮಾಡಬಹುದು.
ಬೇಕಾಗುವ ಸಾಮಗ್ರಿಗಳು :
ಮಂಜುಗಡ್ಡೆ (Ice Cube)
ನಿಂಬೆಹಣ್ಣು
ಮೆಣಸಿನಕಾಯಿ
ಉಪ್ಪು
ಕರಿಮೆಣಸಿನ ಪುಡಿ
ಪುದಿನಾ
ಮಾಡುವ ವಿಧಾನ :
ಮೊದಲಿಗೆ ಒಂದು ಮಿಕ್ಸಿ ಜಾರ್ ಗೆ ಮಂಜುಗಡ್ಡೆಯನ್ನು ಹಾಕಿ ಒಂದು ಬಾರಿ ರುಬ್ಬಿಕೊಳ್ಳಿ. ಅದಕ್ಕೆ ಅಗತ್ಯಕ್ಕೆ ತಕ್ಕಷ್ಟು ನಿಂಬೆರಸ, ಮೆಣಸಿನ ಕಾಯಿ ಹಾಗೂ ಪುದಿನಾ, ಉಪ್ಪು, ಕರಿಮೆಣಸಿನ ಪುಡಿ ಹಾಕಿ ರುಬ್ಬಿಕೊಳ್ಳಿ. ಕೊನೆಗೆ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿಕೊಂಡು ಸರಿಯಾಗಿ ರುಬಿಕೊಳ್ಳಿ.
ಬಳಿಕ ಒಂದು ತಟ್ಟೆಗೆ ಉಪ್ಪು, ಕೆಂಪು ಮೆಣಸಿನ ಪುಡಿ ಕಲಸಿಟ್ಟು, ಒಂದು ಗಾಜಿನ ಲೋಟದ ಬಾಯಿಗೆ ಉಪ್ಪು ಮತ್ತು ಕೆಂಪು ಮೆಣಸಿನ ಪುಡಿಯ ಮಿಶ್ರಣ ಮೆತ್ತಿಕೊಳ್ಳುವ ಹಾಗೆ ಹೊರಳಾಡಿಸಿ. ಬಳಿಕ ನೀವು ತಯಾರಿಸಿದ್ದ ಪಾನೀಯವನ್ನು ಗಾಜಿನ ಲೋಟಕ್ಕೆ ಹಾಕಿ, ಕೊನೆಗೆ ತಂಪಾದ ನಿಂಬೆ ಹಣ್ಣಿನ ಚಿಲ್ಡ್ ಮಜಿಟೋ (Chilled Mojito) ಸವಿಯಲು ಸಿದ್ಧವಾಗಿರುತ್ತದೆ.