ನಿಮ್ಮ ಮನೆಯವರಿಗೂ ಸದಾ ದೋಸೆಯೊಂದಿಗೆ ಕಾಯಿಚಟ್ನಿಯನ್ನೇ ತಿಂದು ಬೇಸರವಾಗಿರಬಹುದು, ಆದರೆ ಯಾರೂ ಬಾಯಿಬಿಟ್ಟು ಹೇಳುವುದಿಲ್ಲ. ಆದರೆ ಇಂದು ನಿಮ್ಮ ಮನೆಯವರು ಕೇಳುವ ಮುನ್ನವೇ ನೀವು ಕಡಲೆಬೇಳೆ ಚಟ್ನಿ ಮಾಡಿ. ಸರಳವಾಗಿ, ಫಟಾಫಟ್ ತಯಾರಿಸುವ ಅಡುಗೆ ಎಂದರೆ ಹಲವರಿಗೆ ಇಷ್ಟವಾಗುತ್ತದೆ. ಇನ್ನೇಕೆ ತಡ..? ಮನೆಯವರ ಮಚ್ಚುಗೆ ಪಡೆಯಲು ಈ ಸ್ವಾದಿಷ್ಟ ಚಟ್ನಿಯನ್ನು ತಯಾರಿಸಿ.
Advertisement
ಬೇಕಾಗುವ ಸಾಮಗ್ರಿಗಳು:
* ಕಡಲೆಬೇಳೆ – ಅರ್ಧ ಕಪ್
* ಕಾಯಿತುರಿ-ಅರ್ಧ ಕಪ್
* ಕೆಂಪು ಮೆಣಸಿನ ಕಾಯಿ -ಮೂರು
* ಹುಣಸೆ ಹುಣ್ಣು – ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಅಡುಗೆಎಣ್ಣೆ- 4 ಚಮಚ
* ಸಾಸಿವೆ – ಒಂದು ಚಮಚ
* ಉದ್ದಿನ ಬೇಳೆ – 2 ಚಮಚ
* ಈರುಳ್ಳಿ (ಸಾಂಬಾರ್ ಈರುಳ್ಳಿ) – ಐದು
* ಕರೀಬೇವು- ಸ್ವಲ್ಪ ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ
Advertisement
ಮಾಡುವ ವಿಧಾನ:
* ಒಂದು ಪಾತ್ರೆಯಲ್ಲಿ ಅಡುಗೆಎಣ್ಣೆ ಹಾಕಿ ಬಿಸಿಮಾಡಿ ಕೆಂಪುಮೆಣಸು, ಕಡಲೆ ಬೇಳೆಯನ್ನು ಚಿಕ್ಕ ಉರಿಯಲ್ಲಿ ಕೊಂಚ ಕಾಲ ಹುರಿಯಿರಿ. ಬಳಿಕ ಮೆಣಸನ್ನು ಪಕ್ಕಕ್ಕಿಡಿ.
* ಈಗ ಉಳಿದ ಎಣ್ಣೆಯನ್ನು ಇದೇ ಪಾತ್ರೆಯಲ್ಲಿ ಹಾಕಿ ಸಾಸಿವೆ, ಉದ್ದಿನ ಬೇಳೆ, ಈರುಳ್ಳಿ ಮತ್ತು ಕರೀಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.
Advertisement
Advertisement
* ಫ್ರೈ ಮಾಡಿಕೊಂಡ ಪದಾರ್ಥಗಳನ್ನು ಮಿಕ್ಸಿಯ ಜಾರ್‍ನೊಳಗೆ ಹಾಕಿ ರುಬ್ಬಿಕೊಳ್ಳಬೇಕು.
* ಕೊತ್ತಂಬರಿ ಸೊಪ್ಪು, ಸಾಸಿವೆ, ಈರುಳ್ಳಿ, ಕೆಂಪು ಮೆಣಸಿನ ಕಾಯಿ ಹಾಕಿ ಒಗ್ಗರಣೆ ತಯಾರಿಸಿಕೊಂಡು ರುಬ್ಬಿದ ಮಿಶ್ರಣಕ್ಕೆ ಹಾಕಿದರೆ ಸ್ವಾದಿಷ್ಟ ಚಟ್ನಿ ತಯಾರಾಗುತ್ತದೆ.