ನಾಲಿಗೆಯ ಹಸಿವನ್ನು ತಣಿಸುವ ವಿವಿಧ ಖಾದ್ಯಗಳನ್ನು ಸವಿಯಲು ನಾಲಿಗೆ ಬಯಸುತ್ತದೆ. ಬಿಸಿ ಬಿಸಿಯಾದ ವಿಭಿನ್ನ ರುಚಿಯನ್ನು ಹೊಂದಿರುವ ಸೂಪ್‌ನ್ನು ಸೇವಿಸಬೇಕು ಎನಿಸುತ್ತಿದೆಯಾ. ಹಾಗಾದರೆ ಮನೆಯಲ್ಲಿರುವ ಸಾಮಗ್ರಿಗಳಲ್ಲಿ ಸೂಪರ್ ಆಗಿರುವ ಟೊಮೆಟೊ ಸೂಪ್‌ನ್ನು ಮಾಡಿ.
Advertisement
ಬೇಕಾಗುವ ಸಾಮಗ್ರಿಗಳು:
* ಬೆಣ್ಣೆ- 2 ಚಮಚ
* ಈರುಳ್ಳಿ – 1
* ಬೆಳ್ಳುಳ್ಳಿ- 1
* ಪಲಾವ್ ಎಲೆ- 1
* ಟೊಮೆಟೊ -3
* ಕ್ಯಾರೆಟ್- 1
* ರುಚಿಗೆ ತಕ್ಕಷ್ಟು ಉಪ್ಪು
* ಸಕ್ಕರೆ- 1 ಚಮಚ
* ಪೆಪ್ಪರ್ ಪೌಡರ್ 1ಚಮಚ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ, ಬೆಣ್ಣೆ ಬಿಸಿ ಮಾಡಿ, ಈರುಳ್ಳಿ, ಬೆಳ್ಳುಳ್ಳಿ, ಎಲೆ ಸೇರಿಸಿ ಸ್ವಲ್ಪ ಬೇಯಿಸಿಕೊಳ್ಳಿ.
* ನಂತರ ಟೊಮೆಟೊ, ಕ್ಯಾರೆಟ್ ಉಪ್ಪು ಸೇರಿಸಿ, ಟೊಮೆಟೊ ಮೃದುಬಾಗಿ ಬಣ್ಣ ಬದಲಾಯಿಸುವ ತನಕ ಬೇಯಿಸಿಕೊಳ್ಳಬೇಕು. ನಂತರ ಮೆದುವಾದ ಪೇಸ್ಟ್‌ಗೆ ರುಬ್ಬಿಕೊಳ್ಳಿ.
Advertisement
* ಈಗ ಜರಡಿ ಇಟ್ಟು ಟೊಮೆಟೊ ಪೇಸ್ಟ್ ಅನ್ನು ಸೋಸಿರಿ.
* ನೀರು, ಟೊಮೆಟೊ ಮಿಶ್ರಣ, ಸಕ್ಕರೆ, ಪೆಪ್ಪರ್ ಪೌಡರ್, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿದರೆ ರುಚಿಯಾದ ಸೂಪ್ ಸವಿಯಲು ಸಿದ್ಧವಾಗುತ್ತದೆ.