ನಾವು ಹೊಟೇಲ್‍ನಲ್ಲಿ ಸಿಗುವ ಆಹಾರವನ್ನು ಹೆಚ್ಚಾಗಿ ಇಷ್ಟ ಪಟ್ಟು ಸವಿಯುತ್ತೇವೆ. ಆದರೆ ಮನೆಯಲ್ಲಿಯೇ ಕೈಯಾರೇ ಮಾಡಿ ತಿನ್ನುವ ಮಜವೇ ಬೇರೆಯಾಗಿದೆ. ಹೀಗಾಗಿ ನಾವು ಮನೆಯಲ್ಲಿಯೇ ಇರುವ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ರುಚಿಯಾದ ಆಹಾರವನ್ನು ತಯಾರಿಸಬಹುದಾಗಿದೆ. ಬನ್ನಿ ನಾವು ಸರಳವಾಗಿ ಟೊಮೆಟೊ ರೈಸ್ ಬಾತ್ ಮಾಡುವ ವಿಧಾನವನ್ನು ಬೇಕಾಗುವ ಸಾಮಗ್ರಿಗಳ ಪಟ್ಟಿ ಜೊತೆಯಲ್ಲಿ ಮಾಡುವ ವಿಧಾನವನ್ನು ಈಕೆಳಗಿನಂತೆ ವಿವರಿಸಿದ್ದೇವೆ.
Advertisement
ಬೇಕಾಗುವ ಸಾಮಗ್ರಿಗಳು:
* ಅಕ್ಕಿ- ಎರಡು ಕಪ್
* ಈರುಳ್ಳಿ – ಒ0ದು
* ಶು0ಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ
* ಟೊಮೆಟೊ – ಮೂರು
* ದೊಣ್ಣೆಮೆಣಸು – ಒ0ದು
* ಪನ್ನೀರ್ – ಅರ್ಧ ಕಪ್
* ಹಸಿರು ಬಟಾಣಿಕಾಳು – ಅರ್ಧ ಕಪ್
* ಹಸಿಮೆಣಸಿನಕಾಯಿ – ಎರಡು
* ಟೊಮೇಟೊ ಕೆಚ್ ಅಪ್ – ಕಾಲು ಕಪ್
* ಮೆಣಸಿನ ಪುಡಿ – ಒ0ದು ಟೇಬಲ್ ಚಮಚ
* ಅರಿಶಿನ ಪುಡಿ – ಅರ್ಧ ಟೇಬಲ್ ಚಮಚ
* ಪಾವ್ ಬಾಜಿ ಮಸಾಲಾ – 2 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಅಡುಗೆ ಎಣ್ಣೆ – 2 ಚಮಚ
* ಕೊತ್ತ0ಬರಿ ಸೊಪ್ಪು – ಸ್ವಲ್ಪ
Advertisement
Advertisement
ಮಾಡುವ ವಿಧಾನ:
* ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿರಿ ಶು0ಠಿ,ಬೆಳ್ಳುಳ್ಳಿ, ಈರುಳ್ಳಿ ಹಾಕಿ ಹೊ0ಬಣ್ಣ ಮಿಶ್ರಿಣಕ್ಕೆ ಹುರಿಯಿರಿ.
* ಟೊಮೆಟೊ, ಅರಿಶಿಣಪುಡಿ, ಮೆಣಸಿನ ಪುಡಿ, ಪಾವ್ ಬಾಜಿ ಮಸಾಲಾ, ಟೊಮೆಟೊ ಕೆಚ್ ಅಪ್ ಅನ್ನು ಬೆರೆಸಿ ಮೂರರಿಂದ ನಾಲ್ಕು ನಿಮಿಷಗಳವರೆಗೆ ಬೇಯಿಸುವುದನ್ನು ಮುಂದುವರೆಸಿರಿ. ಇದನ್ನೂ ಓದಿ: ಫಟಾಫಟ್ ಅಂತ ಮಾಡಿ ಬಿಸಿ ಬಿಸಿಯಾದ ಅನ್ನದ ಪಕೋಡ
Advertisement
* ಇದಾದ ಬಳಿಕ ದೊಣ್ಣೆಮೆಣಸು, ಕಾಯಿಮೆಣಸು, ಹಸಿರು ಬಟಾಣಿಕಾಳು, ಹಾಗೂ ಉಪ್ಪನ್ನು ಸೇರಿಸಿ ನಾಲ್ಕರಿಂದ ಐದು ನಿಮಿಷಗಳವರೆಗೆ ಬೇಯಿಸುವುದನ್ನು ಮುಂದುವರೆಸಿರಿ.
*ಈಗ ಪನೀರ್ ತುಣುಕುಗಳನ್ನು ಸೇರಿಸಿ, ಅತ್ಯಂತ ಹಗುರವಾಗಿ ಅವುಗಳನ್ನು ಹುರಿಯಿರಿ. ಇದಕ್ಕೆ ಒ0ದು ಕಪ್ ನಷ್ಟು ನೀರನ್ನು ಸೇರಿಸಿ ಹಾಗೂ ಮಧ್ಯಮ ಉರಿಯಲ್ಲಿ ಎಲ್ಲಾ ತರಕಾರಿಗಳನ್ನು ಮೂರರಿ0ದ ನಾಲ್ಕು ನಿಮಿಷಗಳವರೆಗೆ ಬೇಯಿಸಿದರೆ ರುಚಿಯಾದ ಟೊಮೆಟೊ ರೈಸ್ ಬಾತ್ ಸವಿಯಲು ಸಿದ್ಧವಾಗುತ್ತದೆ.