ಊಟಕ್ಕೆ ಏನನ್ನು ಮಾಡಬೇಕು ಎನ್ನುವ ಯೋಚನೆ ಇದ್ದೆ ಇರುತ್ತದೆ. ಅನ್ನ ಮಾಡಿ ಟೊಮೆಟೋ ಪಪ್ಪು ಮಾಡಿ ಸಖತ್ ರುಚಿ ಮತ್ತು ಆರೋಗ್ಯಕ್ಕೂ ಒಳ್ಳೆಯದಾಗಿದೆ. ಟೊಮೆಟೋ ಪಪ್ಪು ಮಾಡುವುದು ಸುಲಭ ಮತ್ತು ಸರಳವಾಗಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ತೊಗರಿ ಬೇಳೆ- ಅರ್ಧ ಕಪ್
* ಟೊಮೆಟೊ- 3
* ಹುಣಸೆಹಣ್ಣು- ಸ್ವಲ್ಪ
* ಈರುಳ್ಳಿ- 1
* ಅರಿಶಿಣ- ಸ್ವಲ್ಪ
* ಕೆಂಪು ಮೆಣಸಿನ ಪುಡಿ- 1 ಚಮಚ
* ಮೆಣಸಿನಕಾಯಿ- 2
* ಅಡುಗೆ ಎಣ್ಣೆ- 2 ಚಮಚ
* ಬೆಳ್ಳುಳ್ಳಿ- 2
* ಸಾಸಿವೆ- 1 ಚಮಚ
* ಉದ್ದಿನ ಬೇಳೆ- 2ಚಮಚ
* ಜೀರಿಗೆ- 1
* ಕೆಂಪು ಮೆಣಸಿನಕಾಯಿ- 2
* ಕರಿಬೇವಿನ ಎಲೆ- ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
* ಕೊತ್ತಂಬರಿ ಸೊಪ್ಪು- ಸ್ವಲ್ಪ
Advertisement
Advertisement
ಮಾಡುವ ವಿಧಾನ:
* ಕುಕ್ಕರ್ನಲ್ಲಿ ತೊಗರಿ ಬೇಳೆ, ಟೊಮೆಟೋ, ಹುಣಸೆಹಣ್ಣು, ಈರುಳ್ಳಿ, ಅರಿಶಿಣ, ಮೆಣಸಿನ ಪುಡಿ, ಮೆಣಸಿನಕಾಯಿ, ಅಡುಗೆ ಎಣ್ಣೆ ಮತ್ತು 3 ಕಪ್ ನೀರು ಸೇರಿಸಿ ಬೇಯಿಸಿಕೊಳ್ಳಬೇಕು. ಇದನ್ನೂ ಓದಿ: ಕ್ಯಾಪ್ಸಿಕಂ ಚಟ್ನಿ ಮಾಡಿ ಅಕ್ಕಿ ರೊಟ್ಟಿ ಜೊತೆಗೆ ಸೂಪರ್
Advertisement
* ನಂತರ ಬಾಣೆಲೆಗೆ ಅಡುಗೆ ಎಣ್ಣೆ, ಬೆಳ್ಳುಳ್ಳಿ, ಸಾಸಿವೆ, ಉದ್ದಿನ ಬೇಳೆ, ಜೀರಿಗೆ, ಒಣಗಿದ ಕೆಂಪು ಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ.
* ನಂತರ ಬೇಯಿಸಿದ ಟೊಮೆಟೊ ದಾಲ್ ಮತ್ತು ಉಪ್ಪನ್ನು ಸೇರಿಸಿ. ಇದನ್ನೂ ಓದಿ: ಪನೀರ್ ಭುರ್ಜಿ ಮಾಡುವುದು ಹೇಗೆ ಗೊತ್ತಾ?
* ನಂತರ ಅಗತ್ಯವಿದ್ದಷ್ಟು ನೀರು ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಕುದಿಸಿದರೆ ಪಪ್ಪುವನ್ನು ಸವಿಯಲು ಸಿದ್ಧವಾಗುತ್ತದೆ.